More

    ಇಂದಿನಿಂದ ಏಷ್ಯಾದ ಅತೀ ದೊಡ್ಡ ಏರೋ ಶೋ; ಸಾರ್ವಜನಿಕರಿಗೆ ವೀಕ್ಷಣೆ ಅವಕಾಶ ಯಾವಾಗ?

    ಬೆಂಗಳೂರು: ಇಂದಿನಿಂದ 14ನೇ ಆವೃತಿಯ ಏರೋ ಶೋ ಆರಂಭವಾಗುತ್ತಿದ್ದು ಏಷ್ಯಾದ ಅತೀ ದೊಡ್ಡ ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಈ ಬೃಹತ್​ ಮಟ್ಟದ ಕಾರ್ಯಕ್ರಮ ಇಂದಿನಿಂದ 17ರ ವರೆಗೆ ನಡೆಯಲಿದೆ.

    ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಶೋ ನಡೆಯಲಿದ್ದು ಮೊದಲ ಮೂರುದಿನ ಬಿಸ್ನೆಸ್ ಡೇ ಆಗಿರುತ್ತದೆ. ಈ ಸಂದರ್ಭದಲ್ಲಿ ಕೇವಲ ಗಣ್ಯರಿಗೆ ಮಾತ್ರ ಪ್ರವೇಶ ನಿಡಲಾಗುತ್ತದೆ.

    ಕೊನೆಯ ಎರಡು ದಿನ ಸಾರ್ವಜನಿಕರಿಗೂ ಪ್ರವೇಶ ಇರಲಿದೆ. ಉದ್ಘಾಟನಾ ಸಮಾರಂಭಕ್ಕೆ ಸ್ಪೆಷಲ್ ಪಾಸ್ ಇದ್ದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಉದ್ಘಾಟನೆಗೆ ಈ ಬಾರಿ ಬರೋಬ್ಬರಿ 4 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.

    ಏರ್ ಶೋ ವೀಕ್ಷಣೆಗೆ ಹಲವು ಮಾದರಿಯ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು ಬ್ಯುಸ್ನೆಸ್ ಕ್ಲಾಸ್​ ಟಿಕೆಟ್​ಗಳಿಗೆ 5000ರೂ. ಮೊತ್ತವನ್ನು ವಿಧಿಸಲಾಗಿದೆ. ವಿದೇಶಿಯರಿಗೆ 150 ಡಾಲರ್ ಪ್ರತಿ ಟಿಕೆಟ್​ಗೆ ನಿಗದಿಪಡಿಸಲಾಗಿದೆ. ಎಕ್ಸಿಬಿಷನ್ ಜೊತೆ ವೈಮಾನಿಕ ಪ್ರದರ್ಶನ ವೀಕ್ಷಣೆ ಮಾಡಲು ಬಯಸುತ್ತೀರಿ ಎಂದಾದರೆ ಅದಕ್ಕೆ 2500 ರೂ. ಮೊತ್ತದ ಟಿಕೆಟ್ ಖರೀದಿಸಬೇಕು. ಕೇವಲ ವೈಮಾನಿಕ ಪ್ರದರ್ಶನ ಸಾಕು ಎಂದಾದರೆ ವೀಕ್ಷಣೆಗೆ 100ರೂ ಟಿಕೆಟ್ ನಿಗದಿ ಪಡಿಸಲಾಗಿದೆ.

    35 ಸಾವಿರ ಚದರ ಅಡಿ ಪ್ರದೇಶದಲ್ಲಿ ಎಕ್ಸಿಬಿಷನ್ ಆಯೋಜನೆ ಮಾಡಲಾಗಿದ್ದು 67 ಫ್ಲೈಯಿಂಗ್ ಡಿಸ್ಪ್ಲೇ, 36 ಸ್ಟ್ಯಾಂಡಿಂಗ್ ಡಿಸ್ಪ್ಲೇ, ವ್ಯವಸ್ಥೆ ಇರಲಿದೆ. ಈ ಬಾರಿ 809 ಪ್ರದರ್ಶಕರು ಇಲ್ಲಿ ಸೇರಲಿದ್ದು, ಸೇರಿ ಒಟ್ಟು 98 ದೇಶಗಳು ಭಾಗಿಯಾಗಲಿವೆ.

    32 ದೇಶದ ರಕ್ಷಣಾ ಸಚಿವರು, 29 ದೇಶದ ವಾಯುಪಡೆ ಮುಖ್ಯಸ್ಥರು, 73 ಜಾಗತಿಕ ಸಿಇಓಗಳು ಏರ್ ಶೋ ನಲ್ಲಿ ಭಾಗಿಯಾಗಲಿದ್ದಾರೆ. ಈ ಬಾರಿ ಏರ್ ಶೋ ನಲ್ಲಿ ಫೈಟರ್ ಜಟ್, ಹೆಲಿಕಾಫ್ಟರ್, ಡ್ರೋನ್ಗಳ ಪ್ರದರ್ಶನ ಇರಲಿದ್ದು ಭಾರತೀಯ ವಾಯುಪಡೆಯ ಸಾರಂಗ್, ತೇಜಸ್, ಜಾಗ್ವಾರ್, ಮಿರಾಜ್ 2000, ಸುಕೋಯ್ 30, ರಫೆಲ್, ಮಿಗ್ 29, ರುಧ್ರ, ಪ್ರಚಂಡ, ದಕ್ಷ, ಭೀಮ್ ಸೇರಿ ಅನೇಕ ಹೆಲಿಕಾಫ್ಟರ್ ಹಾಗೂ ಯುದ್ಧವಿಮಾನಗಳಿಂದ ಪ್ರದರ್ಶನ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts