More

    ಶ್ರೀಕೃಷ್ಣ ಪರಮಾತ್ಮನನ್ನು ನಿಂದಿಸಿ ಕೆಲಸಕ್ಕೆ ಕುತ್ತು ತಂದುಕೊಂಡ ಪತ್ರಕರ್ತೆ!

    ನವದೆಹಲಿ: ಭಾರತೀಯರಿಗೆ ಆರಾಧ್ಯದೈವವಾಗಿರುವ ಶ್ರೀ ಕೃಷ್ಣ ಪರಮಾತ್ಮನನ್ನು ಸಾಮಾಜಿಕ ಜಾಲತಾಣದಲ್ಲಿ ಮನಬಂದಂತೆ ನಿಂದಿಸಿದ ಪತ್ರಕರ್ತೆಯೊಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕೆ ಕೆಲಸ ಮಾಡುತ್ತಿದ್ದ ಇಂಗ್ಲಿಷ್ ಪತ್ರಿಕೆ ಕೂಡ ಆಕೆಯ ವಾದವನ್ನು ಬೆಂಬಲಿದೆ ದೂರ ಸರಿದಿದೆ.

    ಪತ್ರಕರ್ತೆ ಸೃಷ್ಟಿ ಜಸ್ವಾಲ್ ವಿರುದ್ಧ ದೆಹಲಿಯ ಬಿಜೆಪಿ ಕಾರ್ಯಕರ್ತ ಗೌತಮ್ ಅಗರ್‌ವಾಲ್ ದೂರು ನೀಡಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಚಿತ್ರವೊಂದರ ಕುರಿತು ಜೂನ್ 29ರಂದು ಟ್ವಿಟರ್‌ನಲ್ಲಿ ಚರ್ಚೆ ನಡೆಯುತ್ತಿದ್ದಾಗ ಉದ್ದೇಶಪೂರ್ವಕವಾಗಿ ಮಧ್ಯಪ್ರವೇಶಿಸಿದ ಸೃಷ್ಟಿ ಜಸ್ವಾಲ್, ಶ್ರೀಕೃಷ್ಣಪರಮಾತ್ಮನನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ ಒಂದು ರೂ.ಗೂ ಕಡಿಮೆ ಬೆಲೆಯ ಮಾತ್ರೆ ಕರೊನಾ ಚಿಕಿತ್ಸೆಯಲ್ಲಿ ಅದ್ಭುತಗಳನ್ನೇ ಮಾಡುತ್ತಿದೆ….! 

    ದೇಶದ ಪ್ರಮುಖ ಆಂಗ್ಲ ದಿನಪತ್ರಿಕೆಯ ವರದಿಗಾರ್ತಿಯಾಗಿರುವುದರಿಂದ ಆಕೆಯ ಬಹಿರಂಗ ಹೇಳಿಕೆಯು ದೇಶದ ಮತ್ತು ವಿದೇಶಗಳಲ್ಲಿರುವ ಲಕ್ಷಾಂತರ ಜನರನ್ನು ಪ್ರಭಾವಿಸುತ್ತದೆ. ಇದರಿಂದ ಧಾರ್ಮಿಕ ಸೌಹಾರ್ದಕ್ಕೂ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ.

    ‘‘ಕೃಷ್ಣ ಒಬ್ಬ ವುಮನೈಸರ್ (ಹೆಣ್ಣುಬಾಕ) ಆಗಿದ್ದ. ಹುಚ್ಚನಾಗಿದ್ದ. ನಾನೊಬ್ಬ ಹಿಂದೂ ಆಗಿರುವುದರಿಂದ ಆತನ ಬಗ್ಗೆ ಪುರಾಣಗಳಲ್ಲಿ ಓದಿದ್ದೇನೆ… ಎಂದೆಲ್ಲ ಆಕೆ ಟ್ವೀಟ್‌ನಲ್ಲಿ ನಿಂದಿಸಿದ್ದಾಳೆ. ಶ್ರೀಕೃಷ್ಣಪರಮಾತ್ಮನನ್ನು ನಂಬುವ ಮತ್ತು ಪೂಜಿಸುವ ಕೋಟ್ಯಂತರ ಭಕ್ತರಿಗೆ ಇದರಿಂದ ನೋವಾಗಿದೆ’’ ಎಂದು ವಿವರಿಸಿದ್ದಾರೆ.

    ಇದನ್ನೂ ಓದಿ ರೋಗ ಪ್ರತಿರೋಧಕ ಶಕ್ತಿ ಕುಂದಿದವರಿಗೂ ಆಕ್ಸ್​ಫರ್ಡ್​ ಕರೊನಾ ಲಸಿಕೆ ಸುರಕ್ಷಿತ; ಫಲಿತಾಂಶ ಪ್ರಕಟಿಸಿದ ತಜ್ಞರು

    ‘ಕೃಷ್ಣ ಆ್ಯಂಡ್ ಹೀಸ್ ಲೀಲಾ’ ಎಂಬ ಹೆಸರಿನ ನೆಟ್‌ಫ್ಲಿಕ್ಸ್ ಸಿನಿಮಾದಲ್ಲಿ ಕೃಷ್ಣ ಎಂಬ ಪಾತ್ರಧಾರಿಯೊಬ್ಬನನ್ನು ಹಲವಾರು ಮಹಿಳೆಯರೊಂದಿಗೆ ಸಂಪರ್ಕ ಹೊಂದಿರುವ ಹೆಣ್ಣುಬಾಕನನ್ನಾಗಿ ಚಿತ್ರಿಸಲಾಗಿದೆ. ಆತ ಸಂಪರ್ಕ ಹೊಂದಿರುವ ಒಬ್ಬ ಮಹಿಳೆಯ ಪಾತ್ರಕ್ಕೆ ರಾಧಾ ಎಂದು ಹೆಸರಿಡಲಾಗಿದೆ. ಕೃಷ್ಣನನ್ನು ಕೆಟ್ಟದಾಗಿ ಬಿಂಬಿಸಿರುವುದಕ್ಕೆ ಈಗಾಗಲೇ ದೇಶಾದ್ಯಂತ ಸಾಕಷ್ಟು ಆಕ್ಷೇಪ ವ್ಯಕ್ತವಾಗಿದೆ.

    ತನ್ನ ಉದ್ಯೋಗಿಯ ಟ್ವೀಟ್ ಬಗ್ಗೆ ಕೇಸು ದಾಖಲಾಗುತ್ತಿದ್ದಂತೆಯೇ ಆಂಗ್ಲ ಪತ್ರಿಕೆ ಪ್ರತಿಕ್ರಿಯೆ ನೀಡಿದ್ದು, ‘‘ಅದು ಆಕೆಯ ವೈಯಕ್ತಿಕ ಟ್ವಿಟರ್ ಹ್ಯಾಂಡಲ್‌ನಿಂದ ಮಾಡಿರುವ ಟ್ವೀಟಾಗಿದ್ದು, ಅದಕ್ಕೂ ಸಂಸ್ಥೆಗೂ ಸಂಬಂಧವಿಲ್ಲ. ಆಕೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆಲಸದಿಂದ ಅಮಾನತು ಮಾಡಲಾಗಿದೆ. ಈ ಕುರಿತು ತನಿಖೆ ನಡೆಸಲು ಆಂತರಿಕ ಸಮಿತಿಯೊಂದನ್ನು ರಚಿಸಲಾಗಿದೆ’’ ಎಂದು ತಿಳಿಸಿದೆ.

    ಗ್ರೀನ್​ ಟೀ, ಬ್ಲ್ಯಾಕ್ ಟೀ ಕುಡಿಯುವುದರಿಂದಲೂ ದೂರವಿಡಬಹುದು ಕರೊನಾ; ದೆಹಲಿ ಐಐಟಿ ತಂಡದಿಂದ ಸಂಶೋಧನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts