ದಂತಕಥೆಯನ್ನು ಮನರಂಜನೆಯ ಮೂಲಕ ಹೇಳಲಾಗಿದೆ; ಕಾಂತಾರ ಸಿನಿಮಾ ವೀಕ್ಷಿಸಿದ ರವಿಶಂಕರ್ ಗುರೂಜಿ

Guruji
Published on

ಬೆಂಗಳೂರು: ಕಾಂತಾರ ಚಿತ್ರ ಬಿಡುಗಡೆಯಾಗಿ ಒಂದು ತಿಂಗಳಾಗುತ್ತಾ ಬಂದರೂ, ಸಿನಿಮಾದ ಕ್ರೇಝ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಆದಿಯೋಗಿ ಸದ್ಗುರ ಅವರ ಇಶಾ ಫೌಂಡೇಷನ್​ನಲ್ಲಿ ಕಾಂತಾರ ಸಿನಿಮಾ ಪ್ರದರ್ಶನವಾಗಿತ್ತು. ಇದೀಗ ಗರುದೇವ್ ರವಿಶಂಕರ್ ಗುರೂಜಿ ಅವರ ಆಶ್ರಮದಲ್ಲಿ ಕಾಂತಾರ ಸಿನಿಮಾ ಪ್ರದರ್ಶನವಾಗಿದೆ.

ಬೆಂಗಳೂರಿನಲ್ಲಿರುವ ರವಿಶಂಕರ್​​ ಗುರೂಜಿ ಅವರ ಆಶ್ರಮದಲ್ಲಿ ಕಾಂತಾರ ಸಿನಿಮಾ ಪ್ರದರ್ಶನವಾಗಿದ್ದು, ಸ್ವತಃ ರವಿಶಂಕರ್ ಗುರೂಜಿ ಅವರು ಬಂದು ಸಿನಿಮಾ ನೋಡಿದ್ದಾರೆ. ಈ ವೇಳೆ ಅವರ ಅಪಾರ ಸಂಖ್ಯೆಯ ಶಿಷ್ಯರು ಚಿತ್ರ ವೀಕ್ಷಣೆ ಮಾಡಿದ್ದಾರೆ. ಪ್ರದರ್ಶನದ ವೇಳೆ ಸುಮಾರು 500ಕ್ಕೂ ಅಧಿಕ ಮಂದಿ ಇದ್ದರು.

ಕಾಂತಾರ ಎಂಬ ದಂತಕಥೆಯನ್ನು ಮನರಂಜನೆಯ ಮೂಲಕ ಸಿನಿಮಾದಲ್ಲಿ ಹೇಳಲಾಗಿದೆ. ಇದು ಕರ್ನಾಟಕಕ್ಕೆ ಹೆಮ್ಮೆ ತರುವಂತಹದ್ದು. ಕನ್ನಡ ಹಿರಿಮೆಯನ್ನು ಕಾಂತಾರ ಸಿನಿಮಾ ಚಿತ್ರಿಸಿದೆ ಎಂದು ಸಿನಿಮಾ ನೋಡಿ ರವಿಶಂಕರ್ ಗುರೂಜಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net