More

    ಪೇಟಿಎಂ ಷೇರುಗಳಿಗೆ ಮಾರುಕಟ್ಟೆಯಲ್ಲಿ ಮತ್ತೆ ಬೇಡಿಕೆ: ಅಪ್ಪರ್​ ಸರ್ಕ್ಯೂಟ್​ ಹಿಟ್​ ಆಗಿದ್ದೇಕೆ?

    ನವದೆಹಲಿ: ಪೇಟಿಎಂ ಬ್ರ್ಯಾಂಡ್‌ನ ಮೂಲ ಕಂಪನಿಯಾದ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್ (One 97 Communications Ltd) ಷೇರುಗಳು ಶುಕ್ರವಾರ ಅಪ್ಪರ್ ಸರ್ಕ್ಯೂಟ್ ಹಿಟ್​ ಆದವು.

    ಎಸ್​ಬಿಐ, ಆ್ಯಕ್ಸಿಸ್​ ಬ್ಯಾಂಕ್​, ಎಚ್​ಡಿಎಫ್​ ಬ್ಯಾಂಕ್ ಮತ್ತು ಯೆ್​ ಬ್ಯಾಂಕ್- ಈ ನಾಲ್ಕು ಬ್ಯಾಂಕ್‌ಗಳ ಮೂಲಕ ಯುಪಿಐ ವಹಿವಾಟುಗಳನ್ನು ಮುಂದುವರಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅನುಮತಿ ನೀಡಿದ ಹಿನ್ನೆಲೆಯಲ್ಲಿ ಈ ಷೇರುಗಳ ಬೆಲೆ ಏರಿಕೆ ಕಂಡಿತು.

    ಷೇರುಗಬೆ ಶೇಕಡಾ 5 ರಷ್ಟು ಏರಿಕೆಯಾಗಿ 370.90 ರೂ.ಗೆ ಮುಟ್ಟಿ ಅಪ್ಪರ್​ ಸರ್ಕ್ಯೂಟ್ ಹಿಟ್​ ಆಯಿತು. ಈಗ ಕಂಪನಿಯ ಮಾರುಕಟ್ಟೆ ಮೌಲ್ಯ 23,567.50 ಕೋಟಿ ರೂ.ಗೆ ತಲುಪಿದೆ.

    ಪೇಟಿಎಂ ಬಳಕೆದಾರರಿಂದ ಪಾವತಿ ಕಾರ್ಯಾಚರಣೆಗಳಲ್ಲಿ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು, ಎನ್​ಪಿಸಿಐ ಗುರುವಾರದಂದು ಕಂಪನಿಯು ನಾಲ್ಕು ಬ್ಯಾಂಕ್‌ಗಳ ಮೂಲಕ UPI ವಹಿವಾಟುಗಳನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿತು.

    ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಯಾವುದೇ ಗ್ರಾಹಕರ ಖಾತೆಗಳಲ್ಲಿ ಠೇವಣಿ, ಕ್ರೆಡಿಟ್ ವಹಿವಾಟುಗಳು ಅಥವಾ ಟಾಪ್-ಅಪ್‌ಗಳನ್ನು ಸ್ವೀಕರಿಸುವುದನ್ನು ತಡೆಯುವ ರಿಸರ್ವ್ ಬ್ಯಾಂಕ್‌ನ ಮಾರ್ಚ್ 15 ರ ಗಡುವಿನ ಒಂದು ದಿನದ ಮೊದಲು ಈ ನಿರ್ಧಾರವು ಬಂದಿದೆ. One97 ಕಮ್ಯುನಿಕೇಷನ್ಸ್ ಲಿಮಿಟೆಡ್ (OCL) PPBL ನಲ್ಲಿ 49 ಶೇಕಡಾ ಪಾಲನ್ನು ಹೊಂದಿದೆ.

    ಎಲ್ಲಾ ಪಿಪಿಬಿಎಲ್ ಗ್ರಾಹಕರಿಗೆ ಮಾರ್ಚ್ 15 ರೊಳಗೆ ಬೇರೆ ಬ್ಯಾಂಕ್‌ಗಳಿಗೆ ಶಿಫ್ಟ್ ಆಗುವಂತೆ ಭಾರತೀಯ ರಿಸರ್ವ್​ ಬ್ಯಾಂಕ್​ ಸಲಹೆ ನೀಡಿದೆ. ಪಿಪಿಬಿಎಲ್ ಅಂದಾಜು 30 ಕೋಟಿ ವ್ಯಾಲೆಟ್‌ಗಳನ್ನು ಮತ್ತು 3 ಕೋಟಿ ಬ್ಯಾಂಕ್ ಗ್ರಾಹಕರನ್ನು ಹೊಂದಿದೆ.

    ಪೆಟ್ರೋಲ್​, ಡೀಸೆಲ್​ ಬೆಲೆ ಕಡಿತ: ತೈಲ ಕಂಪನಿಗಳ ಷೇರು ಬೆಲೆ ಕುಸಿತವಾಗಿದ್ದೇಕೆ?

    ದುರ್ಬಲ ಜಾಗತಿಕ ಪ್ರವೃತ್ತಿ, ವಿದೇಶಿ ನಿಧಿ ಹೊರಹರಿವು: ಷೇರುಪೇಟೆ ಕುಸಿತದ ನಡುವೆಯೂ ಸ್ಮಾಲ್​ ಕ್ಯಾಪ್​ ಸೂಚ್ಯಂಕ ಏರಿಕೆಯಾಗಿದ್ದೇಕೆ?

    ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್​ ಷೇರು ಬೆಲೆ ಏಕಾಏಕಿ 14% ಏರಿಕೆ: ರಿಲಯನ್ಸ್​ ಪವರ್​ ಅಪ್ಪರ್​ ಸರ್ಕ್ಯೂಟ್ ಹಿಟ್ ಆಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts