More

    ಸರ್ಕಾರಿ ಬ್ಯಾಂಕ್ ತ್ರೈಮಾಸಿಕ ಲಾಭ 60% ಹೆಚ್ಚಳ: 6 ತಿಂಗಳಲ್ಲಿ ಷೇರು ಬೆಲೆ ದುಪ್ಪಟ್ಟಾಗಬಹುದು ಎನ್ನುತ್ತಾರೆ ವಿಶ್ಲೇಷಕರು

    ಮುಂಬೈ: ಸಾರ್ವಜನಿಕ ವಲಯದ (ಪಿಎಸ್​ಯು) ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಲಿಮಿಟೆಡ್ (UNION BANK OF INDIA) ಷೇರುಗಳು ಇತ್ತೀಚೆಗೆ ಅದರ ಮೂರನೇ ತ್ರೈಮಾಸಿಕದಲ್ಲಿ (Q3FY24) ಉತ್ತಮ ಫಲಿತಾಂಶ ಹಾಗೂ ಕಾರ್ಯಕ್ಷಮತೆ ತೋರಿಸಿದ ನಂತರ ಬ್ರೋಕರೇಜ್‌ ಸಂಸ್ಥೆಗಳ ದೃಷ್ಟಿ ಈ ಸ್ಟಾಕ್​ ಮೇಲೆ ನೆಟ್ಟಿದೆ. 6 ತಿಂಗಳಲ್ಲಿ ಈ ಸ್ಟಾಕ್​ ಬೆಲೆ ದುಪ್ಪಟ್ಟಾಗಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

    ಜನಪ್ರಿಯ ಬ್ರೋಕರೇಜ್ ಸಂಸ್ಥೆಯು ಈ ಪಿಎಸ್​ಯು ಬ್ಯಾಂಕ್ ಸ್ಟಾಕ್‌ನಲ್ಲಿ ಹೂಡಿಕೆ ಮಾಡಲು ಸಲಹೆ ನೀಡಿದೆ. ಜೊತೆಗೆ ಪ್ರತಿ ಷೇರಿನ ಬೆಲೆಯ ಗುರಿಯನ್ನು ಹೆಚ್ಚಿಸಿದೆ.

    2023 ರ ಅಕ್ಟೋಬರ್ ಮತ್ತು ಡಿಸೆಂಬರ್ ನಡುವಿನ ಮೂರನೇ ತ್ರೈಮಾಸಿಕದಲ್ಲಿ ಬ್ಯಾಂಕಿನ ನಿವ್ವಳ ಲಾಭದಲ್ಲಿ 60 ಪ್ರತಿಶತದಷ್ಟು ಹೆಚ್ಚಳವಾಗಿದೆ.

    ತ್ರೈಮಾಸಿಕ ಫಲಿತಾಂಶಗಳು:

    ಮೂರನೇ ತ್ರೈಮಾಸಿಕದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿವ್ವಳ ಲಾಭವು ಅರವತ್ತು ಪ್ರತಿಶತದಷ್ಟು (ವರ್ಷದಿಂದ ವರ್ಷಕ್ಕೆ) ಹೆಚ್ಚಳ ಕಂಡು 3,590 ಕೋಟಿ ರೂಪಾಯಿಗೆ ತಲುಪಿದೆ. ಇದೇ ಅವಧಿಯಲ್ಲಿ ಹಿಂದಿನ ವರ್ಷದ ನಿವ್ವಳ ಲಾಭವು 2245 ಕೋಟಿ ರೂ. ಇತ್ತು.

    ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಲಿಮಿಟೆಡ್ ಭಾರತ ಮೂಲದ ಬ್ಯಾಂಕಿಂಗ್ ಕಂಪನಿಯಾಗಿದೆ. ಇದು ಸಂಪತ್ತು ನಿರ್ವಹಣೆಯ ವ್ಯವಹಾರ, ಬ್ಯಾಂಕಿಂಗ್ ಸೇವೆಗಳು, ಮರ್ಚೆಂಟ್ ಬ್ಯಾಂಕಿಂಗ್, ಸರ್ಕಾರಿ ವ್ಯವಹಾರ, ಮ್ಯೂಚುಯಲ್ ಫಂಡ್‌ಗಳು, ಏಜೆನ್ಸಿ ವ್ಯಾಪಾರ ವಿಮೆ ಮುಂತಾದವುಗಳಲ್ಲಿ ತೊಡಗಿಸಿಕೊಂಡಿದೆ.

    ಸ್ಟಾಕ್ ಟಾರ್ಗೆಟ್​ ಪ್ರೈಸ್​:

    ಮೂರನೇ ತ್ರೈಮಾಸಿಕದಲ್ಲಿ ಯೂನಿಯನ್ ಬ್ಯಾಂಕಿನ ಗಳಿಕೆಯು ಆಕರ್ಷಕವಾಗಿದೆ ಎಂದು ಬ್ರೋಕರೇಜ್ ಹೌಸ್ ಹೇಳಿಕೊಂಡಿದೆ.

    ಈ ಹಿನ್ನೆಲೆಯಲ್ಲಿ ಬ್ರೋಕರೇಜ್ ಸಂಸ್ಥೆಯು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬಗ್ಗೆ ಖರೀದಿದಾರರಿಗೆ ಸಲಹೆಗಳನ್ನು ನೀಡಿದೆ. ಪ್ರತಿ ಷೇರಿನ ಗುರಿ ಬೆಲೆಯನ್ನು 150ಗೆ ರೂಪಾಯಿಗೆ ಅದು ನಿಗದಿಪಡಿಸಿದೆ. 140.35

    ಈ ರೀತಿಯಾಗಿ, ಷೇರುಗಳ ಬೆಲೆಯು ಅದರ ಪ್ರಸ್ತುತ ಮೌಲ್ಯಕ್ಕಿಂತ 10 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚು ಏರಿಕೆಯಾಗಬಹುದು.

    ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಷೇರು ಬೆಲೆ ಕಳೆದ ಒಂದು ವರ್ಷದಲ್ಲಿ ಶೇಕಡಾ 79ರಷ್ಟು ಹೆಚ್ಚಾಗಿದೆ. ಕಳೆದ 3 ತಿಂಗಳಲ್ಲಿ ಶೇಕಡಾ 47 ಹಾಗೂ ಕಳೆದ 1 ತಿಂಗಳಲ್ಲಿ ಶೇಕಡಾ 18ರಷ್ಟು ಹೆಚ್ಚಳವನ್ನು ಕಂಡಿದೆ.
    ಈ ಸ್ಟಾಕ್‌ನ 52 ವಾರದ ಗರಿಷ್ಠ ಬೆಲೆ ರೂ 145.25 ಮತ್ತು ಕನಿಷ್ಠ ಬೆಲೆ ರೂ. 60.35 ಆಗಿದೆ.

    ನಷ್ಟದಲ್ಲಿರುವ ಟಾಟಾ ಗ್ರೂಪ್​ ಕಂಪನಿ, ಸದ್ಯ ಷೇರು ಬೆಲೆ ಕುಸಿತ: ಹೀಗಿದ್ದರೂ ಮುಂದೆ ಲಾಭ ಮಾಡಿಕೊಳ್ಳಲು ಖರೀದಿಸಿ ಎನ್ನುತ್ತಿದ್ದಾರೆ ತಜ್ಞರು… ಟಾರ್ಗೆಟ್​ ಪ್ರೈಸ್​ Rs. 1100

    Byju’s ದಿವಾಳಿಯ ಅಂಚಿಗೆ ಬಂದಿದ್ದೇಕೆ?: ಆನ್​ಲೈನ್​ ಎಡ್​-ಟೆಕ್​ ಕಂಪನಿ ವಿರುದ್ಧ ಸಾಲದಾತರಿಂದ ಅರ್ಜಿ

    ಈ ರೈಲ್ವೆ ಷೇರು 3 ತಿಂಗಳಲ್ಲಿ ದುಪ್ಪಟ್ಟು: ಈಗ ರೂ 162 ಕೋಟಿಯ ಕಾಮಗಾರಿ ಆದೇಶ ಪಡೆದ ತಕ್ಷಣವೇ ಮತ್ತೆ ಗಗನಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts