More

    ನೀತಿ ಸಂಹಿತೆ ಉಲ್ಲಂಘನೆ; ಒಂದೇ ದಿನ 7.45 ಕೋಟಿ ಮೌಲ್ಯದ ಮದ್ಯ ವಶ

    ಬೆಂಗಳೂರು: ಚುನಾವಣಾ ಅಕ್ರಮದಲ್ಲಿ ಮದ್ಯದ್ದೇ ಸಿಂಹಪಾಲು. ಶನಿವಾರ ಒಂದೇ ದಿನ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ 7.45 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.

    ಬೆಂಗಳೂರು ಲೋಕಸಭಾ ಕ್ಷೇತ್ರದ ಬೀದರಹಳ್ಳಿ ಹೋಬಳಿ ವ್ಯಾಪ್ತಿಯ ಕಮ್ಮಸಂದ್ರ ಗ್ರಾಮದಲ್ಲಿ 23.46 ಲಕ್ಷ ರೂ. ಮೌಲ್ಯದ ಮದ್ಯ, ಕಾಡುಗೊಂಡನಹಳ್ಳಿ ಬಳಿ 49.88 ಲಕ್ಷ, ಕೆ.ಜಿಹಳ್ಳಿ ನಿವೇಶನದ ಬಳಿ 46.14 ಲಕ್ಷ , ಕಾಡುಗೊಂಡನಹಳ್ಳಿ ಬಳಿ 890.25 ಲಕ್ಷ, ದೊಡ್ಡ ಕಮ್ಮನಹಳ್ಳಿ ಬಳಿ 55.62 ಲಕ್ಷ, ಕೋಲಾರದ ತಮಕಾ ಕೈಗಾರಿಕಾ ಪ್ರದೇಶ ಬಳಿ 76.86 ಲಕ್ಷ, ಬಾಗಲಕೋಟೆಯಲ್ಲಿ 59 ಲಕ್ಷ, ಗೂಡ್ಲು ಗೇಟ್ ಬಳಿ 34.02 ಲಕ್ಷ , ವೈಟ್ ಫೀಲ್ಸ್ ಕಂಟೈನರ್ ಕಾಪೋರೇಷನ್ ಆ್ ವೇರ್ ಹೌಸ್ ನಲ್ಲಿ 49.88 ಲಕ್ಷ, ಮಾದನಾಯಕನಹಳ್ಳಿ ಬಳಿ 46.14 ಲಕ್ಷ ರೂ. ಬೆಲೆಯ ಮದ್ಯ ಸೇರಿದಂತೆ ಶನಿವಾರ 7.45 ಕೋಟಿ ರೂ. ಮೌಲ್ಯದ ಮದ್ಯ ವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

    ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ 158.94 ಕೋಟಿ ರೂ. ಬೆಲೆಬಾಳುವ ಮದ್ಯವನ್ನು ಜ್ತು ಮಾಡಲಾಗಿದ್ದು, ಇದು ದಾಖಲೆಯ ಮುಟ್ಟುಗೋಲಾಗಿದೆ.

    ಶನಿವಾರ 2.08 ಕೋಟಿ ರೂ. ನಗದು ಸೇರಿ ಈವರೆಗೆ 48.66 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಮದ್ಯ, ಡ್ರಗ್ಸ್, ಚಿನ್ನ, ಬೆಳ್ಳಿ, ವಜ್ರ, ಉಡುಗೊರೆ ಮತ್ತು ಇತರೆ ವಸ್ತು ಸೇರಿದಂತೆ ಈವರೆಗೆ 355.78 ಕೋಟಿ ರೂ. ಬೆಲೆ ಬಾಳುವ ವಸ್ತುಗಳನ್ನು ಚುನಾವಣಾ ಆಯೋಗದ ಜಾಗೃತ ದಳಗಳ ವಶಪಡಿಸಿಕೊಂಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts