More

    ರವಿ ಶಾಸ್ತ್ರಿ ನಂತರ ಹೆಡ್​ ಕೋಚ್​ ಯಾರು? ಸಂಭಾವ್ಯ ಪಟ್ಟಿಯಲ್ಲಿ ಈ ಇಬ್ಬರ ಹೆಸರು!

    ನವದೆಹಲಿ: ಟಿ20 ವರ್ಲ್ಡ್​ ಕಪ್​ ಮುಗಿಯುವ ವೇಳೆಗೆ ಭಾರತೀಯ ಕ್ರಿಕೆಟ್​ ತಂಡದ ಹೆಡ್​​ ಕೋಚ್ ಸ್ಥಾನದಿಂದ​ ರವಿ ಶಾಸ್ತ್ರಿ ಅವರಿಗೆ ನಿವೃತ್ತಿ ಸಿಗಲಿದೆ. ತದನಂತರ ಆ ಸ್ಥಾನಕ್ಕೆ ಯಾರು ನಿಯುಕ್ತಿಗೊಳ್ಳಲಿದ್ದಾರೆ ಎಂಬ ಪ್ರಶ್ನೆ ಕ್ರಿಕೆಟ್​ ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ. ಇದೀಗ ಬಂದಿರುವ ವರದಿಯ ಪ್ರಕಾರ ಅನಿಲ್​ ಕುಂಬ್ಳೆ ಮತ್ತು ವಿವಿಎಸ್​ ಲಕ್ಷ್ಮಣ್​ರನ್ನು ಈ ಜವಾಬ್ದಾರಿ ವಹಿಸಿಕೊಳ್ಳಲು ಬಿಸಿಸಿಐ ಕೇಳಲಿದೆ ಎನ್ನಲಾಗಿದೆ.

    ಅನಿಲ್​ ಕುಂಬ್ಳೆ ಈ ಮುಂಚೆಯೇ ಭಾರತ ತಂಡದ ಕೋಚ್​ ಆಗಿ 2016-17 ರಲ್ಲಿ ಒಂದು ವರ್ಷ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಆ ಸಮಯದಲ್ಲಿ ನಾಯಕ ವಿರಾಟ್​ ಕೊಹ್ಲಿ ಜೊತೆಗೆ ಉಂಟಾದ ಭಿನ್ನಾಭಿಪ್ರಾಯದಿಂದ ಅವರು ರಾಜೀನಾಮೆ ನೀಡಿದ್ದರು. ಅದೇ ಈಗ ಟಿ20 ನಾಯಕತ್ವ ತ್ಯಜಿಸುವುದಾಗಿ ಕೊಹ್ಲಿ ಹೇಳಿರುವ ಬೆನ್ನಲ್ಲೇ ಕುಂಬ್ಳೆ ಅವರನ್ನು ಹೆಡ್​ ಕೋಚ್​ ಆಗಿ ನೇಮಿಸುವ ಸಾಧ್ಯತೆ ಹೆಚ್ಚಿದೆ ಎಂದು ಪಿಟಿಐ ವರದಿ ಮಾಡಿದೆ.

    ಇದನ್ನೂ ಓದಿ: ವಿರಾಟ್ ಕೊಹ್ಲಿ ಏಕದಿನ ನಾಯಕತ್ವವೂ 2023ರ ವಿಶ್ವಕಪ್‌ವರೆಗೆ ಸುರಕ್ಷಿತವಲ್ಲ!

    ಕುಂಬ್ಳೆಯವರಂತೆಯೇ ಐಪಿಎಲ್​ನ ಸನ್​ರೈಸರ್ಸ್ ಹೈದರಾಬಾದ್​ ತಂಡದ ಮಾರ್ಗದರ್ಶಕರಾಗಿ ಕೋಚಿಂಗ್​ಅನುಭವ ಹೊಂದಿರುವ ಲಕ್ಷಣ್​ ಬಗ್ಗೆಯೂ ಸೌರವ್​ ಗಂಗೂಲಿ ನೇತೃತ್ವದ ಬಿಸಿಸಿಐ ಒಲವು ಹೊಂದಿದೆ ಎನ್ನಲಾಗಿದೆ. ಆದಾಗ್ಯೂ 100 ಕ್ಕೂ ಹೆಚ್ಚು ಟೆಸ್ಟ್​ ಮ್ಯಾಚ್​ಗಳನ್ನು ಆಡಿರುವ ಕುಂಬ್ಳೆ ಮತ್ತು ಲಕ್ಷ್ಮಣ್​ ಈರ್ವರೂ ಹೆಡ್​​ ಕೋಚ್​ ಕೆಲಸ ಮಾಡಲು ತಯಾರಿದ್ದಾರಾ ಎಂಬ ಪ್ರಶ್ನೆಯೂ ಇದೆ ಎನ್ನಲಾಗಿದೆ. (ಏಜೆನ್ಸೀಸ್)

    ಓಲಾ ಎಲೆಕ್ಟ್ರಿಕ್​ ಸ್ಕೂಟರ್​​ನ ಹೊಸ ದಾಖಲೆ: 2 ದಿನಗಳಲ್ಲಿ 1100 ಕೋಟಿ ರೂ. ಮೊತ್ತದ ಮಾರಾಟ

    ಅಸ್ತಮಾ ನಿಯಂತ್ರಣಕ್ಕೆ ‘ಬದ್ಧ ಪದ್ಮಾಸನ’ ಮಾಡಿ! ಗೂನು ಬೆನ್ನಿಗೂ ಇದು ಪರಿಹಾರ!

    ಹಸುಗೂಸಿನ ತಾಯನ್ನು ಕಸಿದ ಕರೊನಾ: 5 ತಿಂಗಳ ಬಾಣಂತಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts