More

    ಹೊಸ ವರ್ಷಕ್ಕೆ ಮದ್ಯ ಕಿಕ್: ಎರಡು ದಿನದಲ್ಲಿ 6.40 ಲಕ್ಷ ಬಾಕ್ಸ್ ಐಎಂಎಲ್ ಸೇಲ್

    ಬೆಂಗಳೂರು: ಹೊಸ ವರ್ಷಕ್ಕೆ ಮದ್ಯದ ಕಿಕ್ ಜೋರಾಗಿದೆ. ಎರಡು ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ಹರಿದುಬಂದಿದೆ. ನಗರ ಹಾಗೂ ಗ್ರಾಮೀಣ ಭಾಗದ ಮೂಲೆಯಲ್ಲಿ ಮೂಲೆಯಲ್ಲಿ ಜನರು ಮದ್ಯದ ನಶೆಯ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.

    2023ರ ಡಿ.30ರಂದು 3.32 ಲಕ್ಷ ಬಾಕ್ಸ್ ಐಎಂಎಲ್(ಇಂಡಿಯನ್ ಮೇಡ್ ಲಿಕ್ಕರ್), ಡಿ.31 ರಂದು 3.08 ಲಕ್ಷ ಬಾಕ್ಸ್ ಐಎಂಎಲ್ ಮಾರಾಟವಾಗಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಅಂದಾಜು 500 ಕೋಟಿ ರೂ.ಅಧಿಕ ಆದಾಯ ಹರಿದು ಬಂದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮದ್ಯ ಮಾರಾಟದಲ್ಲಿ ಶೇ.2.77 ಏರಿಕೆಯಾಗಿದೆ. 2022ರ ಡಿ.30ರಂದು 3 ಲಕ್ಷ ಬಾಕ್ಸ್ ಐಎಂಎಲ್ , ಡಿ.31ರಂದು 2.60 ಲಕ್ಷ ಬಾಕ್ಸ್ ಐಎಂಎಲ್ ಮಾರಾಟವಾಗಿತ್ತು. ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರು ಹೊಸ ವರ್ಷ ಸ್ವಾಗತಕ್ಕೆ ವಿಶೇಷ ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಮದ್ಯದಂಗಡಿಗಳನ್ನು ತರಹೇವಾರಿ ವಿನ್ಯಾಸ ಮಾಡಿದ್ದರು. ಸಾಕಷ್ಟು ಪ್ರಮಾಣದಲ್ಲಿ ಮದ್ಯ ಮತ್ತು ಬಿಯರ್ ದಾಸ್ತಾನು ಮಾಡಿಕೊಂಡು ಸೇಲ್ ಮಾಡಿದ್ದರು. ಮದ್ಯ ವ್ಯಾಪಾರದಿಂದ ಮಾಲೀಕರಂತೂ ಪುಲ್ ಖುಷಿಯಾಗಿದ್ದಾರೆ.

    ರಾಜ್ಯದಲ್ಲಿ ಸದ್ಯ 12,614 ಮದ್ಯದಂಗಡಿಗಳಿವೆ. ರಾಜ್ಯದ ಇತರೆ ಜಿಲ್ಲೆಗಳಕ್ಕಿಂತ ಬೆಂಗಳೂರಲ್ಲೇ ಅತಿ ಹೆಚ್ಚು ಶೇ.45 ಮದ್ಯದಂಗಡಿಗಳಿವೆ. 3,988 ವೈನ್‌ಶಾಪ್(ಸಿಎಲ್2), 279 ಕ್ಲಬ್ (ಸಿಎಲ್4), 78 ಸ್ಟಾರ್ ಹೋಟೆಲ್ ( ಸಿಎಲ್6ಎ), 2,382 ಹೋಟೆಲ್ ಮತ್ತು ವಸತಿ ಗೃಹ, 68 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್8), 3,634 ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9), 1,041 ಎಂಎಸ್‌ಐಎಲ್ (ಸಿಎಲ್11ಸಿ), 745 ಆರ್‌ವಿಬಿ ಸೇರಿ ಒಟ್ಟಾರೆ 12,614 ಮದ್ಯದಂಗಡಿಗಳಿವೆ.

    ಮಾಧ್ಯಮಗಳಿಗೆ ಡಿವೋರ್ಸ್ ಕೊಡೋಕೆ ಆಗಲ್ಲ, ಸಂಸಾರ ಮಾಡಲೇಬೇಕೆಂದ ಡಿಕೆಶಿ

    ಸಾಂದರ್ಭಿಕ ಪರವಾನಗಿ ನೀಡಿಕೆ: ಹೊಸ ವರ್ಷ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಸಾಂದರ್ಭಿಕ ( ಒಂದು ದಿನಕ್ಕೆ ಸೀಮಿತ) ಪರವಾನಗಿ ನೀಡಲಾಗಿತ್ತು. ಈ ವರ್ಷ ಪರವಾನಗಿಗಾಗಿ ಸಾವಿರಾರು ಅರ್ಜಿಗಳು ಅಬಕಾರಿ ಇಲಾಖೆ ಸಲ್ಲಿಕೆಯಾಗಿತ್ತು. ಹೊಸ ವರ್ಷ ಸಂದರ್ಭದಲ್ಲಿ ಹೆಚ್ಚಿನ ಮದ್ಯವಹಿವಾಟು ನಡೆಯುವ ಹಿನ್ನೆಲೆಯಲ್ಲಿ ಕೆಲವರು ಇಲಾಖೆಗೆ ಅರ್ಜಿ ಸಲ್ಲಿಸಿ ಸಾಂದರ್ಭಿಕ ಪರವಾನಗಿ ಪಡೆದು ಮದ್ಯ ಮಾರಾಟ ಮಾಡಿದ್ದಾರೆ. ಇದರಿಂದ ಅಂದಾಜು 10 ಕೋಟಿ ರೂ.ಆದಾಯ ಬಂದಿದೆ.

    ಹಳ್ಳಿ ಹಳ್ಳಿಗಳಲ್ಲೂ ಮದ್ಯ ಘಮಲು: ಹೊಸ ವರ್ಷ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಹೋಟೆಲ್ ಹಾಗೂ ಗಿರಾಣಿ ಅಂಗಡಿಗಳಲ್ಲಿ ಕಾನೂನುಬಾಹಿರವಾಗಿ ಸಾಕಷ್ಟು ಪ್ರಮಾಣದಲ್ಲಿ ಮದ್ಯ ದಾಸ್ತಾನು ಮಾಡಿಕೊಂಡಿದ್ದಾರೆ. ಒಬ್ಬೊಬ್ಬ ಅಂಗಡಿಯವರು ಅಂದಾಜು ಲಕ್ಷಾಂತರ ರೂ.ಮೌಲ್ಯದ ಮದ್ಯವನ್ನು ಅಕ್ರಮವಾಗಿ ಖರೀದಿಸಿ ದಾಸ್ತಾನು ಇಟ್ಟುಕೊಂಡಿದ್ದು, ಪ್ರತಿ ಬಾಟಲ್‌ಗೆ ನಿಗದಿಪಡಿಸಿದ ದರಗಿಂತ ಸರಾಸರಿ 20-30 ರೂ. ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts