More

    ಕಚೇರಿಗೆ ಕುದುರೆ ಏರಿ ಬರಲು ಅನುಮತಿ ಕೋರಿದ ಸರ್ಕಾರಿ ಉದ್ಯೋಗಿ: ಇಂಧನ ದರ ಏರಿಕೆ ಕಾರಣವಲ್ಲ!

    ಮುಂಬೈ: ಮಹಾರಾಷ್ಟ್ರದ ನಾಂದೇಡ್​ ಮೂಲದ ಸರ್ಕಾರಿ ಉದ್ಯೋಗಿಯೊಬ್ಬರು ಕಚೇರಿಗೆ ಕುದುರೆ ಏರಿ ಬರಲು ಅನುಮತಿ ಕೋರಿದ್ದಾರೆ. ಅಂದಹಾಗೆ ಇದಕ್ಕೆ ಕಾರಣ ಪೆಟ್ರೋಲ್​ ದರ ಜಾಸ್ತಿ ಆಗಿರುವುದಲ್ಲ. ಉದ್ಯೋಗಿಯ ನೋವು ಬೇರೇನೆ ಇದೆ. ಅದು ಏನೆಂದು ತಿಳಿಯಲು ಮುಂದೆ ಓದಿ.

    ಸತೀಶ್​ ದೇಶ್​ಮುಖ್​​ ಎಂಬುವರು ತಮ್ಮ ಬಾಸ್​ ಅನುಮತಿಯನ್ನು ಕೋರಿದ್ದಾರೆ. ದೇಶ್​ಮುಖ್​ ಅವರು ನಾಂದೇಡ್ ಜಿಲ್ಲಾಧಿಕಾರಿ ಕಚೇರಿಯ ಉದ್ಯೋಗ ಖಾತರಿ ಯೋಜನಾ ವಿಭಾಗದಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಕಚೇರಿಗೆ ಕುದುರೆ ಏರಿ ಬರಲು ಅನುಮತಿ ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರಬರೆದಿದ್ದಾರೆ.

    ಇದನ್ನೂ ಓದಿರಿ: ಪತಿ, ಪ್ರೇಮಿ ಹಾಗೂ ಪಾಲಕರ ಚಾಯ್ಸ್​… ಆಯ್ಕೆ ಮಾಡಲಾಗದೇ ಕುಗ್ಗಿಹೋಗಿದ್ದೇನೆ… ಏನು ಮಾಡಲಿ?

    ದೇಶ್​ಮುಖ್​ ಕೊಟ್ಟಿರುವ ಕಾರಣ ಹೀಗಿದೆ… ನಾನು ಬೆನ್ನು ನೋವಿನಿಂದ ಬಳಲುತ್ತಿದ್ದೇನೆ. ಪ್ರತಿದಿನ ಕೆಲಸಕ್ಕೆ ತೆರಳಲು ಅನುಕೂಲಕರ ಮಾರ್ಗವನ್ನು ನೋಡುತ್ತಿದ್ದೇನೆ. ಸದ್ಯ ನನ್ನ ವೈದ್ಯಕೀಯ ಸ್ಥಿತಿಯಿಂದಾಗಿ ಬೈಕ್​ ಚಲಾಯಿಸಲು ತುಂಬಾ ಕಷ್ಟವಾಗುತ್ತಿದೆ. ಕಾರು ತೆಗೆದುಕೊಂಡು ಬರಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಾನೊಂದು ಕುದುರೆಯನ್ನು ಖರೀದಿಸಲು ನಿರ್ಧರಿಸಿದ್ದೇನೆ. ಹೀಗಾಗಿ ನನಗೆ ಅನುಮತಿ ನೀಡಿ ಎಂದು ದೇಶ್​ಮುಖ್​ ಮನವಿ ಮಾಡಿಕೊಂಡಿದ್ದಾರೆ.

    ಸದ್ಯ ದೇಶ್​ಮುಖ್​ ಅವರ ಪತ್ರ ಜಿಲ್ಲಾಧಿಕಾರಿ ಅಂಗಳದಲ್ಲಿದ್ದು, ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆಂಬ ಕುತೂಹಲವಿದೆ. ಆದರೆ, ಅವರ ಪತ್ರ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ದೇಶ್​ಮುಖ್​ ಬೆಂಬಲಕ್ಕೆ ನಿಂತಿರುವ ಅನೇಕರು ಅನುಮತಿ ಕೊಟ್ಟುಬಿಡಿ ಎಂದಿದ್ದಾರೆ. (ಏಜೆನ್ಸೀಸ್​)

    18ರ ಯುವತಿಯ ಮರ್ಯಾದಾ ಹತ್ಯೆ : ಕೋರ್ಟ್ ಆದೇಶವಿದ್ದರೂ ರಕ್ಷಿಸಲು ವಿಫಲರಾದ ಪೊಲೀಸರು

    ನಿಧಿ ಸುಬ್ಬಯ್ಯ ಮನೆಗೆ ಪಟಾಕಿ ಎಸೆದ ಸ್ಟಾರ್ ನಟನ ಹೆಸರು ಕೇಳಿ ಬೆರಗಾದ ಸ್ಪರ್ಧಿಗಳು..!

    ನ್ಯೂಜಿಲೆಂಡ್​ನಲ್ಲಿ ಸುನಾಮಿ ಅಪ್ಪಳಿಸುವ ಭೀತಿ: ಸಾವಿರಾರು ಜನರ ಸ್ಥಳಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts