More

    ಜನತಾ ಕರ್ಪ್ಯೂ ಬಗ್ಗೆ ರಜಿನಿಕಾಂತ್​ ಮಾಡಿದ್ದ ಪೋಸ್ಟ್​ ಅನ್ನು ಟ್ವಿಟರ್​ ಡಿಲೀಟ್​ ಮಾಡಿದ್ದೇಕೆ?

    ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಜನತಾ ಕರ್ಪ್ಯೂಗೆ ಬೆಂಬಲ ನೀಡಿ ಶನಿವಾರ ಸೂಪರ್​ ಸ್ಟಾರ್​ ರಜಿನಿಕಾಂತ್​ ಮಾಡಿದ್ದ ಪೋಸ್ಟ್​ ಅನ್ನು ಟ್ವಿಟರ್​ ತಪ್ಪು ಮಾಹಿತಿ ದೂರಿನ ಮೇರೆಗೆ ತೆಗೆದುಹಾಕಿದೆ.

    ಕರೊನಾ ವೈರಸ್​ ಭಾರತದಲ್ಲಿ ಎರಡನೇ ಹಂತದಲ್ಲಿದೆ. ಹೀಗಾಗಿ ಮನೆಯಲ್ಲಿ ಇರುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಇದನ್ನು ಅನುಸರಿಸುವ ಮೂಲಕ ದೇಶವು ಮೂರನೇ ಹಂತದ ವೈರಸ್​ ಸೋಂಕಿಗೆ ಒಳಗಾಗುವುದನ್ನು ಅಥವಾ ಸಾಮೂಹಿಕ ಹರಡುವಿಕೆಯನ್ನು ತಡೆಯಬಹುದು ಎಂದು ರಜಿನಿ ಟ್ವೀಟ್​ ಮಾಡಿದ್ದರು.

    ವೈರಸ್​ ಹರಡುವಿಕೆಯ ಸರಪಳಿಯನ್ನು 14 ಗಂಟೆಗಳ ಕಾಲ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಬ್ರೇಕ್​ ಮಾಡಬಹುದು ಎಂದು ವಿಡಿಯೋ ಸಂದೇಶದಲ್ಲಿ ರಜಿನಿ ವಿವರಿಸಿದ್ದರು.

    ಮಾರ್ಚ್​ 22ರಂದು ಪ್ರಧಾನಿ ಮೋದಿ ಜನತಾ ಕರ್ಪ್ಯೂಗೆ ಕರೆ ನೀಡಿದ್ದಾರೆ. ಇದರಲ್ಲಿ ಭಾಗಿಯಾಗುವ ಮೂಲಕ ಪ್ರಮುಖ ಕರೊನಾ ವೈರಸ್​ ಮೂರನೇ ಹಂತದ ಸಮುದಾಯ ಹರಡುವಿಕೆಯನ್ನು ನಿಗ್ರಹಿಸಲು ಸಾಧ್ಯವಿದೆ. ಮೂರನೇ ಹಂತವನ್ನು ತಡೆಯಲು ಇಟಲಿ ಕೂಡ ಇದೇ ನೀತಿಯನ್ನು ಅನುಸರಿಸಲು ಪ್ರಯತ್ನಿಸಿತು. ಆದರೆ, ನಾಗರಿಕರ ಬೆಂಬಲ ಕೊರತೆಯಿಂದ ಸಾವಿರಾರು ಮಂದಿ ಮಹಾಮಾರಿ ಕರೊನಾ ತುತ್ತಾದರು ಎಂದು ಹೇಳಿದ್ದಾರೆ.

    ಇಟಲಿಯಂತಹ ಪರಿಸ್ಥಿತಿ ನಮ್ಮಲ್ಲಿ ಆಗಬಾರದು. ಹೀಗಾಗಿ ಜನತಾ ಕರ್ಪ್ಯೂನಲ್ಲಿ ಭಾಗವಹಿಸುವಂತೆ ನಾನು ಎಲ್ಲರನ್ನು ಒತ್ತಾಯಿಸುತ್ತೇನೆ. ಮಾರ್ಚ್​ 22ರಂದು ಮನೆಯಲ್ಲಿ ಉಳಿದು, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಇಂತಹ ಪ್ರಮುಖ ಸಮಯದಲ್ಲಿ ವೈದ್ಯರ ನಿಸ್ವಾರ್ಥ ಸೇವೆಯನ್ನು ಮನದಲ್ಲಿಟ್ಟುಕೊಂಡು ಅವರಿಗೆ ಪಾರ್ಥನೆ ಸಲ್ಲಿಸಿ ಎಂದು ರಜಿನಿ ಹೇಳಿದ್ದರು.

    14 ಗಂಟೆಗಳ ಕಾಲ ಮನೆಯಲ್ಲೇ ಕಾಲ ಕಳೆಯುವುದು ಹೇಗೆ? ಇದರಿಂದ ಕರೊನಾ ವೈರಸ್​ ಮೂರನೇ ಹಂತ ಭಾರತ ಪ್ರವೇಶಿಸದಂತೆ ತಡೆಯಬಹುದೇ ಎಂದು ಪ್ರಶ್ನಿಸಿ ಅನೇಕರು ರಜಿನಿ ಅವರನ್ನು ಟೀಕಿಸಿದ್ದರು. ಇದೀಗ ರಜಿನಿ ಅವರ ಟ್ವಿಟರ್​ ಟೈಮ್​ಲೈನ್​ ಪ್ರಕಾರ ಟ್ವೀಟ್​ ಡಿಲೀಟ್​ ಆಗಿದ್ದು, ನಿಯಮ ಉಲ್ಲಂಘನೆಯಿಂದ ತೆಗೆದು ಹಾಕಲಾಗಿದೆ ಎಂದು ಟ್ವಿಟರ್​ ತಿಳಿಸಿದೆ. ಆದರೆ, ಯೂಟ್ಯೂಬ್​ ಲಿಂಕ್​ ಮಾತ್ರ ಈಗಲೂ ಲಭ್ಯವಿದೆ. (ಏಜೆನ್ಸೀಸ್​)

    ಸರ್ಕಾರದಿಂದ ಪ್ರತಿ ಲೀಟರ್ ಪೆಟ್ರೋಲ್​ಗೆ 3 ರೂ. ಮೋಸ!

    ಹಳ್ಳಿಗೆ ಕರೊನಾ ಬರದಂತೆ ತಡೆಯೋಣ: ರಾಜ್ಯವ್ಯಾಪಿ ಸೋಂಕು ಹರಡಲು ಅವಕಾಶ ನೀಡುವುದಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts