More

    ‘ಏರೋ ಇಂಡಿಯಾ’ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ

    ಬೆಂಗಳೂರು: ಈ ಬಾರಿಯ ಏರೋ ಇಂಡಿಯಾ ಜನರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು ಕುತೂಹಲ ಭರಿತರಾಗಿ ನೋಡುತ್ತಿದ್ದಾರೆ. ಇನ್ನೇನು ಚುನಾವಣೆಯೂ ಹತ್ತಿರದಲ್ಲಿದ್ದು ಪ್ರಧಾನಿ ಮೋದಿ ಎರಡನೇ ಬಾರಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಏರೋ ಇಂಡಿಯಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದಾರೆ.

    ನಿಗದಿಗಿಂತ ಮೊದಲೇ ರಾಜಭವನದಿಂದ ಹೊರಟ ಪ್ರಧಾನಿ ಮೋದಿ (ಬೆಳಗ್ಗೆ 8.35ರ ಹೊತ್ತಿಗೆ) ರಸ್ತೆ ಮಾರ್ಗವಾಗಿ ಮೇಖ್ರೀ ರಸ್ತೆಯಲ್ಲಿರುವ HQTC ಹೆಲಿಪ್ಯಾಡ್​ಗೆ ಆಗಮಿಸಿದರು. ಅಲ್ಲಿಂದ ಯಲಹಂಕ ವಾಯುನೆಲೆಗೆ ವಾಯು ಮಾರ್ಗವಾಗಿ Mi17 ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸಿದರು. ಈ ಸಂದರ್ಭ ಅವರೊಂದಿಗೆ ರಾಜ್ಯಪಾಲರಾದ ಥಾವರ್​ ಚಂದ್​ ಗೆಹ್ಲೋಟ್​ ಕೂಡ ಸಾಥ್ ನೀಡಿದರು.

    ಮೇಖ್ರಿ ರಸ್ತೆಯಲ್ಲಿರುವ ಹೆಲಿಪ್ಯಾಡ್​ನಿಂದ ವಾಯುಮಾರ್ಗವಾಗಿ ಬಂದ ಪ್ರಧಾನಿ ಮೋದಿ, ಕಾರ್ಯಕ್ರಮದ ಸ್ಥಳಕ್ಕೆ ರಸ್ತೆ ಮಾರ್ಗವಾಗಿ ಬಂದರು. ವೇದಿಕೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೆಲಿಕಾಪ್ಟರ್​ಗಳು ತ್ರಿವರ್ಣ ಧ್ವಜ, ಸೇನೆ ಧ್ವಜ ಹಾಗೂ ಏರೋ ಇಂಡಿಯಾ ಧ್ವಜ ಹಾಗೂ ಸೂರ್ಯ ಕಿರಣ್ ತ್ರಿವರ್ಣ ಬಣ್ಣದ ಮೂಲಕ ಸ್ವಾಗತಿಸಿದವು. ವೇದಿಕೆಯಲ್ಲಿ ಕಾರ್ಯಕ್ರಮ ಶುರುವಾಗುತ್ತಿದ್ದಂತೆಯೇ ರಕ್ಷಣಾ ಮಂತ್ರಿ ರಾಜನಾಥ್​ ಸಿಂಗ್​, ಪ್ರಧಾನ ಮಂತ್ರಿ ಮೋದಿಯನ್ನು ಸ್ವಾಗತಿಸಿದರು.

    ಏರ್​ ಶೋ ಈ ಬಾರಿ ವಾಣಿಜ್ಯ ದೃಷ್ಟಿಯಿಂದಲೂ ಪ್ರಾಮುಖ್ಯತೆ ಪಡೆದಿದ್ದು ಅನೇಕ ಕಾರ್ಯಕ್ರಮಗಳನ್ನು ಈ ಸಂದರ್ಭ ಆಯೋಜಿಸಲಾಗಿದೆ. ಈ ಬಾರಿಯ ಏರ್​ ಶೋನಲ್ಲಿ ಅನೇಕ ದೇಶಗಳ ರಕ್ಷಣಾ ಮಂತ್ರಿಗಳು, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯಮಿಗಳು, ಹೀಗೆ ಅನೇಕ ಗಣ್ಯರು ಆಗಮಿಸಲಿದ್ದಾರೆ. ಇಂತಹ ಮಹತ್ವಪೂರ್ಣ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts