More

    ಯುವಕನ ಮೇಲೆ ಹುಲಿ ದಾಳಿ; ಮಗನನ್ನು ಹುಡುಕಲು ಹೋದ ತಂದೆಯ ಮೇಲೂ ಎರಗಿದ ವ್ಯಾಘ್ರ!

    ಕೊಡಗು: ಕಾಡಿನ ಪ್ರಾಣಿಗಳು ನಾಡಿಗೆ ಬರುವ ಜತೆಗೆ ಸಾಕುಪ್ರಾಣಿಗಳು ಮತ್ತು ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾವು-ನೋವು ಸಂಭವಿಸಿದ ಹಲವು ಉದಾಹರಣೆಗಳಿವೆ. ನಿನ್ನೆ ತಾನೇ ಕೊಡಗು ಜಿಲ್ಲೆಯಲ್ಲಿ ಹದಿಹರೆಯದ ಯುವಕನ ಮೇಲೆ ಹುಲಿ ದಾಳಿ ನಡೆಸಿತ್ತು. ಈಗ ಬಂದಿರುವ ಹೊಸ ಮಾಹಿತಿಯ ಪ್ರಕಾರ, ಯುವಕನ ತಂದೆ ಮಗನನ್ನು ಹುಡುಕಲು ಹೋಗಿದ್ದಾಗ ಅವರ ಮೇಲೂ ಹುಲಿ ದಾಳಿ ನಡೆಸಿತ್ತು!

    ನಿನ್ನೆ ಹಾಡಹಗಲೇ ಹದಿಹರೆಯದ ಯುವಕನೊಬ್ಬ ಹುಲಿ ದಾಳಿಗೆ ಬಲಿಯಾಗಿದ್ದ. ಕೊಡಗು ಜಿಲ್ಲೆಯ ವೀರಹೊಸನಹಳ್ಳಿ ಸೊಳ್ಳೆಪುರ ನಿವಾಸಿ ಚೇತನ್​ (18) ಸಾವಿಗೀಡಾದ ಯುವಕ. ಪೊನ್ನಂಪೇಟೆ ತಾಲೂಕಿನ ಕುಟ್ಡ ಸಮೀಪದ ನಾಲ್ಕೇರಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.

    ಎನ್.ಪೂಣಚ್ಚ ಎಂಬವರಿಗೆ ಸೇರಿದ ತೋಟಕ್ಕೆ ಕಾಫಿ ಕೊಯ್ಲು ಮಾಡಲು ಚೇತನ್ ಬಂದಿದ್ದು, ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಹುಲಿ ಮೈಮೇಲೆ ಎರಗಿತ್ತು. ತೋಟದ ಸಮೀಪ ಹುಲಿ ನಡೆಸಿದ ದಾಳಿಗೆ ನಿನ್ನೆ ಚೇತನ್ ಸಾವಿಗೀಡಾಗಿದ್ದ.
    ಇದನ್ನೂ ಓದಿ: ಹದಿಹರೆಯದ ಯುವಕ ಹಾಡಹಗಲೇ ಹುಲಿ ದಾಳಿಗೆ ಬಲಿ!

    ಚೇತನ್ ಮೈಸೂರು ಜಿಲ್ಲೆಯ ಪಂಚವಳ್ಳಿ ಗ್ರಾಮದ ಯುವಕಯಾಗಿದ್ದು ಪೊನ್ನಂಪೇಟೆ ತಾಲೂಕಿನ ಚೂರಿಕಾಡು ಬಳಿ ನಿನ್ನೆ ನಡೆದ ಹುಲಿ ದಾಳಿಯಲ್ಲಿ ಬಲಿಯಾಗಿದ್ದಾನೆ. ಕಾಫಿ ಕೊಯ್ಲು ಮಾಡಲು ಚೇತನ್ ಬಂದಿದ್ದು ನಿನ್ನೆ ಚೇತನ್ ತಂದೆಯ ಮೇಲೂ ವ್ಯಾಘ್ರ ಎರಗಿತ್ತು. ಆದರೆ ಅದೃಷ್ಟವಶಾತ್​ ತಂದೆ ಮಧು ಹುಲಿ ಬಾಯಿಂದ ತಪ್ಪಿಸಿಕೊಂಡು ಬಂದಿದ್ದರು.

    ಮಗನನ್ನು ಹುಡುಕುವ ಸಂದರ್ಭ ಹುಲಿ ದಾಳಿ ಮಾಡಿದ್ದು ಸಣ್ಣಪುಟ್ಟ ಗಾಯದೊಂದಿಗೆ ಮಧು ಪಾರಾಗಿದ್ದಾರೆ. ಸದ್ಯ, ಮೃತ ಯುವಕನ ಕುಟುಂಬಕ್ಕೆ ಅರಣ್ಯಾಧಿಕಾರಿಗಳು ಪರಿಹಾರ ರೂಪದಲ್ಲಿ 2.50 ಲಕ್ಷದ ಚೆಕ್ ವಿತರಣೆ ಮಾಡಿದ್ದಾರೆ. ಒಟ್ಟು 15 ಲಕ್ಷ ಪರಿಹಾರದ ಭರವಸೆ ನೀಡಲಾಗಿದೆ. ಸದ್ಯ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts