More

    ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ವಾಗತ ಭಾಷಣದಲ್ಲಿ ಕರ್ನಾಟಕದ ಬಗ್ಗೆ ಹೇಳಿದ್ದಿಷ್ಟು…

    ಬೆಂಗಳೂರು: ಎಲ್ಲರಿಗೂ ನಮಸ್ಕಾರ ಅಂತ ಕನ್ನಡದಲ್ಲಿ ಭಾಷಣ ಆರಂಭಿಸಿದ ರಕ್ಷಣಾ ಮಂತ್ರಿಗಳು ‘ಕರ್ನಾಟಕದ ಈ ಐತಿಹಾಸಿಕ ಪ್ರದೇಶಕ್ಕೆ ನಿಮಗೆ ಸ್ವಾಗತ. ಮೋದಿ ಮಾರ್ಗದರ್ಶನದಲ್ಲಿ ಹಲವು ವರ್ಷಗಳಿಂದ ಕಾರ್ಯಕ್ರಮ ರೂಪಿಸಲಾಗಿದೆ’ ಎಂದರು.

    ‘ಈ ಕಾರ್ಯಕ್ರಮದಲ್ಲಿ ಹೈಟ್ ಮತ್ತು ಸ್ಪೀಡ್ ಎರಡು ಪ್ರಮುಖ ವಿಚಾರವನ್ನು ಇಟ್ಟುಕೊಳ್ಳಲಾಗಿದೆ. ಲೋಕ ಕಲ್ಯಾಣದ ಶಕ್ತಿ ಇದರಲ್ಲಿದೆ. ರಾಷ್ಟ್ರದ ಶಸಕ್ತೀಕರಣ ನಡೆಯುತ್ತಿದ್ದು ನಮ್ಮ ದೇಶ ಸದೃಡವಾಗಿದೆ’ ಎಂದರು. ಇದೇ ಸಂದರ್ಭದಲ್ಲಿ ಕರ್ನಾಟಕದ ಬಗ್ಗೆ ಮಾತನಾಡಿದ ರಾಜನಾಥ್​ ಸಿಂಗ್​, ‘ಭಾರತದ ರಕ್ಷಣಾ ಕ್ಷೇತ್ರದಲ್ಲಿ ಉತ್ತಮವಾಗಿ ಮುನ್ನುಗುತ್ತಿದೆ. ಕರ್ನಾಟಕದ ಭೂಮಿ, ಶೌರ್ಯ, ಪರಾಕ್ರಮಕ್ಕೆ ಹೆಸರುವಾಸಿಯಾಗಿದೆ. ಏರೋ ಇಂಡಿಯಾ ಆಯೋಜನೆ ಹಿಂದೆಯೂ ಬೇರೆ ಬೇರೆ ಅಭಿವೃದ್ಧಿ ಕಾರ್ಯಕ್ರಮ ರೂಪಿಸಲಾಗಿತ್ತು. ತುಮಕೂರು, ಲಕ್ನೋ ಹಾಗೂ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮಗಳಲ್ಲೂ ನಾನೇ ಪ್ರಧಾನಿಯವರನ್ನು ಸ್ವಾಗತಿಸಿದ್ದೆ. ಆ ಮೂರು ಕಾರ್ಯಕ್ರಮಗಳಲ್ಲಿ ಕರ್ನಾಟಕದಲ್ಲೇ ಎರಡು ಕಾರ್ಯಕ್ರಮ ನಡೆದದ್ದನ್ನು ನಾವು ಗಮನಿಸಬೇಕು’ ಎಂದರು.

    ಕರ್ನಾಟಕ ರಾಜ್ಯದ ಇಂಡಸ್ಟ್ರಿ ಕಮೀಟ್​ಮೆಂಟ್​ ಮೆಚ್ಚಬೇಕು. ಕರ್ನಾಟಕದಲ್ಲಿ ಸಿಗುವ ಗಂಧದ ಮರ ದೇಶ, ವಿದೇಶಗಳಿಗೆ ರಫ್ತು ಆಗುತ್ತಿದೆ. ಈಸ್ ಆಫ್ ಡೂಯಿಂಗ್ ಬ್ಯುಸ್‌ನೆಸ್ ಕೂಡ ರ್ಯಾಂಕಿಂಗ್ ದಿನದಿಂದ ದಿನ ಮೇಲೆ ಬರುತ್ತಿದೆ. G-20 ಶೃಂಗ ಸಭೆ ಮಾಡುವ ಅವಕಾಶ ಕೂಡ ನಮಗೆ ಈ ಬಾರಿ ಸಿಕ್ಕಿದೆ. ಇಷ್ಟೆಲ್ಲಾ ಅವಕಾಶಗಳನ್ನು ಪಙಡೆದುಕೊಂಡಿರುವ ಭಾರತದ ರಕ್ಷಣಾ ಇಲಾಖೆ ನಿಮ್ಮೆಲ್ಲರನ್ನೂ ಸ್ವಾಗತಿಸುತ್ತಿದೆ. 700ಕ್ಕೂ ಹೆಚ್ಚು ದೇಶದ ಎಕ್ಸಿಬ್ಯೂಟರ್ ಸ್ಟಾಲ್ ಹಾಕಿದ್ದಾರೆ. ಡಿಫೆನ್ಸ್ ಮ್ಯಾನುಫ್ಯಾಕ್ಚರ್ ಉತ್ತಮವಾಗಿ ನಡೆಯುತ್ತಿದೆ. ದೇಶ, ವಿದೇಶಗಳಿಂದ ಆಗಮಿಸಿರೋ ಎಲ್ಲರಿಗೂ ಸ್ವಾಗತ ಕೋರುತ್ತೇನೆ’ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts