More

    ಭೋರ್ಗರೆವ ಪ್ರವಾಹದ ಮಧ್ಯೆ ಪ್ರಸವ; ಎನ್​ಡಿಆರ್​ಎಫ್​ ರಕ್ಷಣಾ ದೋಣಿಯಲ್ಲಿ ಹೆಣ್ಣುಮಗು ಜನನ

    ಪ್ರವಾಹದಿಂದ ಭೋರ್ಗರೆದು ಹರಿಯುತ್ತಿದ್ದ ಬುರ್ಹಿ ಗಂಡಕ್​ ನದಿಯ ಮಧ್ಯೆ 25 ವರ್ಷದ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ.
    ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್​ಡಿಆರ್​ಎಫ್​)ದ ರಕ್ಷಣಾ ದೋಣಿಯಲ್ಲಿ ಇದ್ದ ಈಕೆಗೆ ಒಮ್ಮೆಲೇ ಹೆರಿಗೆ ನೋವು ಕಾಣಿಸಿಕೊಂಡಿದೆ. ನಂತರ ಬೋಟ್​ನಲ್ಲಿಯೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

    ಬಿಹಾರದ ಚಂಪಾರಣ್ ಜಿಲ್ಲೆಯ ಗೋಬಾರಿ ಗ್ರಾಮದಲ್ಲಿ ನಿರ್ಜನ ಪ್ರದೇಶದಲ್ಲಿದ್ದ ಮನೆಯಲ್ಲಿ ವಾಸವಾಗಿದ್ದ ಮಹಿಳೆ ಸೇರಿ ಅವಳ ಕುಟುಂಬದವರನ್ನು ದೋಣಿಯ ಮೂಲಕ ರಕ್ಷಣೆ ಮಾಡಲಾಗುತ್ತಿತ್ತು. ಇನ್ನೂ ಪ್ರವಾಹ ಹೆಚ್ಚಾದರೆ ಅವರು ವಾಸವಾಗಿದ್ದ ಮನೆಗಳೂ ಮುಳುಗುವ ಸಾಧ್ಯತೆ ಇದ್ದುದರಿಂದ ಎನ್​ಡಿಆರ್​ಎಫ್ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಇದನ್ನೂ ಓದಿ: ಶ‍್ರೀಹರಿಕೋಟಾಕ್ಕೂ ಕೋವಿಡ್ ಪ್ರವೇಶ – ಸೋಂಕು ಹರಡದಂತೆ ಕಠಿಣ ಇಸ್ರೋ ಮುಂಜಾಗ್ರತಾ ಕ್ರಮ

    ಆಕೆಯನ್ನು ದೋಣಿಯಲ್ಲಿ ಕೂರಿಸಿಕೊಂಡು ಕರೆದುಕೊಂಡು ಬರುತ್ತಿದ್ದಾಗ ಹೆರಿಗೆ ನೋವು ಶುರುವಾಯಿತು. ಮಧ್ಯಾಹ್ನ ಸುಮಾರು 1.40ರ ಹೊತ್ತಿಗೆ ಹೆಣ್ಣು ಮಗು ಹುಟ್ಟಿದೆ ಎಂದು ಎನ್​ಡಿಆರ್​ಎಫ್​ ಅಧಿಕಾರಿಗಳು ತಿಳಿಸಿದ್ದಾರೆ.

    ಈ ದೋಣಿಯಲ್ಲಿದ್ದ ಆಶಾ ಕಾರ್ಯಕರ್ತೆ ಮತ್ತು ಎನ್​ಡಿಆರ್​ಎಫ್​ ಸಿಬ್ಬಂದಿ ಸೇರಿ ಮಹಿಳೆಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ ಎಂದು ಎನ್​ಡಿಆರ್​ಎಫ್​ನ ದೆಹಲಿಯ ವಕ್ತಾರ ತಿಳಿಸಿದ್ದಾರೆ. ಇದನ್ನೂ ಓದಿ: ನಾಚಿಕೆ ಆಗಬೇಕು ತುಕ್ಡೆ ತುಕ್ಡೆ ಗ್ಯಾಂಗ್​ನವರಿಗೆ..ರಾಷ್ಟ್ರಕ್ಕೇ ಮಾರಕ ಅವರು: ಹುತಾತ್ಮ ಯೋಧನ ಪತ್ನಿಯ ಆಕ್ರೋಶ

    ತಾಯಿ ಹಾಗೂ ಮಗುವನ್ನು ಮೋತಿಹಾರಿ ಜಿಲ್ಲೆಯಲ್ಲಿರುವ ಬಂಜಾರಿಯಾ ಗ್ರಾಮದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರಿಗೂ ಯಾವುದೇ ತೊಂದರೆಯಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಎನ್​ಡಿಆರ್​ಎಫ್​ ಸಿಬ್ಬಂದಿಗೆ ವೈದ್ಯಕೀಯಕ್ಕೆ ಸಂಬಂಧಪಟ್ಟ ಕೆಲವು ತರಬೇತಿಗಳನ್ನೂ ಕೊಟ್ಟಿರಲಾಗುತ್ತದೆ. ಪ್ರಥಮ ಚಿಕಿತ್ಸೆಯ ಬಗ್ಗೆಯೂ ತಿಳಿದಿರುತ್ತದೆ. ಹಾಗೇ, ತುರ್ತು ಸಂದರ್ಭಗಳಲ್ಲಿ ಹೆರಿಗೆಯನ್ನೂ ಮಾಡಿಸಬಲ್ಲರು ಎಂದು ವಕ್ತಾರ ಹೇಳಿದ್ದಾರೆ.
    ಎನ್​ಡಿಆರ್​ಎಫ್​ ರಕ್ಷಣಾ ಕಾರ್ಯಾಚರಣೆಯ ವೇಳೆ 2013ರಿಂದ ಇದುವರೆಗೆ ಒಟ್ಟು 10 ಹೆರಿಗೆಗಳು ಆಗಿವೆ. ಓರ್ವ ಮಹಿಳೆ ಅವಳಿ ಮಕ್ಕಳಿಗೂ ಜನ್ಮ ನೀಡಿದ್ದರು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

    ಬಲು ರುಚಿ ಈ ‘ನ್ಯೂಡಲ್ಸ್​ ದೋಸಾ…’ಟ್ರೈ ಮಾಡಿ ನೋಡಿ..ಮಕ್ಕಳಿಗೂ ಕೊಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts