More

    ಮಾಗಡಿ ಪುರಸಭೆಗೆ ವಾಮಾಚಾರ!

    ಮಾಗಡಿ: ಇಲ್ಲಿನ ಪುರಸಭೆ ಕಚೇರಿ ಸುತ್ತಲೂ ಹತ್ತು ಅಡಿಗೊಂದರಂತೆ ನಿಂಬೆಹಣ್ಣು ಪತ್ತೆಯಾಗಿದ್ದು, ಕಚೇರಿಯ ಮೂಲೆಗಳಲ್ಲಿ ಅರಿಶಿನ- ಕುಂಕುಮ ಇಟ್ಟು ನಿಂಬೆಹಣ್ಣು ಹೊಡೆಯಲಾಗಿದೆ. ಇಂದು(ಬುಧವಾರ) ಬೆನಕನ ಅಮಾವಸ್ಯೆ. ಯಾರೋ ಕಿಡಿಗೇಡಿಗಳು ಪುರಸಭೆ ಕಚೇರಿಗೆ ವಾಮಾಚಾರ ಮಾಡಿದ್ದಾರೆ ಎಂಬ ಚರ್ಚೆಯಾಗುತ್ತಿದ್ದು, ಕಚೇರಿ ಸಿಬ್ಬಂದಿ ಆತಂಕಗೊಂಡಿದ್ದಾರೆ.

    ಇಂತಹ ಕೃತ್ಯ ಇದೇ ಮೊದಲಲ್ಲ. ಈ ಹಿಂದೆಯೂ ಪುರಸಭೆ ಕಚೇರಿಯಲ್ಲಿ ಇಂಜಿನಿಯರ್ ಆಗಿದ್ದ ಗಿರೀಶ್ ಅವಧಿ ವೇಳೆಯೂ ಅಮಾವಾಸ್ಯೆ- ಪೌರ್ಣಮಿ ದಿನದಂದು ಕಚೇರಿ ಹಾಗೂ ಮೂರು ದಾರಿ ಸೇರುವ ಬಳಿ ಕಿಡಿಗೇಡಿಗಳು ನಿಂಬೆಹಣ್ಣು-ಉಪ್ಪು ಇಡುತ್ತಿದ್ದರು. ಇತ್ತಿಚೆಗೆ ಮುಖ್ಯಾಧಿಕಾರಿ ಎಂ.ಎನ್.ಮಹೇಶ್ ವಿಶ್ರಾಂತಿ ಪಡೆಯುವ ಪರಿವೀಕ್ಷಣಾ ಮಂದಿರದ ಬಳಿಯೂ ನಿಂಬೆಹಣ್ಣು ಪತ್ತೆಯಾಗಿತ್ತು. ಸುಮಾರು ತಿಂಗಳಿಂದ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಲ್ಲಿ ನಿಂಬೆಹಣ್ಣು ಒಡೆದು ವಾಮಾಚಾರ ಮಾಡಲಾಗುತ್ತಿದೆ.

    ಇದನ್ನೂ ಓದಿರಿ ಮಗನನ್ನು ನೋಡಲು ಹೊರಟ ದಂಪತಿ ದಾರಿಯಲ್ಲೇ ಹೆಣವಾದರು!

    ಬುಧವಾರ ಬೆಳಗ್ಗೆ ಕಚೇರಿ ಸುತ್ತಲೂ ಕಂಡು ಬಂದ ನಿಂಬೆಹಣ್ಣನ್ನು ಪೌರಕಾರ್ಮಿಕ ದೇವರಾಜು ಮೂಲಕ ಹೆಲ್ತ್ ಇನ್​ಸ್ಟಕ್ಟರ್ ದಿಲೀಪ್ ತೆಗೆಸಿದರು. ಈ ವೇಳೆ ಮಾಗಡಿ ಪುರಸಭೆಗೆ ವಾಮಾಚಾರ!ದೇವರಾಜು ಸೇರಿದಂತೆ ಇತರ ಪೌರಕಾರ್ಮಿಕರು ಭಯಗೊಂಡಿದ್ದರು. ಅವರನ್ನು ಸಂತೈಸಿದ ಮುಖ್ಯಾಧಿಕಾರಿ ಎಂ.ಎನ್.ಮಹೇಶ್, ಧೈರ್ಯ ತುಂಬಿದರು.
    8 ವರ್ಷದ ಹಿಂದೆ ಇಂಜಿನಿಯರ್ ಆಗಿ ಪುರಸಭೆಗೆ ಗಿರೀಶ್ ಬಂದ ದಿನವೇ ಅವರು ಕೂರುವ ಜಾಗದಲ್ಲಿ ಉಪ್ಪು, ನಿಂಬೆಹಣ್ಣು ಸೇರಿದಂತೆ ವಾಮಾಚಾರಕ್ಕೆ ಬಳಸುವ ವಸ್ತುಗಳನ್ನು ಇಟ್ಟು ಭಯಗೊಳಿಸಿದ್ದರು. ಇದೀಗ ಮತ್ತ ಈ ಕಾಟ ಶುರುವಾಗಿದೆ ಎಂದು ಕಚೇರಿಯ ನೌಕರರು ದುಷ್ಕರ್ಮಿಗಳಿಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಂಡುಬಂತು.

    ಸುಮಾರು ವರ್ಷಗಳಿಂದ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳೇ ಇಂತಹ ಕೆಲಸ ಮಾಡುತ್ತಿರಬೇಕು ಎಂದು ಕೆಲ ಪೌರಕಾರ್ಮಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಪುರಸಭೆ ಮುಖ್ಯಾಧಿಕಾರಿ ಎಂ.ಎನ್.ಮಹೇಶ್, ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಯತ್ನಿಸಿದ, ವಾಮಾಚಾರದಂತಹ ಕೀಳುಅಭಿರುಚಿ ಹೊಂದಿದವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದರು.

    ಪುರಸಭೆ ಕಚೇರಿಯ ಸುತ್ತಮುತ್ತ ಕಂಡುಬಂದ ನಿಂಬೆಹಣ್ಣನ್ನು ತೆಗೆದುಹಾಕುವ ವೇಳೆ ತಲೆನೋವು ಬಂದು, ಕೈಕಾಲು ಹಿಡಿದುಕೊಡಂತಾಗಿತ್ತು. ನಂತರ ಮೆಡಿಕಲ್ ಸ್ಟೋರ್​ನಲ್ಲಿ ಮಾತ್ರೆ ತಂದು ನುಂಗಿ ಕೆಲಸಕ್ಕೆ ಹಾಜರಾಗಿದ್ದೇನೆ ಎಂದು ಪೌರಕಾರ್ಮಿಕ ದೇವರಾಜು ತಿಳಿಸಿದರು.

    ಡಿಜೆ ಹಳ್ಳಿ ಗಲಭೆಯ 40ಕ್ಕೂ ಹೆಚ್ಚು ಆರೋಪಿಗಳಿಗೆ ಭಯೋತ್ಪಾದನೆ ಚಟುವಟಿಕೆ ಲಿಂಕ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts