More

    ಅದಾನಿ ಗ್ರೂಪ್‌ನ ಸಿಮೆಂಟ್ ಕಂಪನಿಯ ಷೇರುಗಳ ಬೆಲೆಯಲ್ಲಿ ಸತತ ಕುಸಿತ ಏಕೆ?

    ಮುಂಬೈ: ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ ಷೇರುಪೇಟೆಯಲ್ಲಿ ಮತ್ತೊಮ್ಮೆ ಅಲ್ಲೋಲಕಲ್ಲೋಲ ಉಂಟಾಯಿತು. ಎರಡೂ ಪ್ರಮಾಣಿತ ಸೂಚ್ಯಂಕಗಳಾದ ಬಿಎಸ್​ಇ ಮತ್ತು ನಿಫ್ಟಿ ಕುಸಿತ ಕಂಡವು.

    ಏತನ್ಮಧ್ಯೆ, ಅದಾನಿ ಗ್ರೂಪ್‌ನ ಸಿಮೆಂಟ್ ಕಂಪನಿ ಸಂಘಿ ಇಂಡಸ್ಟ್ರೀಸ್ ಷೇರುಗಳು ಕೂಡ ಕುಸಿತ ದಾಖಲಿಸಿವೆ. ಇಂಟ್ರಾ ಡೇ ವಹಿವಾಟಿನಲ್ಲಿ ಈ ಷೇರು ಬೆಲೆ ಶೇಕಡಾ 8ಕ್ಕಿಂತ ಹೆಚ್ಚು ಕುಸಿದಿದೆ. ವಹಿವಾಟಿನ ಅಂತ್ಯಕ್ಕೆ ಷೇರಿನ ಬೆಲೆ ಶೇ. 7.19ರಷ್ಟು ಕುಸಿದು ರೂ. 89.05ಕ್ಕೆ ತಲುಪಿದೆ. ಈ ಷೇರಿನ ಬೆಲೆಗಳು ಕಳೆದ ಒಂದು ವಾರದಲ್ಲಿ 14.80% ಮತ್ತು ಒಂದು ತಿಂಗಳಲ್ಲಿ 20.83% ಕುಸಿತ ಕಂಡಿವೆ.

    ಸಂಘಿ ಇಂಡಸ್ಟ್ರೀಸ್‌ನ ಪ್ರವರ್ತಕ ಕಂಪನಿಯಾಗಿದೆ ಅಂಬುಜಾ ಸಿಮೆಂಟ್ಸ್. ಸಂಘಿ ಇಂಡಸ್ಟ್ರೀಸ್​ನಲ್ಲಿ ತನ್ನ ಒಂದಿಷ್ಟು ಪಾಲನ್ನು ಮಾರಾಟ ಮಾಡಲು ಅಂಬುಜಾ ಸಿಮೆಂಟ್ಸ್ ಮುಂದಾಗಿದೆ.

    ನಿಯಮಾವಳಿಗಳ ಪ್ರಕಾರ, ಸಂಘಿ ಇಂಡಸ್ಟ್ರೀಸ್‌ನಲ್ಲಿನ ಕನಿಷ್ಠ ಶೇಕಡಾ 2ರಷ್ಟು ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಬೇಕಾಗಿದೆ.

    “ಕಂಪನಿಯ ಪ್ರವರ್ತಕರಾದ ಅಂಬುಜಾ ಸಿಮೆಂಟ್ಸ್, ಕನಿಷ್ಠ ಸಾರ್ವಜನಿಕ ಷೇರುದಾರರ ಮಾನದಂಡಗಳನ್ನು ಅನುಸರಿಸಲು ನಮಗೆ ಅನುವು ಮಾಡಿಕೊಡಲು ಈಕ್ವಿಟಿ ಷೇರುಗಳನ್ನು ಮಾರಾಟ ಮಾಡುವ ಉದ್ದೇಶವನ್ನು ನಮಗೆ ತಿಳಿಸಿದೆ” ಎಂದು ಸಂಘಿ ಇಂಡಸ್ಟ್ರೀಸ್ ಬಿಎಸ್‌ಇ ಫೈಲಿಂಗ್‌ನಲ್ಲಿ ತಿಳಿಸಿದೆ.

    ಅಂಬುಜಾ ಸಿಮೆಂಟ್ ಸಂಘಿ ಇಂಡಸ್ಟ್ರೀಸ್ ಅನ್ನು ಈ ಹಿಂದೆ ಸ್ವಾಧೀನಪಡಿಸಿಕೊಂಡಿದೆ. ಸಂಘಿ ಇಂಡಸ್ಟ್ರೀಸ್ ಲಿಮಿಟೆಡ್‌ನ ಪ್ರವರ್ತಕರಾದ ರವಿ ಸಂಘಿ ಮತ್ತು ಕುಟುಂಬದವರ 56.74 ರಷ್ಟು ಪಾಲನ್ನು ಪಡೆಯಲಾಗಿದೆ. ಅದಾನಿ ಗ್ರೂಪ್ 2022 ರಲ್ಲಿ ಅಂಬುಜಾ ಮತ್ತು ಎಸಿಸಿ ಸಿಮೆಂಟ್​ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿದೆ.

     

    ಮಹಾದೇವ ಬೆಟ್ಟಿಂಗ್​ ಪ್ರಕರಣ ಜತೆ 30ಕ್ಕೂ ಹೆಚ್ಚು ಕಂಪನಿಗಳ ಕನೆಕ್ಷನ್​: ಸ್ಮಾಲ್​ ಕ್ಯಾಪ್​ ಸ್ಟಾಕ್​ಗಳ ರಕ್ತಪಾತಕ್ಕೆ ಕಾರಣವಾದ ಈ ಹಗರಣವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts