More

    ಮಾಜಿ ಸಚಿವರ ಅಶ್ಲೀಲ ಸಿಡಿ ಪ್ರಕರಣ; ತನಿಖೆ ಮುಕ್ತಾಯ, ಅಂತಿಮ ವರದಿ ಸಿದ್ಧ, ಮುಂದೆ?

    ಬೆಂಗಳೂರು: ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಮಾಜಿ ಸಚಿವರು ಹಾಗೂ ಯುವತಿಯೊಬ್ಬಳ ಅಶ್ಲೀಲ ಸಿಡಿ ಪ್ರಕರಣದ ತನಿಖೆ ಮುಕ್ತಾಯಗೊಂಡಿದ್ದು, ಪ್ರಕರಣದ ಕುರಿತ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.

    ಈ ಸಿಡಿ ಪ್ರಕರಣದ ತನಿಖೆ ಜವಾಬ್ದಾರಿ ವಹಿಸಿಕೊಂಡಿದ್ದ ಎಸ್​ಐಟಿ ಹೈಕೋರ್ಟ್​ಗೆ ಮೆಮೋ ಸಲ್ಲಿಸಿದೆ. ಮಾತ್ರವಲ್ಲ ಪ್ರಕರಣದ ತನಿಖೆ ಕೂಡ ಮುಗಿದಿದ್ದು, ಅಂತಿಮ ವರದಿ ಕೂಡ ಸಿದ್ಧವಿದೆ ಎಂಬುದನ್ನು ತಿಳಿಸಿದೆ. ರಾಜ್ಯದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ಈ ಮಾಹಿತಿಯನ್ನು ಇಂದು ಹೈಕೋರ್ಟ್​ಗೆ ಸಲ್ಲಿಸಿದ್ದಾರೆ.

    ಇದನ್ನೂ ಓದಿ: ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

    ಈ ನಡುವೆ ಸಿಡಿ ಲೇಡಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ದಾಖಲೆಗಳ ಇಂಗ್ಲಿಷ್ ಅನುವಾದ ಸಲ್ಲಿಸದಿರುವುದನ್ನು ಗಮನಿಸಿದ್ದಲ್ಲದೆ, ಅದನ್ನು ಶೀಘ್ರದಲ್ಲೇ ಸಲ್ಲಿಸುವಂತೆ ಯುವತಿ ಪರ ವಕೀಲರಿಗೆ ಸೂಚನೆ ನೀಡಿತು. ಜತೆಗೆ ಮುಂದಿನ ವಿಚಾರಣೆಯನ್ನು ಜುಲೈ 14ರಂದು ನಡೆಸುವುದಾಗಿ ತಿಳಿಸಿದ ಹೈಕೋರ್ಟ್​, ಅಲ್ಲಿಯವರೆಗೂ ಅಂತಿಮ ವರದಿಯನ್ನು ಸಲ್ಲಿಸದಂತೆ ಎಸ್​ಐಟಿ ಪೊಲೀಸರಿಗೆ ಸೂಚನೆ ನೀಡಿತು.

    ಈ ಟೀ ಸ್ಟಾಲ್​ನಲ್ಲಿ ಕೋತಿಯೇ ಕ್ಲೀನರ್​; ಅದೆಷ್ಟು ಚೆನ್ನಾಗಿ ತಟ್ಟೆ ತೊಳೆಯುತ್ತಿದೆ ನೋಡಿ..

    ಕೋವಿಡ್​ನಿಂದ ಸತ್ತ 75 ದಿನಗಳ ಬಳಿಕ ನಡೆಯಿತು ಶವಸಂಸ್ಕಾರ; ಹಣಕ್ಕಾಗಿ ಹೆಣ ಇಟ್ಕೊಂಡ್ರಾ?

    ಎರಡೂ ಡೋಸ್ ಲಸಿಕೆ ಪಡೆದರೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts