ಸಿನಿಮಾ

ಗಾಂಜಾ ಮಾರಾಟ ಮಾಡುತ್ತಿದ್ದವನ ಬಂಧನ

ಹುಬ್ಬಳ್ಳಿ: ಇಲ್ಲಿನ ಆನಂದ ನಗರದ ಕುಷ್ಠ ರೋಗಿಗಳ ಆಸ್ಪತ್ರೆ ಹತ್ತಿರದ ಸಾರ್ವಜನಿಕ ರಸ್ತೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಒಬ್ಬನನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂವರು ಪರಾರಿಯಾಗಿದ್ದಾರೆ.

ಬಂಧಿತನಿಂದ 20 ಸಾವಿರ ರೂ. ಮೌಲ್ಯದ 1ಕೆಜಿ 10 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಕೃಷ್ಣ ಕಾಲನಿ ನಿವಾಸಿ, ಆಟೋ ಚಾಲಕ ಆರೀಫ್ ವಾಲ್ಮೀಕಿ (25) ಬಂಧಿತ ವ್ಯಕ್ತಿ. ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇನ್​ಸ್ಪೆಕ್ಟರ್ ಎಸ್.ಎಚ್. ಯಳ್ಳೂರ ನೇತೃತ್ವದಲ್ಲಿ ಪಿ.ಬಿ. ಕಾಳೆ, ನಾಗರಾಜ ಕೆಂಚಣ್ಣನವರ, ಎಸ್.ಎಸ್. ಪಾಂಡೆ, ಎ.ಪಿ. ಕಟ್ನಳ್ಳಿ ಸೇರಿ ಇತರ ಸಿಬ್ಬಂದಿ ದಾಳಿ ನಡೆಸಿದ್ದರು. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಎನ್​ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Latest Posts

ಲೈಫ್‌ಸ್ಟೈಲ್