More

    ನಿಧಾನವಾಗಿ ತೆರಳುತ್ತಿದ್ದರೂ ವಾಹನ ಸ್ಕಿಡ್​ ಆಗಿ ಸಾವಿಗೀಡಾದ ಮಹಿಳೆ…

    ಬೆಂಗಳೂರು: ದ್ವಿಚಕ್ರ ವಾಹನದ ಮೇಲೆ ಹೋಗುತ್ತಿದ್ದಾಗ ಸ್ಕಿಡ್ ಆಗಿ ಬಿದ್ದು ಅಪಘಾತವಾಗಿ 35 ವರ್ಷದ ಮಹಿಳೆ‌ ಸಾವಿಗೀಡಾಗಿದ್ದಾರೆ. ಕಬ್ಬನ್ ಪಾರ್ಕ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಅವರು ಎಂಜಿ ರಸ್ತೆ ಕಡೆ ಬೆಳಗ್ಗೆ 8.15ರ ವೇಳೆ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ವಾಹನವೊಂದರ ಆಯಿಲ್ ಲೀಕಾಗಿದೆ. ಆಗ ನಿಧಾನ ಗತಿಯಲ್ಲಿಯೇ ವಾಹನಗಳು ಹೋಗುತ್ತಿದ್ದವು. ಲೀಕ್​ ಆಗುತ್ತಿದ್ದ ಆಯಿಲ್ ಮೇಲೆಯೇ ಹೋಗುತ್ತಿದ್ದ ಮಹಿಳೆ ಸ್ಕಿಡ್ ಆಗಿ ಎಡ ಭಾಗಕ್ಕೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯ ಹಿಂಬದಿ ಚಕ್ರ ಮಹಿಳೆ ತಲೆಯ ಮೇಲೆ ಹತ್ತಿದೆ. ಈ ಸಂದರ್ಭ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

    ನಿಧಾನವಾಗಿ ತೆರಳುತ್ತಿದ್ದರೂ ವಾಹನ ಸ್ಕಿಡ್​ ಆಗಿ ಸಾವಿಗೀಡಾದ ಮಹಿಳೆ…

    ಅವರ ಸಾವಿಗೆ ಹೆಲ್ಮೆಟ್ ಕೂಡ ಕಾರಣ ಎನ್ನಲಾಗುತ್ತಿದ್ದು ಅಪಘಾತ ಸಂಭವಿಸಿದ ಸಂದರ್ಭ ಆ ಮಹಿಳೆ ಕಳಪೆ ಗುಣಮಟ್ಟದ ಧರಿಸಿದ್ದರು. ಇದರಿಂದ ತಲೆಗೆ ಬಲವಾದ ಏಟು ಬಿದ್ದಿದ್ದು ಮಹಿಳೆ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts