More

    ನಷ್ಟದಲ್ಲಿರುವ ಟಾಟಾ ಗ್ರೂಪ್​ ಕಂಪನಿ, ಸದ್ಯ ಷೇರು ಬೆಲೆ ಕುಸಿತ: ಹೀಗಿದ್ದರೂ ಮುಂದೆ ಲಾಭ ಮಾಡಿಕೊಳ್ಳಲು ಖರೀದಿಸಿ ಎನ್ನುತ್ತಿದ್ದಾರೆ ತಜ್ಞರು… ಟಾರ್ಗೆಟ್​ ಪ್ರೈಸ್​ Rs. 1100

    ಮುಂಬೈ: ತೇಜಸ್ ನೆಟ್‌ವರ್ಕ್ಸ್ ಲಿಮಿಟೆಡ್ (Tejas Networks Ltd) ಇದು ಟಾಟಾ ಗ್ರೂಪ್ ಕಂಪನಿಯಾಗಿದೆ. ಈ ಕಂಪನಿಯ ಷೇರುಗಳ ಬೆಲೆ ಮಂಗಳವಾರ ಒಂದೇ ದಿನದಲ್ಲಿ 10 ಪ್ರತಿಶತದಷ್ಟು ಕಡಿಮೆಯಾಗಿದೆ. ಗುರುವಾರ ಕೂಡ 1.81ರಷ್ಟು ಕುಸಿತ ಕಂಡಿದೆ. ಗುರುವಾರ ಕಂಪನಿಯ ಷೇರುಗಳ ಬೆಲೆ 771.20 ರೂಪಾಯಿ ತಲುಪಿತು.

    ಡಿಸೆಂಬರ್ ತ್ರೈಮಾಸಿಕದ ಫಲಿತಾಂಶಗಳ ನಂತರ ಷೇರುಗಳಲ್ಲಿ ಈ ಇಳಿಕೆ ಕಂಡುಬಂದಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ನಷ್ಟಕ್ಕೆ ಸಿಲುಕಿದೆ.

    ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ (ಕ್ಯೂ3 ಎಫ್‌ವೈ24) ಕಂಪನಿಯ ನಷ್ಟವು 44.87 ಕೋಟಿ ರೂ. ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯ ನಷ್ಟ 15.15 ಕೋಟಿ ರೂ. ಆಗಿತ್ತು.

    ಅಂದರೆ ತೇಜಸ್ ನೆಟ್‌ವರ್ಕ್‌ನ ನಷ್ಟಗಳು ವಾರ್ಷಿಕವಾಗಿ ಹೆಚ್ಚುತ್ತಿವೆ. ಇದಾದ ನಂತರವೂ ಮಾರುಕಟ್ಟೆಯಲ್ಲಿ ತಜ್ಞರು ಈ ಸ್ಟಾಕ್ ಬಗ್ಗೆ ಆಸಕ್ತಿ ಹೊಂದಿದ್ದು, ಖರೀದಿಸುವಂತೆ ಹೂಡಿಕೆದಾರರಿಗೆ ಸಲಹೆ ನೀಡಿದ್ದಾರೆ.

    ನೀವು ದೀರ್ಘಾವಧಿಯವರೆಗೆ ತೇಜಸ್ ನೆಟ್‌ವರ್ಕ್‌ ಷೇರುಗಳನ್ನು ಖರೀದಿ ಮಾಡಿಟ್ಟುಕೊಂಡೆರೆ ಅದು 1100 ರಿಂದ 1400 ರೂಪಾಯಿಗೆ ತಲುಪಬಹುದು ಎಂಬುದು ತಜ್ಞರ ಅಂದಾಜು.

    ಬೆಲೆ ಗುರಿ ಏನು?:

    ಗ್ಲೋಬಲ್ ಫೈನಾನ್ಶಿಯಲ್ ಬ್ರೋಕರೇಜ್​ ಸಂಸ್ಥೆಯು ಈ ಸ್ಟಾಕ್‌ನ ಬೆಲೆ ಗುರಿಯನ್ನು ಈಗ 1,025 ರೂಪಾಯಿಗೆ ನಿಗದಿಪಡಿಸಿದೆ. ಈ ಮೊದಲು 1,050 ರೂಪಾಯಿಗೆ ಅದು ಗುರಿ ನಿಗದಿಪಡಿಸಿತ್ತು. ಗುರಿ ಬೆಲೆಯಲ್ಲಿ ಸ್ವಲ್ಪ ಕಡಿಮೆ ಮಾಡಿದರೂ ಖರೀದಿ ರೇಟಿಂಗನ್ನು ಅದು ಹಾಗೆಯೇ ಮುಂದುವರಿಸಿದೆ.

    ಮುಂದಿನ ತ್ರೈಮಾಸಿಕಗಳಲ್ಲಿ ಇದು ಸ್ವಲ್ಪ ವಿಭಿನ್ನವಾಗಿರುತ್ತದೆ ಎಂದು ಈ ಸಂಸ್ಥೆಯು ನಿರೀಕ್ಷಿಸುತ್ತದೆ.

    ಆದಾಯದಲ್ಲಿ ಹೆಚ್ಚಳ:

    ಮೂರನೇ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳ ಆದಾಯವು 103.96 ಪ್ರತಿಶತಕ್ಕೆ ಹೆಚ್ಚಿ, 559.96 ಕೋಟಿ ರೂ.ಗೆ ಏರಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ 274.55 ಕೋಟಿ ರೂ. ಆದಾಯ ಇತ್ತು.

    ತೇಜಸ್ ಪ್ರಕಾರ ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ದಾಸ್ತಾನು 2,683 ಕೋಟಿ ರೂ.ಗೆ ಏರಿಕೆಯಾಗಿದೆ. ಹೆಚ್ಚಿದ ದಾಸ್ತಾನು ಮಟ್ಟದಿಂದಾಗಿ ಇದೇ ಅವಧಿಯಲ್ಲಿ, ದುಡಿಯುವ ಬಂಡವಾಳವು 671 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ.

    ಮೂರನೇ ತ್ರೈಮಾಸಿಕದಲ್ಲಿ ತೇಜಸ್ ಮತ್ತು ಅದರ ಅಂಗಸಂಸ್ಥೆಗಳು 31 ಪೇಟೆಂಟ್‌ಗಳನ್ನು ಪಡೆದಿವೆ. ತೇಜಸ್ ನೆಟ್‌ವರ್ಕ್ ಟಾಟಾ ಗ್ರೂಪ್ ಕಂಪನಿಯಾಗಿದೆ.

    ಡಿಸೆಂಬರ್ 2023 ರಲ್ಲಿ, ಪ್ರವರ್ತಕರು ತೇಜಸ್ ನೆಟ್‌ವರ್ಕ್‌ನ 55.80 ಪ್ರತಿಶತವನ್ನು ಹೊಂದಿದ್ದಾರೆ. ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಪ್ಯಾಂಟೋನ್ ಫಿನ್‌ವೆಸ್ಟ್ ಲಿಮಿಟೆಡ್ ಇದರಲ್ಲಿ ಗಮನಾರ್ಹ ಪಾಲನ್ನು ಹೊಂದಿದೆ.

    ಕಂಪನಿಯು ಡೇಟಾ ಮತ್ತು ಆಪ್ಟಿಕಲ್ ನೆಟ್‌ವರ್ಕಿಂಗ್‌ಗಾಗಿ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಕಂಪನಿಯು ತನ್ನ ನೆಟ್‌ವರ್ಕಿಂಗ್ ಉತ್ಪನ್ನಗಳನ್ನು ಟೆಲಿಕಾಂ ಸೇವಾ ಕಂಪನಿಗಳು, ಇಂಟರ್ನೆಟ್ ಸೇವಾ ಪೂರೈಕೆದಾರರು ಮತ್ತು 75 ಕ್ಕೂ ಹೆಚ್ಚು ದೇಶಗಳಲ್ಲಿ ರಕ್ಷಣಾ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಅಭಿವೃದ್ಧಿಪಡಿಸಿ, ಮಾರಾಟ ಮಾಡುತ್ತದೆ. ಈ ಕಂಪನಿಯನ್ನು ಹಿಂದೆ ತೇಜಸ್ ನೆಟ್‌ವರ್ಕ್ಸ್ ಇಂಡಿಯಾ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು.

    Byju’s ದಿವಾಳಿಯ ಅಂಚಿಗೆ ಬಂದಿದ್ದೇಕೆ?: ಆನ್​ಲೈನ್​ ಎಡ್​-ಟೆಕ್​ ಕಂಪನಿ ವಿರುದ್ಧ ಸಾಲದಾತರಿಂದ ಅರ್ಜಿ

    ಈ ರೈಲ್ವೆ ಷೇರು 3 ತಿಂಗಳಲ್ಲಿ ದುಪ್ಪಟ್ಟು: ಈಗ ರೂ 162 ಕೋಟಿಯ ಕಾಮಗಾರಿ ಆದೇಶ ಪಡೆದ ತಕ್ಷಣವೇ ಮತ್ತೆ ಗಗನಕ್ಕೆ

    ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ಷೇರು 5 ದಿನಗಳಲ್ಲಿಯೇ ಶೇ. 80 ಹೆಚ್ಚಳ: 1ಕ್ಕೆ 4 ಬೋನಸ್​ ಸ್ಟಾಕ್​ ನೀಡಲು ಸಜ್ಜಾಗಿದೆ ಕಂಪನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts