More

    ಕೊನೇವರೆಗೂ ಹೋರಾಟ ಮಾಡುವೆ ; ಕಷ್ಟದಲ್ಲೂ ಕೈ ಹಿಡಿದ ಚಿಕ್ಕನಾಯಕನಹಳ್ಳಿ ಜನ : ಭಾವುಕರಾದ ಸಚಿವ ಮಾಧುಸ್ವಾಮಿ

    ಚಿಕ್ಕನಾಯಕನಹಳ್ಳಿ : ಹಣವಿಲ್ಲದೆ ಚುನಾವಣೆ ಗೆಲ್ಲಬಹುದು ಎಂದು ಚಿಕ್ಕನಾಯಕನಹಳ್ಳಿ ಜನರು ತೋರಿಸಿಕೊಟ್ಟಿದ್ದೀರ, ಯಾವ ಚುನಾವಣೆಯಲ್ಲಿಯೂ ನನಗೆ ಇರುಸುಮುರುಸು ತರುವಂತೆ ನೀವು ನನ್ನ ಕೈಬಿಟ್ಟಿಲ್ಲ, ಹಾಗಾಗಿ, ಕೊನೆಯವರೆಗೂ ನಿಮಗಾಗಿ ನಾನು ಹೋರಾಟ ನಡೆಸುತ್ತಲೇ ಇರುತ್ತೇನೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ತಾಲೂಕಿಗೆ ಹೇಮಾವತಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಶೆಟ್ಟಿಕೆರೆಯಲ್ಲಿ ಸ್ಥಳೀಯರಿಂದ ಅಭಿನಂದನೆ ಸ್ವೀಕರಿಸಿದ ಅವರು, ಉಪಚುನಾವಣೆಯಲ್ಲಿ ಅಂದಿನ ಸರ್ಕಾರವೇ ನನ್ನ ವಿರುದ್ಧವಿದ್ದರೂ ಹಣ ಹಾಕಿ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದ ಈ ಕ್ಷೇತ್ರದ ಜನರ ಋಣ ನನ್ನ ಮೇಲಿದೆ ಎಂದು ಭಾವುಕರಾದರು.

    ಕುಡಿಯುವ ನೀರಿಗಾಗಿ ನಾಗೇಗೌಡರು ಮಂತ್ರಿಯಾಗಿದ್ದಾಗ 1 ಟಿಎಂಸಿ ನೀರಿನ ಹಂಚಿಕೆ ಮಾಡಿದ್ದಾರೆ. ನಂತರದಲ್ಲಿ ಈ ಭಾಗಕ್ಕೆ ತಾಂತ್ರಿಕ ಸಲಹೆ ಇರಲಿಲ್ಲ. ನಂತರದಲ್ಲಿ ಈಶ್ವರಪ್ಪ ಸರ್ವೇ ಕಾರ್ಯಕ್ಕೆ ಅನುಮತಿ ನೀಡಿದ್ದು ಯಡಿಯೂರಪ್ಪ ಅವರು 106 ಕೋಟಿ ರೂ.ಬಿಡುಗಡೆ ಮಾಡಿದ್ದರಿಂದ ತಾಲೂಕಿಗೆ ನೀರು ಹರಿಯುತ್ತಿದೆ ಎಂದರು.
    ನನ್ನನ್ನು ವಿಧಾನಸೌಧಕ್ಕೆ ಕಳುಹಿಸಿ, ನಾನು ನೀರು ಹರಿಸುತ್ತೇನೆ ಎಂದು ಭರವಸೆ ನೀಡಿದ್ದ ಜನ ನನ್ನ ಕೈಹಿಡಿದರು, ಅದರಂತೆ ಇಂದು ನೀರು ಹರಿಯುತ್ತಿದೆ ಎಂದರು.

    ಇದಕ್ಕೂ ಮುನ್ನ ಸಾಸಲು ಕೆರೆಗೆ ಗಂಗಾಪೂಜೆ ಸಲ್ಲಿಸಿದ ಸಚಿವರು ನಂತರ ಶೆಟ್ಟಿಕೆರೆ ಕೆರೆಗೆ ಗಂಗಾಪೂಜೆ ಸಲ್ಲಿಸಿ ಬಾಗಿನ, ಯೋಗಮಾಧವಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಶೆಟ್ಟಿಕೆರೆಯ ಪ್ರಮುಖ ರಸ್ತೆಯಲ್ಲಿ ವೀರಗಾಸೆ, ನಾಸಿಕ್‌ಡೋಲ್ ಸೇರಿ ಇತರ ಕಲಾತಂಡಗಳೊಂದಿಗೆ ಮೆರವಣಿಗೆಯ ಮೂಲಕ ವೇದಿಕೆಗೆ ಆಗಮಿಸಿದರು. ಜಿಪಂ ಸದಸ್ಯೆ ಮಂಜುಳಮ್ಮ, ತಾಪಂ ಸದಸ್ಯರಾದ ಕೇಶವಮೂರ್ತಿ, ಶೈಲಾ, ತುಮುಲ್ ನಿರ್ದೇಶಕ ಹಳೆಮನೆ ಶಿವನಂಜಪ್ಪ ಮತ್ತಿತರರು ಇದ್ದರು.

    ಮಾಜಿ ಶಾಸಕ ಕೆಎಸ್‌ಕೆ ಗೈರು! : ತಾಲೂಕಿಗೆ ಹೇಮಾವತಿ ಹರಿದ ಸಂಭ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ ಸಮಾರಂಭದಲ್ಲಿ ಯೋಜನೆ ಜಾರಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ಗೈರು ಎದ್ದುಕಾಣಿಸಿತು. ಶಾಶ್ವತ ಬರಪೀಡಿತವಾಗಿದ್ದ ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹೇಮಾವತಿ ಹರಿಸುವ ಯೋಜನೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ನಡೆಸಿದ್ದ ನಿರಂತರ ಹೋರಾಟಕ್ಕೆ ಸ್ಪಂದಿಸಿದ್ದ ಅಂದಿನ ಕಳ್ಳಂಬೆಳ್ಳ ಕ್ಷೇತ್ರದ ಬಿಜೆಪಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ಕಾಳಜಿವಹಿಸಿ ಯೋಜನೆ ಮಂಜೂರಾತಿಗೆ ಶ್ರಮಿಸಿದ್ದರು. ಇದರ ಲವಾಗಿ ಇಂದು ತಾಲೂಕಿಗೆ ಹೇಮೆ ಹರಿಯುತ್ತಿದೆ. ಇಂದಿನ ಬಿಜೆಪಿ ಸರ್ಕಾರದಲ್ಲಿ ನಿಗಮ ಮಂಡಳಿ ಅಧ್ಯಕ್ಷರಾಗಿದ್ದರೂ ಕೆ.ಎಸ್.ಕಿರಣ್‌ಕುಮಾರ್ ಅವರನ್ನು ಸಭೆಯಲ್ಲಿ ಸನ್ಮಾನಿಸದ ಬಗ್ಗೆಯೂ ಕೆಲವರು ಬೇಸರಿಸಿದರು. ಆದರೆ, ಸಮಾರಂಭದಲ್ಲಿ ಯೋಜನೆಗೆ ಶ್ರಮಿಸಿದವರಿಗೆಲ್ಲ ಧನ್ಯವಾದಗಳನ್ನು ಹೇಳುವುದನ್ನು ಸಚಿವ ಮಾಧುಸ್ವಾಮಿ ಮರೆಯಲಿಲ್ಲ.

    ನಾನು ಅಧಿಕಾರಿಗಳನ್ನು ಬೈದಿರುವುದು ನನ್ನ ಸ್ವಂತ ಕೆಲಸಕ್ಕಲ್ಲ, ಜಿಲ್ಲೆಯ ಅಭಿವೃದ್ಧಿಗಾಗಿ. ಸುಮಾರು 600 ಕೋಟಿ ರೂ. ಸರ್ಕಾರಕ್ಕೆ ವಾಪಸ್ ಹೋಗುವ ಹಂತದಲ್ಲಿದ್ದರೆ ಅದಕ್ಕೆ ಯಾರು ಹೊಣೆ? ಕೆಲಸ ಮಾಡದಿದ್ದರೆ ಒರಟಾಗಿ ಮಾತನಾಡಿದ್ದು, ಸರಿಯೋ, ತಪ್ಪೊ ನೀವೇ ನಿರ್ಧಾರ ಮಾಡಿ. ತಾಲೂಕಿನ ಜನತೆಗೆ ಮಾತು ಕೊಡುತ್ತೇನೆ, ಮುಂದಿನ ಮೂರು ವರ್ಷದಲ್ಲಿ ಎಲ್ಲ ಕೆರೆಗಳಿಗೂ ನೀರು ಹರಿಸುತ್ತೇನೆ. ಜತೆಗೆ ಹೇಮಾವತಿ ಹರಿಯಲು ಕಾರಣರಾಗಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.
    ಜೆ.ಸಿ.ಮಾಧುಸ್ವಾಮಿ, ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts