More

    ಈ ರೈಲ್ವೆ ಷೇರು 3 ತಿಂಗಳಲ್ಲಿ ದುಪ್ಪಟ್ಟು: ಈಗ ರೂ 162 ಕೋಟಿಯ ಕಾಮಗಾರಿ ಆದೇಶ ಪಡೆದ ತಕ್ಷಣವೇ ಮತ್ತೆ ಗಗನಕ್ಕೆ

    ಮುಂಬೈ: ಸಾರ್ವಜನಿಕ ವಲಯದ ಉದ್ಯಮವಾದ ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾದ (RailTel Corporation of India Ltd.) ಷೇರುಗಳು ಗುರುವಾರ ಒಂದೇ ದಿನದಲ್ಲಿ ಶೇಕಡಾ 10.15% ರಷ್ಟು ಹೆಚ್ಚಳ ಕಂಡಿವೆ. ಈಗ ಈ ಕಂಪನಿ ಷೇರು ಬೆಲೆ 437.75 ರೂಪಾಯಿಗೆ ತಲುಪಿದೆ.

    ಡಿಸೆಂಬರ್ 31, 2023 ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಕಂಪನಿಯು ಆದಾಯ ಮತ್ತು ನಿವ್ವಳ ಲಾಭದಲ್ಲಿ ದೃಢವಾದ ಬೆಳವಣಿಗೆಯನ್ನು ವರದಿ ಮಾಡಿದ ನಂತರ ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾದ ಷೇರುಗಳು ಗುರುವಾರ ಅಗಾಧ ಏರಿಕೆ ಕಂಡವು.

    ಈ ಕಂಪನಿಯ ಷೇರುಗಳು ಕಳೆದ 1 ತಿಂಗಳಲ್ಲಿ 42% ರಷ್ಟು ಏರಿಕೆಯಾಗಿದೆ, ಕಳೆದ 3 ತಿಂಗಳಲ್ಲಿ 100% ಏರಿಕೆಯಾಗಿದೆ, ಕಳೆದ 1-ವರ್ಷದಲ್ಲಿ 237% ನಷ್ಟು ಲಾಭವನ್ನು ನೀಡುವ ಮೂಲಕ ಮಲ್ಟಿಬ್ಯಾಗರ್​ ಸ್ಟಾಕ್​ ಆಗಿ ಹೊರಹೊಮ್ಮಿದೆ.

    ಭಾರತೀಯ ರೈಲ್ವೆಯ ಟೆಲಿಕಾಂ ಮೂಲಸೌಕರ್ಯ ವಿಭಾಗದ ಈ ಕಂಪನಿಯು ಡಿಸೆಂಬರ್ ತ್ರೈಮಾಸಿಕದಲ್ಲಿ 674.81 ಕೋಟಿ ರೂಪಾಯಿ ಆದಾಯ ಗಳಿಸಿದ್ದು, ಇದು ವರ್ಷದಿಂದ ವರ್ಷಕ್ಕೆ 47% ಬೆಳವಣಿಗೆಯಾಗಿದೆ. ಕಂಪನಿಯ ಆದಾಯವು ಹಿಂದಿನ ವರ್ಷದ ಅವಧಿಯಲ್ಲಿ 462.17 ಕೋಟಿ ರೂಪಾಯಿ ಇತ್ತು.

    ನವೋದಯ ವಿದ್ಯಾಲಯ ಸಮಿತಿಯಿಂದ JNV ಶಾಲೆಗಳಲ್ಲಿ PM SHRI ಯೋಜನೆಯಡಿಯಲ್ಲಿ ಸಮಗ್ರ ಮೂಲಸೌಕರ್ಯ ಮತ್ತು IT ಪರಿಹಾರಗಳ ಪೂರೈಕೆ ಮತ್ತು ಅನುಷ್ಠಾನಕ್ಕಾಗಿ ರೂ. 162.73 ಕೋಟಿ ಮೊತ್ತದ ಕಾಮಗಾರಿ ಆದೇಶವನ್ನು ಸ್ವೀಕರಿಸಿದ ನಂತರ (ತೆರಿಗೆಗಳು ಸೇರಿದಂತೆ) ಷೇರು ಬೆಲೆ ಗಗನಕ್ಕೆ ಏರಿದೆ.

    ಮೂರನೇ ತ್ರೈಮಾಸಿಕದಲ್ಲಿ ರೈಲ್‌ಟೆಲ್ ಕಾರ್ಪೊರೇಶನ್‌ನ ತೆರಿಗೆಯ ನಂತರದ ಲಾಭವು 62.14 ಕೋಟಿ ರೂಪಾಯಿ ಆಗಿದೆ. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ 31.95 ಕೋಟಿ ರೂಪಾಯಿ ಲಾಭ ಇತ್ತು. ಇದಕ್ಕೆ ಹೋಲಿಸಿದರೆ ಈಗ ಲಾಭವು ದ್ವಿಗುಣಗೊಂಡಿದೆ. ಆದರೆ, ನಿವ್ವಳ ಲಾಭವು ಹಿಂದಿನ ತ್ರೈಮಾಸಿಕದಲ್ಲಿ 68.15 ಕೋಟಿ ರೂ. ಇದ್ದು, ಇದಕ್ಕೆ ಹೋಲಿಸಿದರೆ ತ್ರೈಮಾಸಿಕದಿಂದ 9.67% ಕಡಿಮೆಯಾಗಿದೆ.

    ಡಿಸೆಂಬರ್ 31, 2023 ಕ್ಕೆ ಕೊನೆಗೊಳ್ಳುವ ಒಂಬತ್ತು ತಿಂಗಳ ಅವಧಿಗೆ, ಕಂಪನಿಯು ಒಟ್ಟು 1,770.37 ಕೋಟಿ ರೂ. ಆದಾಯವನ್ನು ವರದಿ ಮಾಡಿದೆ, ಇದು ವರ್ಷದ ಹಿಂದಿನ ಇದೇ ಅವಧಿಯಲ್ಲಿ 1,287.35 ಕೋಟಿ ರೂ.ಗೆ ಹೋಲಿಸಿದರೆ. ಕಂಪನಿಯ ನಿವ್ವಳ ಲಾಭವು ಒಂಬತ್ತು ತಿಂಗಳ ಅವಧಿಯಲ್ಲಿ 168.68 ಕೋಟಿ ರೂ.ಗೆ ಏರಿಕೆಯಾಗಿದೆ, ಹಣಕಾಸಿನ ವರ್ಷದ ಹಿಂದಿನ ಇದೇ ಅವಧಿಯಲ್ಲಿ 113 ಕೋಟಿ ರೂ. ಇತ್ತು.

    ಜೆಎನ್‌ವಿಎಸ್ ಶಾಲೆಗಳಲ್ಲಿ ಸಮಗ್ರ ಮೂಲಸೌಕರ್ಯ ಮತ್ತು ಐಟಿ ಪರಿಹಾರಗಳ ಪೂರೈಕೆ ಮತ್ತು ಅನುಷ್ಠಾನಕ್ಕಾಗಿ ನವೋದಯ ವಿದ್ಯಾಲಯ ಸಮಿತಿಯಿಂದ 162.73 ಕೋಟಿ ರೂ. ಮೌಲ್ಯದ ವರ್ಕ್ ಆರ್ಡರ್ ಅನ್ನು ಪಡೆದಿರುವುದಾಗಿ ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ಪ್ರತ್ಯೇಕ ಫೈಲಿಂಗ್‌ನಲ್ಲಿ ರೈಲ್‌ಟೆಲ್ ಕಾರ್ಪೊರೇಷನ್ ತಿಳಿಸಿದೆ.

    ಪಿಎಂ ಶ್ರೀ ಯೋಜನೆಯಡಿ ಒಪ್ಪಂದ ಮಾಡಿಕೊಳ್ಳಲಾಗಿದ್ದ, ಈ ಆರ್ಡರನ್ನು 180 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸರ್ಕಾರಿ ಸ್ವಾಮ್ಯದ ಕಂಪನಿಯು ತಿಳಿಸಿದೆ.

    ಈ ತಿಂಗಳ ಆರಂಭದಲ್ಲಿ, ರೈಲ್‌ಟೆಲ್ 4 ಮತ್ತು 5 ನೇ ತರಗತಿಗಳಿಗೆ ಬೋಧನಾ-ಕಲಿಕೆ ಸಾಮಗ್ರಿಗಳ ಪೂರೈಕೆಗಾಗಿ ಬಿಹಾರ ಶಿಕ್ಷಣ ಪ್ರಾಜೆಕ್ಟ್ ಕೌನ್ಸಿಲ್‌ನಿಂದ 39.88 ಕೋಟಿ ರೂ. ಮೌಲ್ಯದ ಆರ್ಡರ್​ ಪಡೆದುಕೊಂಡಿದೆ.

    3 ವರ್ಷಗಳಲ್ಲಿ 1370% ಆದಾಯ: ಷೇರುದಾರರಿಗೆ 3ನೇ ಬಾರಿ ಬಹುಮಾನ ನೀಡಲು ಸಜ್ಜಾಗಿದೆ ಕಂಪನಿ

    ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ಷೇರು 5 ದಿನಗಳಲ್ಲಿಯೇ ಶೇ. 80 ಹೆಚ್ಚಳ: 1ಕ್ಕೆ 4 ಬೋನಸ್​ ಸ್ಟಾಕ್​ ನೀಡಲು ಸಜ್ಜಾಗಿದೆ ಕಂಪನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts