More

    ನಟ ಶಾರುಖ್​ ಖಾನ್​ ಪುತ್ರನ ಜತೆ ಮತ್ತಲ್ಲಿ ಸಿಕ್ಕಿಬಿದ್ದ ಆಕೆ ಯಾರು, ಎಲ್ಲಿಯವಳು?

    ಮುಂಬೈ: ಬಾಲಿವುಡ್​ ಬಾದ್​ ಷಾ ಎಂದೇ ಖ್ಯಾತಿ ಪಡೆದಿರುವ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಇದೀಗ ಡ್ರಗ್ಸ್​ ಸುಳಿಯಲ್ಲಿ ಸಿಲುಕಿದ್ದು, ಆತನೊಂದಿಗೆ ಇನ್ನಿತರರೂ ಎನ್​ಸಿಬಿ ಪೊಲೀಸರಿಂದ ಬಂಧಿತರಾಗಿದ್ದಾರೆ. ಆ ಪೈಕಿ ಆರ್ಯನ್​ ಖಾನ್​ ಜತೆ ಬಂಧನಕ್ಕೆ ಒಳಗಾಗಿರುವ ಆಕೆ ಅನೇಕರ ಕುತೂಹಲ ಕೆರಳಿಸಿದ್ದಾಳೆ.

    ಆರ್ಯನ್​ ಜತೆ ಸಿಕ್ಕಿಬಿದ್ದಿರುವ ಮುನ್ಮುನ್​ ಧಮೇಚಾ ಎಂಬಾಕೆಯತ್ತ ಹಲವರ ಗಮನ ಹರಿದಿದ್ದು, ಆಕೆ ಯಾರು, ಎಲ್ಲಿಯವಳು ಎಂಬ ಕುತೂಹಲವನ್ನು ಕೂಡ ಕೆಲವರು ಹೊಂದಿದ್ದಾರೆ. ಇದೇ ಸಂದರ್ಭದಲ್ಲಿ ಮುನ್ಮುನ್ ಕುರಿತ ಮತ್ತಷ್ಟು ಮಾಹಿತಿ ಹೊರಬಿದ್ದಿದೆ.

    ಇದನ್ನೂ ಓದಿ: ಪ್ರಿಯಾಂಕಾ ಗಾಂಧಿಯ ಮತ್ತೊಂದು ವಿಡಿಯೋ ವೈರಲ್​; ಗೆಸ್ಟ್​ ಹೌಸ್​​ನಲ್ಲಿ ಸ್ವತಃ ಪೊರಕೆ ಹಿಡಿದು ರೂಮ್​ ಗುಡಿಸಿದ ನಾಯಕಿ..!

    ಮುನ್ಮುನ್​ ಧಮೇಚಾ ದೆಹಲಿಯಲ್ಲಿ ವಾಸವಿದ್ದರೂ ಆಕೆ ಮೂಲತಃ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ತಹಸಿಲ್​ನವಳು. ಆದರೆ ಮುನ್ಮುನ್ ತಂದೆ ಈ ಹಿಂದೆಯೇ ಸಾವಿಗೀಡಾಗಿದ್ದು, ತಾಯಿ ಕಳೆದ ವರ್ಷ ಮೃತಪಟ್ಟಿದ್ದರಿಂದ ಬಳಿಕ ಆ ಮನೆ ಖಾಲಿ ಉಳಿದಿದೆ. ನಂತರ ಮುನ್ಮುನ್​ ತನ್ನ ಸಹೋದರ ದೆಹಲಿಯಲ್ಲಿ ಉದ್ಯೋಗದಲ್ಲಿ ಇದ್ದಿದ್ದರಿಂದ ದೆಹಲಿಗೆ ಬಂದು ಆತನೊಂದಿಗೆ ನೆಲೆಸಿದ್ದಾಳೆ.

    ಇದನ್ನೂ ಓದಿ: ಪೊಲೀಸ್​ ಇನ್​ಸ್ಪೆಕ್ಟರ್ ಸೊಂಟಕ್ಕೇ ಕೈ ಹಾಕಿ ವಾಕಿಟಾಕಿ ಕದ್ದ ಖತರ್ನಾಕ್​ ಕಳ್ಳ..!

    ಸುಮಾರು 6 ವರ್ಷಗಳಿಂದ ಸಹೋದರ ಪ್ರಿನ್ಸ್ ಜತೆ ದೆಹಲಿಯಲ್ಲಿ ನೆಲೆಸಿರುವ ಮುನ್ಮುನ್​ ಧಮೇಚ ಮಾಡೆಲ್​ ಆಗಿಯೂ ಗುರುತಿಸಿಕೊಂಡಿದ್ದಾಳೆ. ತನ್ನ ಬೆಕ್ಕಿನ ನಡಿಗೆಯ ಹಲವಾರು ವಿಡಿಯೋ ಫೋಟೋಗಳನ್ನು ಅವಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಜತೆಗೆ ಒಂದಷ್ಟು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿರುವ ಮುನ್ಮುನ್​ ಬಾಲಿವುಡ್​ನ ಕೆಲವು ಗಣ್ಯರೊಂದಿಗೆ ಸಂಪರ್ಕವನ್ನೂ ಹೊಂದಿದ್ದಾಳೆ. ಮಾತ್ರವಲ್ಲದೆ ಅವರೊಂದಿಗೆ ಪಾರ್ಟಿಗಳಲ್ಲಿಯೂ ತೊಡಗಿಕೊಳ್ಳುತ್ತಿದ್ದ ಆಕೆ​ ಇದೀಗ ಸಿಕ್ಕಿ ಹಾಕಿಕೊಂಡಿದ್ದು, ಕಂಬಿ ಎಣಿಸುವಂತಾಗಿದೆ.

    ಶಾಸಕರ ಕಾರಿಗೆ ಮಹಿಳೆ ಬಲಿ; ಕಾರು-ಬೈಕ್ ಅಪಘಾತದಲ್ಲಿ 58 ವರ್ಷದ ಸ್ತ್ರೀ ಸ್ಥಳದಲ್ಲೇ ಸಾವು..

    ರಾಜ್ಯದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ; ನೇಣಿಗೆ ಕೊರಳೊಡ್ಡಿದ ಸಹಾಯಕ ಸಬ್​ ಇನ್​​ಸ್ಪೆಕ್ಟರ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts