More

    ‘ಏರೋ ಇಂಡಿಯಾ’ ಉದ್ಘಾಟಿಸಿದ ಪ್ರಧಾನಿ ಮೋದಿ ಹೇಳಿದ್ದಿಷ್ಟು…

    ಬೆಂಗಳೂರು: ಈ ಬಾರಿಯ ಏರೋ ಇಂಡಿಯಾ ಜನರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು ಕುತೂಹಲ ಭರಿತರಾಗಿ ನೋಡುತ್ತಿದ್ದಾರೆ. 1996ರಿಂದ ಈ ಏರೋ ಶೋ ನಡೆಯುತ್ತಿದ್ದು 13 ಬಾರಿಯೂ ಕರ್ನಾಟಕದಲ್ಲೇ ಆಯೋಜಿಸಲಾಗಿತ್ತು. ಸುದೀರ್ಘ ಇತಿಹಾಸ ಇರುವ ಈ ಏರೋ ಶೋ ಕಾರ್ಯಕ್ರಮದಲ್ಲಿ 98 ದೇಶಗಳಿಂದ ಗಣ್ಯರು ಭಾಗವಹಿಸಲಿದ್ದು ಜಗತ್ತೇ ಬೆಂಗಳೂರಿನತ್ತ ತಿರುಗಿ ನೋಡುತ್ತಿದೆ. ಏರೋ ಇಂಡಿಯಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದಾರೆ.

    ಈ ಸಂದರ್ಭ ಮಾತನಾಡಿದ ಪ್ರಧಾನಿ ಮೋದಿ ‘ಏರೋ ಇಂಡಿಯಾದ ರೋಮಾಂಚಕ ನೋಟಕ್ಕೆ ಮನಸೋತಿದ್ದೇನೆ. ಬೆಂಗಳೂರಿನ ವಾತಾವರಣ ಎಲ್ಲರನ್ನೂ ಸೆಳೆಯುತ್ತಿದೆ. ಏರೋ ಇಂಡಿಯಾದ ಆಯೋಜನೆ ನವ ಭಾರತದ ಹೊಸ ಸಾಮರ್ಥ್ಯದ ಉದಾಹರಣೆ. ಭಾರತವನ್ನ ವಿಶ್ವವನ್ನು ಬೇರೆ ದಿಕ್ಕಿನೆಡೆಗೆ ಕೊಂಡೊಯ್ಯುತ್ತಿದೆ. ವಿದೇಶಿ ಕಂಪನಿಗಳು ನಮ್ಮಲ್ಲಿ ಬಂದು ಸ್ಟಾಲ್ ಹಾಕಿದ್ದಾರೆ.‌ ಏರೋ ಇಂಡಿಯಾ ಥೀಮ್​ನ ರನ್ ವೇ ನೆಲದಿಂದ ಆಕಾಶದವರೆಗೂ ಹೊಸತನ್ನ ನಿರೀಕ್ಷಿಸುತ್ತಿದೆ.

    ಏರೋ ಇಂಡಿಯಾದ ಜೊತೆ, ಡಿಫೆಎನ್ಸ್ ಕಾನ್ ಕ್ಲೈವ್ ಕೂಡ ಆಯೋಜಿಸಲಾಗಿದ್ದು ಮಿತ್ರ ದೇಶದ ಜೊತೆ ಭಾರತದ ಸಂಬಂಧ ಗಾಢವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಡಿಫೆನ್ಸ್ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇನೆ. ಕರ್ನಾಟಕ ರಕ್ಷಾ ಕ್ಷೇತ್ರದಲ್ಲಿ ಶಕ್ತಿ ತುಂಬುತ್ತಿದೆ. ಹೊಸ ಇನೋವೇಷನ್ ಮಾಡಲು ಅವಕಾಶ ಸಿಕ್ಕಿದೆ. ಹೊಸ ಆಲೋಚನೆಗಳಿಗೆ ಉತ್ತೇಜನ ಸಿಕ್ಕಿದೆ.

    ಒಂದು ಕಾಲ ಇತ್ತು. ಆಗ ಈ ರೀತಿಯ ಏರ್ ಶೋ ಕಾರ್ಯಕ್ರಮ ಬರಿ ಶೋಗಾಗಿ ಆಗಿತ್ತು. ಆದರೆ ಈಗ ಇದರ ಮಾದರಿಯನ್ನೇ ಬದಲಿಸಲಾಗಿದೆ. ಇದು ಬರೀ ಶೋ ಅಲ್ಲ, ನಮ್ಮ ದೇಶದ ಶಕ್ತಿ ಕೂಡ ಆಗಿದೆ. ದೆಶದಲ್ಲಿ ಡಿಫೆನ್ಸ್ ಕೇವಲ ಮಾರುಕಟ್ಟೆ ಮಾತ್ರ ಅಲ್ಲ, ಅಭಿವೃದ್ಧಿಯ ಪಾರ್ಟ್ನರ್ ಕೂಡ ಆಗಿದೆ. ನಮ್ಮ ಟೆಕ್ನಾಲಜಿ ದೇಶದಲ್ಲಿ ಪ್ರಭಾವಶಾಲಿಯಾಗಿದ್ದು ದೇಶವನ್ನು ಪ್ರಾಮಾಣಿಕ ಹಾಗೂ ಸದೃಢವಾಗಿಸಿದೆ. ಭಾರತದ ಸಾಮರ್ಥ್ಯ ಪ್ರಮಾಣ ಹೆಚ್ಚಿಸಿದೆ.

    ನಮ್ಮ ರಕ್ಷಣಾ ಸಂಸ್ಥೆಗಳು ಆಕಾಶದಲ್ಲಿ ಓಡೋ ತೇಜಸ್ ವೇಗ ಹೆಚ್ಚಿಸಿದೆ. ಗುಜರಾತ್, ತುಮಕೂರಿನಲ್ಲಿ ತಯಾರಾಗ್ತಿರೋ ವಿಮಾನ ಮತ್ತಷ್ಟು ಶಕ್ತಿ ಹೆಚ್ಚಿಸಿದೆ. ನಾವು ರಿಫಾರ್ಮ್ ಮೂಲಕ ಎಲ್ಲಾ ವಿಭಾಗದಲ್ಲೂ ಬದಲಾಗುತ್ತಿದ್ದೇವೆ. ಡಿಫೆನ್ಸ್ ವಸ್ತುಗಳನ್ನು ರಫ್ತು ಮಾಡುತ್ತಿದ್ದೇವೆ. ಈ ಬಾರಿ 1.5 ಬಿಲಿಯನ್ ಡಾಲರ್ ವ್ಯಾಪಾರ ಹೆಚ್ಚಳವಾಗಿದೆ. ಭಾರತ ಒಂಭತ್ತು ವರ್ಷಗಳಿಂದ ಡಿಫೆನ್ಸ್‌ನಲ್ಲಿ ಬದಲಾವಣೆ ಕಂಡಿದೆ. 2 ಬಿಲಿಯನ್ ಇದ್ದ ಡಿಫೆನ್ಸ್ ರಫ್ತನ್ನ ಮುಂದೆ 5 ಬಿಲಿಯನ್ ‌ಗೆ ಹೆಚ್ಚಳ ಮಾಡಲಿದ್ದೇವೆ. ಫೈಟರ್ ಜೆಟ್ ವೇಗದಲ್ಲೇ ಭಾರತ ಮುನ್ನುಗ್ಗುತ್ತಿದೆ.

    ಆಕಾಶದಲ್ಲಿ ಪೈಲೆಟ್ ಹಾರಿಸೋ ರೀತಿ ಯಾವಾಗಲೂ ಎಲ್ಲಾ ರೀತಿಯಲ್ಲೂ ಮುನ್ನುಗ್ಗುತ್ತೇವೆ. ಕೇಂದ್ರದಲ್ಲಿ ಸ್ವತಂತ್ರ ಸರ್ಕಾರ ಇದೆ. ಹೀಗಾಗಿ ನಾವು ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಲು ಸಿದ್ದರಿದ್ದೇವೆ’ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts