More

    2 ವಾರಗಳಲ್ಲಿ 69%, ಒಂದೇ ದಿನದಲ್ಲಿ 10% ಏರಿಕೆ: ಬ್ಯಾಂಕ್​ ಷೇರುಗಳಲ್ಲಿ ಹರಿದ ಧನಲಕ್ಷ್ಮಿ..

    ಮುಂಬೈ: ಷೇರು ಮಾರುಕಟ್ಟೆಯಲ್ಲಿ ಕುಸಿತ ಕಾಣುತ್ತಿದ್ದರೂ ಈ ಬ್ಯಾಂಕ್​ ಸ್ಟಾಕ್​ ಬೆಲೆ ಏರುತ್ತಲೇ ಸಾಗಿದೆ. ಧನಲಕ್ಷ್ಮಿ ಬ್ಯಾಂಕ್ ಷೇರು ಬೆಲೆಯಲ್ಲಿ ಕಳೆದ 9 ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿವೆ. ಈ ಬ್ಯಾಂಕ್ ಷೇರುಗಳು ಗುರುಗಳು 10 ಪ್ರತಿಶತದಷ್ಟು ಏರಿಕೆ ಕಂಡು, 51.20 ರೂಪಾಯಿ ತಲುಪಿದವು.

    ದುರ್ಬಲ ಮಾರುಕಟ್ಟೆಯಲ್ಲೂ ಧನಲಕ್ಷ್ಮಿ ಬ್ಯಾಂಕ್ ಷೇರುಗಳು ಸದ್ದು ಮಾಡುತ್ತಿವೆ. ಈ ಬ್ಯಾಂಕಿನ ಷೇರಿನ ಬೆಲೆ 2 ವಾರಗಳಲ್ಲಿ 69% ಜಿಗಿದಿದೆ. ಧನಲಕ್ಷ್ಮಿ ಬ್ಯಾಂಕ್ ಷೇರುಗಳು 9 ವರ್ಷಗಳ ಗರಿಷ್ಠ ಮಟ್ಟವನ್ನು ಈಗ ತಲುಪಿವೆ.
    ಇದು ಆಗಸ್ಟ್ 2014 ರ ನಂತರ ಈ ಖಾಸಗಿ ಬ್ಯಾಂಕ್ ಷೇರುಗಳ ಅತ್ಯಧಿಕ ಬೆಲೆಯಾಗಿದೆ. ಬ್ಯಾಂಕಿನ ಷೇರುಗಳು ಬುಧವಾರ 46.56 ರೂ. ಇದ್ದವು. ಈ ಬ್ಯಾಂಕಿನ ಷೇರುಗಳ 52 ವಾರದ ಕನಿಷ್ಠ ಬೆಲೆ 13.50 ರೂಪಾಯಿ ಇದೆ.

    ಕಳೆದ 2 ವಾರಗಳಲ್ಲಿ ಧನಲಕ್ಷ್ಮಿ ಬ್ಯಾಂಕ್ ಷೇರುಗಳು ಬಲವಾದ ಏರಿಕೆ ಕಂಡಿವೆ. ಈ ಖಾಸಗಿ ವಲಯದ ಬ್ಯಾಂಕ್‌ನ ಷೇರುಗಳು ಕಳೆದ 2 ವಾರಗಳಲ್ಲಿ 69% ಕ್ಕಿಂತ ಅಧಿಕ ಏರಿಕೆ ಕಂಡಿದೆ.

    ಜನವರಿ 11, 2024 ರಂದು ಧನಲಕ್ಷ್ಮಿ ಬ್ಯಾಂಕ್‌ನ ಷೇರುಗಳು 30.29 ರೂ. ಇದ್ದು, ಜನವರಿ 25ರ ಗುರುವಾರದಂದು ಖಾಸಗಿ ಬ್ಯಾಂಕ್‌ಗಳ ಷೇರುಗಳು 51.21 ರೂಪಾಯಿಗೆ ತಲುಪಿವೆ. ಕೊನೆಯ 5 ದಿನಗಳಲ್ಲಿ ಷೇರುಗಳ ಬೆಲೆ 29.6% ಏರಿಕೆಯಾಗಿದೆ. ಈ ವರ್ಷ ಇಲ್ಲಿಯವರೆಗೆ, ಧನಲಕ್ಷ್ಮಿ ಬ್ಯಾಂಕ್ ಷೇರುಗಳು 65.5 ಪ್ರತಿಶತದಷ್ಟು ಏರಿಕೆಯಾಗಿದೆ. ಕಳೆದ ಒಂದು ಈ ಬ್ಯಾಂಕ್ ಷೇರುಗಳ ಬೆಲೆ 74% ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಷೇರುಗಳ ಬೆಲೆ ರೂ. 29.41 ರಿಂದ ರೂ.51.21ಕ್ಕೆ ಏರಿಕೆಯಾಗಿದೆ.

    ಕಳೆದ ಒಂದು ವರ್ಷದಲ್ಲಿ ಧನಲಕ್ಷ್ಮಿ ಬ್ಯಾಂಕ್ ಷೇರುಗಳ ಬೆಲೆ 197% ರಷ್ಟು ಏರಿಕೆಯಾಗಿದೆ. 27 ಜನವರಿ 2023 ರಂದು ಈ ಖಾಸಗಿ ವಲಯದ ಬ್ಯಾಂಕ್‌ನ ಷೇರುಗಳ ಬೆಲೆ 17.20 ರೂ ಇತ್ತು. ಕಳೆದ 6 ತಿಂಗಳಲ್ಲಿ, ಧನಲಕ್ಷ್ಮಿ ಬ್ಯಾಂಕ್‌ನ ಷೇರುಗಳು ಪ್ರಚಂಡ 145% ರಷ್ಟು ಹೆಚ್ಚಾಗಿವೆ.

    ಧನಲಕ್ಷ್ಮಿ ಬ್ಯಾಂಕ್ ಕೇರಳದ ತ್ರಿಶೂರ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಈ ಬ್ಯಾಂಕ್ 257 ಶಾಖೆಗಳನ್ನು ಹೊಂದಿದೆ.

    ಸರ್ಕಾರಿ ಬ್ಯಾಂಕ್ ತ್ರೈಮಾಸಿಕ ಲಾಭ 60% ಹೆಚ್ಚಳ: 6 ತಿಂಗಳಲ್ಲಿ ಷೇರು ಬೆಲೆ ದುಪ್ಪಟ್ಟಾಗಬಹುದು ಎನ್ನುತ್ತಾರೆ ವಿಶ್ಲೇಷಕರು

    ನಷ್ಟದಲ್ಲಿರುವ ಟಾಟಾ ಗ್ರೂಪ್​ ಕಂಪನಿ, ಸದ್ಯ ಷೇರು ಬೆಲೆ ಕುಸಿತ: ಹೀಗಿದ್ದರೂ ಮುಂದೆ ಲಾಭ ಮಾಡಿಕೊಳ್ಳಲು ಖರೀದಿಸಿ ಎನ್ನುತ್ತಿದ್ದಾರೆ ತಜ್ಞರು… ಟಾರ್ಗೆಟ್​ ಪ್ರೈಸ್​ Rs. 1100

    Byju’s ದಿವಾಳಿಯ ಅಂಚಿಗೆ ಬಂದಿದ್ದೇಕೆ?: ಆನ್​ಲೈನ್​ ಎಡ್​-ಟೆಕ್​ ಕಂಪನಿ ವಿರುದ್ಧ ಸಾಲದಾತರಿಂದ ಅರ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts