More

    ಬ್ಯಾನ್ ಆಯ್ತು 26 ಲಕ್ಷ ಭಾರತೀಯರ ವಾಟ್ಸ್​ಆ್ಯಪ್ ಖಾತೆ!

    ನವದೆಹಲಿ: ಹೊಸ ಐಟಿ ನಿಯಮದನ್ವಯ ಸೆಪ್ಟೆಂಬರ್ ತಿಂಗಳಿನಲ್ಲಿ 26 ಲಕ್ಷ ಭಾರತೀಯರ ವಾಟ್ಸ್​ಆ್ಯಪ್ ಖಾತೆಯನ್ನು ಮೆಟಾ ಕಂಪೆನಿ ನಿಷ್ಕ್ರೀಯಗೊಳಿಸಿದೆ. 2021ರ ನಂತರ ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಸಾಮಾಜಿಕ ಜವಾಬ್ದಾರಿಯನ್ನು ವಹಿಸಬೇಕು ಎಂದು ನಿಯಮ ರೂಪಿಸಲಾಗಿತ್ತು.

    ಕಠಿಣ ನಿಯಮ ರೂಪಿಸಿದ್ದರೂ, ವಾಟ್ಸ್​ಆ್ಯಪ್ ಬಳಕೆ ಮಾಡುವಾಗ ಹಲವು ದಾರಿತಪ್ಪಿಸುವಂತಹ ಸಂದೇಶಗಳನ್ನು ಕಳುಹಿಸುವವರ ಸಂಖ್ಯೆ ಹೆಚ್ಚಾಗಿತ್ತು. ಹಿನ್ನೆಲೆಯಲ್ಲಿ ಸುಮಾರು 666 ದೂರುಗಳು ಬಳಕೆದಾರರಿಂದ ಬಂದಿತ್ತು. ಇದೀಗ ಅನಗತ್ಯ ಸಂದೇಶಗಳನ್ನು ರವಾನಿಸಲು ಬಳಕೆಯಾಗುತ್ತಿದ್ದ 26 ಲಕ್ಷ ಖಾತೆಗಳು ಬ್ಯಾನ್ ಆಗಿವೆ. ಸದ್ಯ ಭಾರತದಲ್ಲಿ 500 ಮಿಲಿಯನ್ ಬಳಕೆದಾರರನ್ನು ವಾಟ್ಸ್​ಆ್ಯಪ್ ಹೊಂದಿದೆ.

    ಐಟಿ ಕಾಯ್ದೆಯ ವ್ಯಾಪ್ತಿಯಲ್ಲಿ ಕಳೆದ ಆಗಸ್ಟ್​ ತಿಂಗಳಿನಲ್ಲಿ 23 ಲಕ್ಷ ಖಾತೆಗಳನ್ನು ವಾಟ್ಸ್​ಆ್ಯಪ್ ಬ್ಯಾನ್ ಮಾಡಿತ್ತು. ಇದೀಗ ಮತ್ತೆ ವಾಟ್ಸ್​ಆ್ಯಪ್ ದುರುಪಯೋಗಪಡಿಸಿಕೊಳ್ಳುತ್ತಿದ್ದ ಖಾತೆಗಳನ್ನು ನಿಷ್ಕ್ರೀಯಗೊಳಿಸಿ, ಎಚ್ಚರಿಕೆ ನೀಡಿದೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts