More

    ಒಮಿಕ್ರಾನ್​ ಸೋಂಕಿನಿಂದ ಸಾವು ಕಂಡಿಲ್ಲ; ಡೆಲ್ಟಾ ಪ್ರಧಾನ ಸಮಸ್ಯೆ: WHO

    ಜಿನೀವಾ: ಕರೊನಾದ ಹೊಸ ರೂಪಾಂತರಿ ಒಮಿಕ್ರಾನ್​ ಬಗ್ಗೆ ಇಡೀ ಜಗತ್ತಿನಲ್ಲೇ ಆತಂಕ ಮನೆಮಾಡಿರುವ ಈ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್​ಒ)ಯು ಈವರೆಗೆ ಒಮಿಕ್ರಾನ್​ ಸೋಂಕಿನಿಂದ ಸಾವು ಸಂಭವಿಸಿರುವ ವರದಿಗಳು ಬಂದಿಲ್ಲ ಎಂದು ಹೇಳಿದೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂಸ್ಥೆಯ ವಕ್ತಾರ ಕ್ರಿಶ್ಚಿಯನ್ ಲಿಂಡ್​ಮೆಯೆರ್​ ನಾವು ಎಲ್ಲಾ ಪುರಾವೆಗಳನ್ನು ಸಂಗ್ರಹಿಸುತ್ತಿದ್ದೇವೆ. ಹೋಗುತ್ತಾ ಹೋಗುತ್ತಾ ನಮಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಲಿವೆ ಎಂದಿದ್ದಾರೆ.

    ಒಮಿಕ್ರಾನ್​ ಬಗ್ಗೆ ಚಿಂತೆ ಹೆಚ್ಚಿರುವ ಈ ಸಂದರ್ಭದಲ್ಲಿ ಜಗತ್ತಿನಲ್ಲಿ ಈಗಲೂ ಪ್ರಧಾನ ವೇರಿಯೆಂಟ್​ ಆಫ್​ ಕನ್ಸರ್ನ್​ ಆಗಿರುವ ಡೆಲ್ಟಾ ವೇರಿಯಂಟ್​ನ ಬಗ್ಗೆ ಎಚ್ಚರಿಕೆ ವಹಿಸುವುದು ತುಂಬಾ ಅಗತ್ಯ ಎಂದ ಅವರು, ಕಳೆದ 60 ದಿನಗಳಲ್ಲಿ ಜಾಗತಿಕವಾಗಿ ಸಂಗ್ರಹಿಸಲಾದ ಜಿನೋಮ್​ ಸೀಕ್ವೆನ್ಸ್​ಗಳಲ್ಲಿ ಶೇಕಡ 99.8 ರಷ್ಟು ಕರೊನಾ ಸೋಂಕು ಡೆಲ್ಟಾ ವೇರಿಯೆಂಟ್​ನಿಂದಲೇ ಉಂಟಾಗಿದೆ ಎಂದು ತಿಳಿಸಿದರು. (ಏಜೆನ್ಸೀಸ್)

    ಹೆಚ್ಚಿದ ಒಮಿಕ್ರಾನ್​ ಆತಂಕ: ಆಫ್ರಿಕಾದಿಂದ ಬೆಂಗಳೂರಿಗೆ ಬಂದ 10 ಜನ ನಾಪತ್ತೆ!

    ಬರೋಬ್ಬರಿ 2.15 ಕೋಟಿ ರೂ. ಸಂಬಳ! ಐಐಟಿ ವಿದ್ಯಾರ್ಥಿಗೆ ಬಂಪರ್​ ಆಫರ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts