More

    ಸಚಿನ್-ಯುವರಾಜ್ ಮೊದಲ ಭೇಟಿ ಹೇಗಿತ್ತು ಗೊತ್ತಾ?

    ನವದೆಹಲಿ: ಟೀಮ್ ಇಂಡಿಯಾದ ಎರಡು ವಿಶ್ವಕಪ್ ಗೆಲುವಿನಲ್ಲಿ ಮಿಂಚಿದ್ದ ಸ್ಟಾರ್ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ನಿವೃತ್ತಿಯಾಗಿ ಬುಧವಾರಕ್ಕೆ ಭರ್ತಿ ಒಂದು ವರ್ಷವೇ ಕಳೆದಿದೆ. ಈ ವೇಳೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅದರಲ್ಲೂ ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್‌ರನ್ನು ಮೊದಲ ಬಾರಿ ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡಿದ್ದು, ‘ದೇವರಿಗೇ ಹಸ್ತಲಾಘವ ನೀಡಿದಂತಾಗಿತ್ತು’ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಟೀಮ್ ಇಂಡಿಯಾದ ಶ್ರೀಲಂಕಾ ಪ್ರವಾಸ ರದ್ದು

    2000ನೇ ಇಸವಿಯ ಐಸಿಸಿ ನಾಕೌಟ್ ಏಕದಿನ ಟೂರ್ನಿಗೆ ಯುವರಾಜ್ ಸಿಂಗ್ ಮೊದಲ ಬಾರಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಆಗಷ್ಟೇ ಕಿರಿಯರ ವಿಶ್ವಕಪ್ ಜಯಿಸಿ ಬಂದಿದ್ದ ಯುವರಾಜ್ ಅಲ್ಲಿ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್‌ರಂಥ ದಿಗ್ಗಜರ ಜತೆಗೆ ಆಡಿ ಥ್ರಿಲ್ ಆಗಿದ್ದರಂತೆ. ಬಳಿಕ ಸಚಿನ್ ತೆಂಡುಲ್ಕರ್ ವೃತ್ತಿಜೀವನದ ಉದ್ದಕ್ಕೂ ತಮಗೆ ನೆರವಾಗಿದ್ದರು ಎಂದು ನೆನಪಿಸಿಕೊಂಡಿರುವ ಯುವಿ, ‘ಥ್ಯಾಂಕ್ ಯೂ ಮಾಸ್ಟರ್. ನಾನು ಮೊದಲ ಬಾರಿ ನಿಮ್ಮನ್ನು ಭೇಟಿಯಾದಾಗ, ದೇವರಿಗೆ ಹ್ಯಾಂಡ್‌ಶೇಕ್ ನೀಡಿದಂತಿತ್ತು. ನೀವು ನನನಗೆ ಕಷ್ಟದ ದಿನಗಳಲ್ಲಿ ಮಾರ್ಗದರ್ಶನ ನೀಡಿದ್ದೀರಿ. ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಡಲು ನೀವು ಕಲಿಸಿದಿರಿ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಇನ್ನು ಕ್ರೀಡೆ ಪಠ್ಯೇತರವಲ್ಲ, ಪಠ್ಯಕ್ರಮದ ಭಾಗ

    ಸಚಿನ್ ಕೂಡ ಯುವರಾಜ್‌ರನ್ನು ಮೊದಲ ಬಾರಿ ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡಿದ್ದು, ‘ಚೆನ್ನೈ ಕ್ಯಾಂಪ್‌ನಲ್ಲಿ ನಾನು ಮೊದಲ ಬಾರಿ ನಿನ್ನನ್ನು (ಯುವಿ) ನೋಡಿದ್ದೆ. ಆದರೆ ಆಗ ನಿನಗೆ ನೆರವಾಗಲು ಸಾಧ್ಯವಾಗಿರಲಿಲ್ಲ. ಆದರೆ ನೀನೊಬ್ಬ ಅಥ್ಲೆಟಿಕ್ ಮತ್ತು ಕ್ಷಿಪ್ರ ಚಲನೆ ಹೊಂದಿರುವವನು ಎಂಬುದನ್ನು ಗಮನಿಸಿದ್ದೆ. ಸಿಕ್ಸರ್ ಸಿಡಿಸುವ ನಿನ್ನ ಸಾಮರ್ಥ್ಯದ ಬಗ್ಗೆ ನಾನು ಹೇಗೆ ಮಾತನಾಡದಿರಲಿ, ವಿಶ್ವದ ಯಾವುದೇ ಮೈದಾನದಲ್ಲಿ ಚೆಂಡನ್ನು ಹೊರಗಟ್ಟುವ ಶಕ್ತಿ ನಿನ್ನದು’ ಎಂದಿದ್ದಾರೆ.

    ಇದನ್ನೂ ಓದಿ: ಕೇರಳ ನರ್ಸ್ ಸೇವೆಗೆ ಗಿಲ್‌ಕ್ರಿಸ್ಟ್ ಶಹಬ್ಬಾಸ್ ಗಿರಿ…!

    2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಯುವರಾಜ್, 40 ಟೆಸ್ಟ್, 304 ಏಕದಿನ ಮತ್ತು 58 ಟಿ20 ಪಂದ್ಯಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ 2019ರ ಜೂನ್ 10ರಂದು ವಿದಾಯ ಘೋಷಿಸಿದ್ದರು. ಅದಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಬುಧವಾರ ‘ಮಿಸ್‌ಯೂಯುವಿ’ ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಸೃಷ್ಟಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ 38 ವರ್ಷದ ಯುವಿ, ‘ಅಭಿಮಾನಿಗಳ ನಿಮ್ಮ ಪ್ರೀತಿಯನ್ನು ಕಂಡು ಅಪಾರ ಸಂತಸವಾಗುತ್ತಿದೆ. ಕ್ರಿಕೆಟ್ ಯಾವಾಗಲೂ ನನ್ನ ಜೀವನ. ನೀವು ಕೂಡ ಯಾವತ್ತೂ ತುಂಬಲಾರದ ಭಾಗವಾಗಿದ್ದೀರಿ. ಜವಾಬ್ದಾರಿಯುತ ನಾಗರೀಕರಾಗಿ, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿರಿ. ಅಗತ್ಯವಿರುವವರಿಗೆ ಸೂಕ್ತ ಸಹಾಯ ಒದಗಿಸಿ’ ಎಂದು ಹೇಳಿದ್ದಾರೆ.

    ಮಹಿಳಾ ಕ್ರಿಕೆಟ್​ನಲ್ಲಿ ಚೆಂಡು ಸಣ್ಣದಾಗಬೇಕು ಎಂದಿದ್ದೇಕೆ ಸೋಫಿ ಡಿವೈನ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts