More

    ಭಾರತ ಜಗತ್ತಿನಲ್ಲೇ ಅತೀ ಹೆಚ್ಚು ಕ್ಷಯರೋಗ ಪ್ರಕರಣಗಳಿರುವ ದೇಶ : ವಿಶ್ವ ಆರೋಗ್ಯ ಸಂಸ್ಥೆ

    ನವದೆಹಲಿ: ಕ್ಷಯರೋಗ ಮಾನವ, ಪ್ರಾಣಿಗಳನ್ನು ಬಾಧಿಸುವ ಮಾರಕ ರೋಗ. ಇದು ‘ಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್’ ಎಂಬ ಬ್ಯಾಕ್ಟೀರಿಯಾದ ಕಾರಣದಿಂದ ಉಂಟಾಗುತ್ತದೆ. ಜಾಗತಿಕ ಟಿಬಿ ವರದಿ 2023 ವರದಿ ಪ್ರಕಾರ, 2022 ರಲ್ಲಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಕ್ಷಯರೋಗ ಪ್ರಕರಣಗಳನ್ನು ಹೊಂದಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹೇಳುತ್ತದೆ.

    ವಿಶ್ವದ ಒಟ್ಟು ಟಿಬಿ ಪ್ರಕರಣಗಳಲ್ಲಿ ಭಾರತದಲ್ಲಿ ಶೇಕಡಾ 27 ರಷ್ಟು ಪ್ರಕರಣಗಳಿವೆ. 28.2 ಲಕ್ಷ ಪ್ರಕರಣಗಳಿದ್ದು, ಅವುಗಳಲ್ಲಿ ಶೇ 12ರಷ್ಟು (3,42,000 ಜನರು) ಈ ಕಾಯಿಲೆಯಿಂದ ಸಾವಿಗೀಡಾಗಿದ್ದಾರೆ. 30 ರಾಷ್ಟ್ರಗಳು ವಿಶ್ವದ ಶೇ.87 ರಷ್ಟು ಟಿಬಿ ಪ್ರಕರಣಗಳಿಗೆವೆಂದು ವರದಿ ಬಹಿರಂಗಪಡಿಸಿದೆ. ಇಂಡೋನೇಷ್ಯಾ (ಶೇ 10), ಚೀನಾ (ಶೇ 7.1), ಫಿಲಿಪೈನ್ಸ್ (ಶೇ 7.0), ಪಾಕಿಸ್ತಾನ (ಶೇ 5.7), ನೈಜೀರಿಯಾ (ಶೇ 4.5), ಬಾಂಗ್ಲಾದೇಶ (ಶೇ 3.6), ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಶೇ 3.0) ನಂತರದ ಸ್ಥಾನದಲ್ಲಿದೆ.

    ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಭಾರತವು ಪ್ರಗತಿ ಸಾಧಿಸಿದೆ ಎಂದು ವರದಿ ತೋರಿಸುತ್ತದೆ. 2015 ರಲ್ಲಿ 1,00,000 ಜನರ ಪೈಕಿ 258 ರೋಗಿಗಳಿದ್ದರೆ, 2022 ರಲ್ಲಿ 1,00,000 ಜನರಿಗೆ 199 ಕ್ಕೆ ರೋಗ ಪ್ರಕರಣಗಳಿವೆ. ಆದರೆ ದರವು ಇನ್ನೂ ಜಾಗತಿಕ ಸರಾಸರಿ 100,000 ಕ್ಕೆ 133 ಕ್ಕಿಂತ ಹೆಚ್ಚಾಗಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಸಾವಿನ ಸಂಖ್ಯೆಯು ಹೆಚ್ಚಾಗಿದೆ ಎಂದು ವರದಿ ಅಂದಾಜಿಸಿದೆ. ಪೂರ್ವ-ಸಾಂಕ್ರಾಮಿಕ ಪ್ರವೃತ್ತಿಗಳಿಗೆ ಹೋಲಿಸಿದರೆ, 2020 ಮತ್ತು 2022ರ ನಡುವೆ ಭಾರತದಲ್ಲಿ ಸುಮಾರು 60,000 ಹೆಚ್ಚು ಜನರು ಸಾವಿಗೀಡಾಗಿದ್ದಾರೆ. 2022ರಲ್ಲಿ 192 ದೇಶಗಳ 75 ಲಕ್ಷಕ್ಕೂ ಹೆಚ್ಚು ಜನರು ಟಿಬಿಯಿಂದ ಬಳಲುತ್ತಿದ್ದಾರೆ.

    ವರದಿಯು 2022ರಲ್ಲಿ TB ರೋಗನಿರ್ಣಯ ಮತ್ತು ಚಿಕಿತ್ಸಾ ಸೇವೆಗಳಲ್ಲಿನ ಚೇತರಿಕೆಯ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ. ಅದೇ ವೇಳೆ ಟಿಬಿ ನಿಯಂತ್ರಣ ಪ್ರಯತ್ನಗಳ ಮೇಲೆ COVID-19 ಪ್ರಭಾವದ ಸಂಭಾವ್ಯ ಹಿಮ್ಮುಖವನ್ನು ಸೂಚಿಸುತ್ತದೆ.

    ಕ್ಷಯರೋಗದ ಕುರಿತು ಇರಲಿ ಮುನ್ನೆಚ್ಚರಿಕೆ: ಕ್ಷಯರೋಗವು ಶ್ವಾಸಕೋಶದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಹಲವರು ನಂಬಿದ್ದಾರೆ. ಆದರೆ ಈ ರೋಗವು ದೇಹದ ಇತರ ಅಂಗಗಳನ್ನು ಹಾನಿಗೊಳಿಸುತ್ತದೆ. ಇದನ್ನು ಎಕ್ಸ್ಟ್ರಾಪಲ್ಮನರಿ ಟ್ಯೂಬರ್‌ಕ್ಯುಲೋಸಿಸ್ ಎಂದು ಕರೆಯಲಾಗುತ್ತದೆ.

    * ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ. ತಜ್ಞ ವೈದ್ಯರು ಹಾಗೂ ಪೌಷ್ಟಿಕತಜ್ಞರ ಸಲಹೆ  ಪಡೆಯುವುದು ಉತ್ತಮ.

    * ವಾಕಿಂಗ್‌, ಜಾಗಿಂಗ್‌, ಯೋಗದಂತಹ ದೈಹಿಕ ಚಟುವಟಿಕೆಗಳು ನಮ್ಮ ದಿನನಿತ್ಯದ ಭಾಗವಾಗಬೇಕು. ವೈದ್ಯರು ಹೇಳಿದ ಕ್ರಮವನ್ನು ತಪ್ಪದೇ ಪಾಲಿಸುವುದು ಅವಶ್ಯ.

    * ಮಧುಮೇಹ, ಹೃದಯ, ಮೂತ್ರಪಿಂಡದಂತಹ ಅಂಗಾಂಶಗಳ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಸುಸ್ಥುತಿಯಲ್ಲಿ ಇರಿಸಿಕೊಳ್ಳಬೇಕು.

    ಊಟದ ನಡುವೆ ನೀರು ಕುಡಿಯುವ ಅಭ್ಯಾಸ ಇದ್ಯಾ?; ಹಾಗಿದ್ರೆ ನೀವು ಇದನ್ನು ತಿಳಿಯಲೇ ಬೇಕು….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts