More

    ಮಾಧುಸ್ವಾಮಿ ಮಾದಿಗ ಜನಾಂಗದ ದೀಪ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬಣ್ಣನೆ

    ಹುಳಿಯಾರು: ಒಳಮೀಸಲಾತಿಗಾಗಿ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಯಾರೊಬ್ಬರೂ ಸ್ಪಂದಿಸದಿದ್ದಾಗ ಸಚಿವ ಮಾಧುಸ್ವಾಮಿ ಸ್ಪಂದಿಸುವ ಮೂಲಕ ಮಾದಿಗ ಜನಾಂಗದ ದೀಪವಾಗಿದ್ದು, ಅವರನ್ನು ಮತ್ತೆ ಗೆಲ್ಲಿಸುವ ಮೂಲಕ ಋಣ ತೀರಿಸಬೇಕು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

    ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಬುಕ್ಕಾಪಟ್ಟಣ ಹೋಬಳಿಯ ಹೊನ್ನೇನಹಳ್ಳಿ, ಚಿಕ್ಕಅಗ್ರಹಾರ, ದೊಡ್ಡ ಅಗ್ರಹಾರ, ಶ್ಯಾಗಡದು, ಬುಕ್ಕಾಪಟ್ಟಣ ಹಳ್ಳಿಗಳಲ್ಲಿ ಗುರುವಾರ ಮಾಧುಸ್ವಾಮಿ ಪರ ಮತಯಾಚಿಸಿ ಮಾತನಾಡಿದರು.

    ಬಿಜೆಪಿ ಸರ್ಕಾರ ದಲಿತರ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳ ಈಡೇರಿಕೆಗಾಗಿ ಸದಾ ದುಡಿಯುತ್ತಿದೆ. ಮೀಸಲಾತಿ ಹೆಚ್ಚಳ ಬೇಡಿಕೆ ಈಡೇರಿಸಿ ಮಾದಿಗರಿಗೆ ಶಿಕ್ಷಣ, ಉದ್ಯೋಗ ಪ್ರಗತಿಗೆ ಕಾರಣರಾಗಿದ್ದಾರೆ. ಆದ್ದರಿಂದ ಹಣಹೆಂಡಕ್ಕೆ ಮತ ಮಾರಿಕೊಳ್ಳದೆ ಅನ್ನಕ್ಕೆ ದಾರಿ ಮಾಡಿಕೊಟ್ಟ ಬಿಜೆಪಿಗೆ ಮತ ಹಾಕಿ ಎಂದು ಮನವಿ ಮಾಡಿದರು.

    ತಮಿಳುನಾಡಿನ ಲೋಕಸಭಾ ಸದಸ್ಯ ಮುರುಗನ್, ತಾಲೂಕು ಬಿಜೆಪಿ ಅಧ್ಯಕ್ಷ ಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿ ನಿರಂಜನಮೂರ್ತಿ, ರಾಜ್ಯ ಮಾದಿಗ ದಂಡೋರದ ಶಂಕರಪ್ಪ, ಮಂದಕೃಷ್ಣ ಡಾ.ಲಕ್ಷ್ಮೀಕಾಂತ್ ಇತರರು ಉಪಸ್ಥಿತರಿದ್ದರು.

    ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಮುನ್ನುಡಿ

    ಜನರ ಮಧ್ಯದಲ್ಲಿದ್ದು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಮಾಧುಸ್ವಾಮಿ ಅವರ ಗೆಲುವಿಗೆ ಮುನ್ನುಡಿ ಬರೆಯಲಿವೆ ಎಂದು ತ್ರಿವೇಣಿ ಮಾಧುಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

    ಹುಳಿಯಾರು ಹೋಬಳಿಯ ಕೋಡಿಹಳ್ಳಿಯಲ್ಲಿ ಗುರುವಾರ ಮತಯಾಚನೆ ಮಾಡಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದು, ಹಲವು ಜನಪರ ಯೋಜನೆಗಳನ್ನು ರೂಪಿಸುವ ಮೂಲಕ ಉತ್ತಮ ಆಡಳಿತ ನೀಡಿದೆ. ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿಯೂ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಈ ಭಾಗದ ಬಹುದಿನಗಳ ಬೇಡಿಕೆಯಾದ ಹೇಮಾವತಿ ನೀರನ್ನು ಹರಿಸಲಾಗಿದ್ದು, ಮಾಧುಸ್ವಾಮಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

    ಬಿಜೆಪಿ ಸೇಪರ್ಡೆ: ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಹಳೇಬಿಜ್ಜನಬೆಳ್ಳ ಗ್ರಾಮದ 25ಕ್ಕೂ ಅಧಿಕ ಯುವಕರು ಡಾ.ಅಭಿಜ್ಞಾ ಮಾಧುಸ್ವಾಮಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts