More

    ಪ್ರಯಾಣ ಮಾಡುವಾಗ ವಾಂತಿಯಾಗುತ್ತಿದ್ಯಾ?; ಈ ಸಲಹೆಗಳನ್ನು ಅನುಸರಿಸಿ…

    ಬೆಂಗಳೂರು: ಸಾಮಾನ್ಯವಾಗಿ ಎಲ್ಲರಿಗೂ ಟ್ರಾವೆಲ್ ಮಾಡೋದು ಎಂದರೆ ತುಂಬಾನೆ ಇಷ್ಟವಿರುತ್ತದೆ. ಕೆಲವರಿಗೆ ಪ್ರಯಾಣ ಮಾಡುವುದು ಇಷ್ಟವಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ವಾಕರಿಕೆ, ತಲೆತಿರುಗುವಿಕೆ, ಆಲಸ್ಯ, ಹೊಟ್ಟೆ ಉರಿ, ಚಲನೆಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾರಣದಿಂದಾಗಿ ಅವರು ಪ್ರಯಾಣಿಸಲು ಇಷ್ಟಪಡುವುದಿಲ್ಲ. ಈ ಭಯದಿಂದಲೇ ಏನನ್ನೂ ತಿನ್ನದೆ ಓಡಾಡುತ್ತಾರೆ. ಇಂತಹ ಸಮಸ್ಯೆಗಳನ್ನು ಕೆಲವು ಮನೆ ಮದ್ದುಗಳಿವೆ…

    1)  ನೀವು ಪ್ರಯಾಣ ಮಾಡುವಾಗ ಶುಂಠಿಯಿಂದ ಮಾಡಿರುವ ಮಿಠಾಯಿಗಳನ್ನು ತಿನ್ನುತ್ತಲೇ ಇರಿ. ಇದಲ್ಲದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

    2) ಸೋಂಪು ತಿನ್ನುವುದರಿಂದ ವಾಕರಿಕೆ ಮತ್ತು ವಾಂತಿಯ ಲಕ್ಷಣಗಳು ತಪ್ಪಿಸಬಹುದು.

    3) ಒಂದು ವೇಳೆ ಊಟ ಮಾಡಿದ ಬಳಿಕ ಪ್ರಯಾಣ ಮಾಡುವುದಾದರೆ ಒಂದು ಲೋಟ ಹಸಿಶುಂಠಿಯ ಟೀ ಕುಡಿದು ಹೊರಡಬೇಕು. ಇದು ಜೀರ್ಣಕ್ರಿಯೆಗೂ ಉತ್ತಮವಾಗಿದೆ.

    4) ಪ್ರಯಾಣದ ಅವಧಿಯಲ್ಲಿ ವಾಕರಿಕೆ ಉಂಟಾದರೆ ಏಲಕ್ಕಿಯೊಂದನ್ನು ಬಾಯಿಗೆ ಹಾಕಿ ಜಗಿಯಲು ಪ್ರಾರಂಭಿಸಬೇಕು.

     5) ಆಹಾರ ತಜ್ಞರ ಪ್ರಕಾರ, ಪ್ರಯಾಣದಲ್ಲಿ ತಲೆತಿರುಗುವಿಕೆ ಮತ್ತು ವಾಕರಿಕೆ ತೊಂದರೆ ಇದ್ದರೆ, ಪುದೀನಾ ಸಹಾಯವನ್ನು ತೆಗೆದುಕೊಳ್ಳಿ. ಪುದೀನಾ ಶರಬತ್ ಅಥವಾ ಪಾನಕವನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ. 

    6) ಪ್ರಯಾಣ ಮಾಡುವಾಗ ವಾಕರಿಕೆ ಮತ್ತು ವಾಂತಿಯ ಸಂದರ್ಭದಲ್ಲಿ, ನಿಂಬೆಯನ್ನು ನೀರಿಗೆ ಹಿಂಡಿ ಅದಕ್ಕೆ ಉಪ್ಪನ್ನು ಸೇರಿಸಿ ಸೇವಿಸಬಹುದು. ಪ್ರವಾಸಕ್ಕೆ ಹೋಗುವ ಮುನ್ನ ನಿಂಬೆ, ಉಪ್ಪು ಮತ್ತು ನೀರನ್ನು ನಿಮ್ಮೊಂದಿಗೆ ಕೊಂಡೊಯ್ಯಲು ಮರೆಯಬೇಡಿ.

    ಗಮನಿಸಿ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts