More

    ಏಷ್ಯಾದ ಅತೀ ದೊಡ್ಡ ಏರೋ​ ಶೋನಲ್ಲಿ ಕರ್ನಾಟಕ ಪೆವಿಲಿಯನ್​; ರಾಜ್ಯಕ್ಕೆ ಏನು ಲಾಭ?

    ಬೆಂಗಳೂರು: ಏರೋ ಇಂಡಿಯಾ 2023 ರಲ್ಲಿ ಪ್ರತ್ಯೇಕ ಕರ್ನಾಟಕ ಪೆವಿಲಿಯನ್ ಇರಲಿದ್ದು, ಇದರಲ್ಲಿ ಭಾಗವಹಿಸುವವರಿಗೆ ರಾಜ್ಯದಲ್ಲಿ ಲಭ್ಯವಿರುವ ಅವಕಾಶಗಳ ಬಗ್ಗೆ ಪ್ರದರ್ಶನದ ಮೂಲಕ ಮಾಹಿತಿ ನೀಡಲಾಗುವುದು.

    ದೇಶದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡುತ್ತಿರುವ ಕರ್ನಾಟಕವನ್ನು ಮುಂಚೂಣಿಯಲ್ಲಿರುವ ರಾಜ್ಯ ಎಂದು ಬಣ್ಣಿಸಿದ ರಕ್ಷಣಾ ಸಚಿವರು “ಈ ರಾಜ್ಯ, ನುರಿತ ಮಾನವ ಸಂಪನ್ಮೂಲ ಮತ್ತು ದೃಢವಾದ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಇದು ದೇಶೀಯ ಮತ್ತು ಬಹುರಾಷ್ಟ್ರೀಯ ರಕ್ಷಣಾ ಮತ್ತು ವಾಯುಯಾನ ಕಂಪನಿಗಳಿಗೆ ಉತ್ಪಾದನೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಆದ್ಯತೆಯ ಕೇಂದ್ರವಾಗಿದೆ. ಬಿಇಎಂಎಲ್, ಡಿಆರ್​ಡಿಒ, ಇಸ್ರೋ, ಐಐಎಸ್​ಸಿ, ಮಹೀಂದ್ರಾ ಏರೋಸ್ಪೇಸ್, ಏರ್​ಬಸ್, ಬೋಯಿಂಗ್ ಮುಂತಾದ ರಕ್ಷಣಾ ಸಂಬಂಧಿತ ಸಾರ್ವಜನಿಕ ಮತ್ತು ಖಾಸಗಿ ಕಂಪನಿಗಳು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳ ಉಪಸ್ಥಿತಿಯೇ ಕರ್ನಾಟಕವನ್ನು ಭಾರತದ ಏರೋಸ್ಪೇಸ್ ಉದ್ಯಮದ ಪ್ರಮುಖ ರಾಜ್ಯವನ್ನಾಗಿ ಮಾಡುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯವು ಇಡೀ ಜಗತ್ತಿಗೆ ರಕ್ಷಣಾ ಮತ್ತು ಏರೋಸ್ಪೇಸ್ ಉತ್ಪಾದನೆಯ ಕೇಂದ್ರವಾಗಲಿದೆ” ಎಂದು ಆಶಿಸಿದರು.

    ಏರೋ ಇಂಡಿಯಾದ ಪ್ರಯೋಜನಗಳನ್ನು ಕರ್ನಾಟಕದ ಯುವಕರಿಗೆ ಮನದಟ್ಟು ಮಾಡಿಸಲು ಪ್ರಯತ್ನಿಸಿದ ರಕ್ಷಣಾ ಸಚಿವರು ‘ಕರ್ನಾಟಕ ಪೆವಿಲಿಯನ್, ರಾಜ್ಯದಲ್ಲಿರುವ ಅವಕಾಶಗಳು ಮತ್ತು ಸಾಧ್ಯತೆಗಳನ್ನು ಪ್ರದರ್ಶಿಸುತ್ತದೆ. ಇದು ಹೂಡಿಕೆಗಳನ್ನು ಆಕರ್ಷಿಸಿ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಯುವಜನರ ಭವಿಷ್ಯದ ಬಗ್ಗೆ ಸರ್ಕಾರ ಗಮನ ಹರಿಸುತ್ತಿದೆ’ ಎಂದು ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts