More

    ರಕ್ಷಣಾ ಸಚಿವಾಲಯದ ಜತೆ ರೂ. 1070 ಕೋಟಿಯ ಆರ್ಡರ್ ಒಪ್ಪಂದ: 1030% ಏರಿಕೆ ಕಂಡ ಶಿಪ್ಪಿಂಗ್ ಕಂಪನಿಗೆ ಷೇರಿಗೆ ಮತ್ತೆ ಬೇಡಿಕೆ

    ಮುಂಬೈ: ರಕ್ಷಣಾ ಸಚಿವಾಲಯವು 1070 ಕೋಟಿ ರೂಪಾಯಿ ಮೌಲ್ಯದ ಆರ್ಡರ್ ನೀಡಿದ ಹಿನ್ನೆಲೆಯಲ್ಲಿ ಶಿಪ್ಪಿಂಗ್ ಕಂಪನಿಯ ಷೇರುಗಳು ರಾಕೆಟ್ ವೇಗದಲ್ಲಿ ಏರಿಕೆ ಕಂಡಿವೆ.

    ಮಜಗಾನ್ ಡಾಕ್ ಶಿಪ್​ಬಿಲ್ಡರ್ಸ್ ಲಿಮಿಟೆಡ್​ (Mazagon Dock Shipbuilders Ltd) ರಕ್ಷಣಾ ಸಚಿವಾಲಯದಿಂದ 1070 ಕೋಟಿ ರೂ.ಗಳ ಕಾಮಗಾರಿ ಆದೇಶವನ್ನು ಪಡೆದುಕೊಂಡಿದೆ. ಈ ಒಪ್ಪಂದದ ಅಡಿಯಲ್ಲಿ, ಮಜಗಾಂವ್​ ಡಾಕ್ 14 ಸುಧಾರಿತಸ ವೇಗದ ಗಸ್ತು ಹಡಗುಗಳನ್ನು ನಿರ್ಮಿಸಬೇಕಾಗಿದೆ.

    ಈ ಆರ್ಡರ್​ ಸಿಕ್ಕ ಸುದ್ದಿ ಹರಡುತ್ತಿದ್ದಂತೆಯೇ ಮಜಗಾನ್ ಡಾಕ್ ಷೇರುಗಳ ಬೆಲೆ ಗುರುವಾರ ಶೇ.0.73 ರಷ್ಟು ಏರಿಕೆ ಕಂಡು 2343.50 ರೂಪಾಯಿಗೆ ತಲುಪಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.

    ಒಂದು ತಿಂಗಳ ಅವಧಿಯಲ್ಲಿ ಈ ಕಂಪನಿಯ ಷೇರು ಬೆಲೆ 10.47%ರಷ್ಟು ಹೆಚ್ಚಳವಾಗಿದೆ. ಈ ಕಂಪನಿಯ ಷೇರುಗಳು ಕಳೆದ 3 ವರ್ಷಗಳಲ್ಲಿ ಭಾರಿ ಏರಿಕೆ ಕಂಡಿವೆ. ಕಳೆದ 3 ವರ್ಷಗಳಲ್ಲಿ ಈ ಷೇರುಗಳ ಬೆಲೆ 1030% ರಷ್ಟು ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಈ ಷೇರುಗಳ ಬೆಲೆ ಶೇಕಡಾ 217.53ರಷ್ಟು ಏರಿಕೆಯಾಗಿದೆ.

    ಮಜಗಾಂವ್ ಡಾಕ್ ಷೇರುಗಳ 52 ವಾರದ ಗರಿಷ್ಠ ಮಟ್ಟ 2490 ರೂಪಾಯಿ ಇದ್ದರೆ, ಕನಿಷ್ಠ ಬೆಲೆ 612.80 ರೂಪಾಯಿ ಇದೆ.

    ಕಂಪನಿಯು ಹದಿನಾಲ್ಕು ವೇಗದ ಗಸ್ತು ನೌಕೆಗಳನ್ನು (ಎಫ್‌ಪಿವಿ) ನಿರ್ಮಿಸುವ ಅಗತ್ಯವಿದೆ ಎಂದು ಒಪ್ಪಂದವು ಹೇಳುತ್ತದೆ. ಎಫ್‌ಪಿವಿಗಳನ್ನು ಕೋಸ್ಟ್ ಗಾರ್ಡ್‌ಗೆ ನೀಡಲಾಗುತ್ತದೆ. ಈ ಕಂಪನಿಯು 63 ತಿಂಗಳೊಳಗೆ ವೇಗದ ಗಸ್ತು ಹಡಗುಗಳನ್ನು ಕಂಪನಿಯ ತಯಾರಿಸಿ ಪೂರೈಸಲಿದೆ. ಇದು ಫಾಸ್ಟ್ ಪೆಟ್ರೋಲ್ ವೆಸೆಲ್ಸ್ (ಎಫ್‌ಪಿವಿ) ಆಗಿದೆ.

    ಮೊದಲ ಮುಂಗಡ ಪಾವತಿಯನ್ನು ಬಿಡುಗಡೆ ಮಾಡಿದ ಸಮಯದಿಂದ 20 ತಿಂಗಳೊಳಗೆ ಮೊದಲ ಹಡಗನ್ನು ತಲುಪಿಸುವ ನಿರೀಕ್ಷೆ ಇದೆ. ನಂತರ ಪ್ರತಿ 3 ತಿಂಗಳಿಗೊಮ್ಮೆ ಹಡಗುಗಳ ವಿತರಣೆ ಮಾಡಬೇಕಾಗುತ್ತದೆ. ಸಂಪೂರ್ಣ ಒಪ್ಪಂದವು ಸುಮಾರು 1070 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.

    ಕಂಪನಿಯು ಇದರ ಬಗ್ಗೆ ಯಾವುದೇ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಸಂಸ್ಥೆಯ ಪ್ರಕಾರ, ಈ ಒಪ್ಪಂದವು ರಕ್ಷಣೆಗೆ ಸಂಬಂಧಿಸಿದ್ದಾಗಿದ್ದು, ನಿಯಮಗಳ ಪ್ರಕಾರ, ಈ ರೀತಿಯ ವ್ಯವಹಾರಗಳ ಎಲ್ಲ ಮಾಹಿತಿಯನ್ನು ಬಹಿರಂಗಪಡಿಸುವುದಕ್ಕೆ ಸೆಬಿಯಿಂದ ವಿನಾಯಿತಿ ಇದೆ.

    ಈ ಕಂಪನಿಯು ಕಡಲಾಚೆಯ ಮತ್ತು ಹಡಗು ನಿರ್ಮಾಣ ಯಾರ್ಡ್ ಆಗಿದೆ. ಇದರ ಮುಖ್ಯ ಚಟುವಟಿಕೆಗಳು ದುರಸ್ತಿ ಮತ್ತು ಹಡಗು ನಿರ್ಮಾಣ ಮತ್ತು ಕಡಲಾಚೆಯ ರಚನೆಗಳ ತಯಾರಿಕೆ ಆಗಿದೆ.

    ಈ ಕಮಫನಿಯು ಯುದ್ಧನೌಕೆಗಳು, ವಿಧ್ವಂಸಕಗಳು, ಕ್ಷಿಪಣಿ ದೋಣಿಗಳು, ಕಾರ್ವೆಟ್‌ಗಳು, ಗಸ್ತು ಹಡಗುಗಳು ಮತ್ತು ರಕ್ಷಣಾ ಉದ್ಯಮಕ್ಕಾಗಿ ಜಲಾಂತರ್ಗಾಮಿ ನೌಕೆಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.
    ಭಾರತೀಯ ನೌಕಾಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್ ಇದರ ಗ್ರಾಹಕ ಸಂಸ್ಥೆಗಳಾಗಿವೆ. ಈ ಕಂಪನಿಯು ಭಾರತದ ಮಹಾರಾಷ್ಟ್ರದ ಮುಂಬೈನಲ್ಲಿದೆ. ಇದಲ್ಲದೆ, ಅಮೆರಿಕ ಸರ್ಕಾರವು ಇತ್ತೀಚೆಗೆ ಈ ಕಂಪನಿಯ ಒಡೆತನದ ಅಮೆರಿಕದ ನೌಕಾಪಡೆಯ ಹಡಗುಗಳಲ್ಲಿ ಪ್ರಯಾಣದ ದುರಸ್ತಿ ಕಾರ್ಯವನ್ನು ಅನುಮತಿಸುವ ಒಪ್ಪಂದಕ್ಕೆ ಸಹಿ ಹಾಕಿದೆ.

    2 ವಾರಗಳಲ್ಲಿ 69%, ಒಂದೇ ದಿನದಲ್ಲಿ 10% ಏರಿಕೆ: ಬ್ಯಾಂಕ್​ ಷೇರುಗಳಲ್ಲಿ ಹರಿದ ಧನಲಕ್ಷ್ಮಿ..

    ಸರ್ಕಾರಿ ಬ್ಯಾಂಕ್ ತ್ರೈಮಾಸಿಕ ಲಾಭ 60% ಹೆಚ್ಚಳ: 6 ತಿಂಗಳಲ್ಲಿ ಷೇರು ಬೆಲೆ ದುಪ್ಪಟ್ಟಾಗಬಹುದು ಎನ್ನುತ್ತಾರೆ ವಿಶ್ಲೇಷಕರು

    ನಷ್ಟದಲ್ಲಿರುವ ಟಾಟಾ ಗ್ರೂಪ್​ ಕಂಪನಿ, ಸದ್ಯ ಷೇರು ಬೆಲೆ ಕುಸಿತ: ಹೀಗಿದ್ದರೂ ಮುಂದೆ ಲಾಭ ಮಾಡಿಕೊಳ್ಳಲು ಖರೀದಿಸಿ ಎನ್ನುತ್ತಿದ್ದಾರೆ ತಜ್ಞರು… ಟಾರ್ಗೆಟ್​ ಪ್ರೈಸ್​ Rs. 1100

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts