More

    ಧರ್ಮೇಗೌಡರಿಗೆ ಏನಾಯ್ತು? ನಿನ್ನೆ ನಡೆದ ಘಟನೆ ಏನು?

    ಚಿಕ್ಕಮಗಳೂರು: ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್​.ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಅನೇಕ ಸಂದೇಹಗಳನ್ನು ಹುಟ್ಟುಹಾಕಿದೆ. ವಿಧಾನಪರಿಷತ್​ ಅಧಿವೇಶನದ ಸಂದರ್ಭದ ಗಲಾಟೆಯಿಂದ ಅವರು ನೊಂದುಕೊಂಡಿದ್ರಾ? ಕಾರಣವೇನು? ಎಂಬಿತ್ಯಾದಿ ಪ್ರಶ್ನೆಗಳು ಎಲ್ಲರನ್ನೂ ಕಾಡತೊಡಗಿದೆ.

    ಸದ್ಯ ಸಿಕ್ಕಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಅವರು ನಿನ್ನೆ ಸಂಜೆ 4 ಗಂಟೆಗೆ ಸ್ಯಾಂಟ್ರೋ ಕಾರಿನಲ್ಲಿ ಚಿಕ್ಕಮಗಳೂರಿಗೆ ಆಗಮಿಸಿದ್ದರು. ಕೆಲವರನ್ನು ಮಾತನಾಡಿಸಿ ಬಳಿಕ ಜನರಲ್ಲಿ ರೈಲು ಸಂಚಾರದ ಮಾಹಿತಿಯನ್ನೂ ಪಡೆದುಕೊಂಡಿದ್ರು. ಬಳಿಕ ಬಾಣಾವರ ಕಡೆಗೆ ತೆರಳಿದ್ದರು. ಅಲ್ಲಿ ನೀರು ತರುವುದಕ್ಕೆಂದು ಕಾರಿನಿಂದ ಇಳಿದು ಹೋದ ಅವರು, ನಂತರ ಬಂದು ಚಾಲಕನಿಗೆ ಕಾರಿನಲ್ಲೇ ಇರುವಂತೆ ಹೇಳಿ ತೆರಳಿದ್ದರು.

    ಇದನ್ನೂ ಓದಿ: ಮೇಲ್ಮನೆ ಮರ್ಯಾದೆ ಮಣ್ಣುಪಾಲು; ರಣರಂಗವಾದ ಪರಿಷತ್, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿ…

    ಹಾಗೆ ಹೋದವರು ಮತ್ತೆ ಬಹಳ ಹೊತ್ತಾದರೂ ಬಾರದೇ ಇದ್ದಾಗ, ಚಾಲಕ ಫೋನ್ ಕರೆ ಮಾಡಿದ್ದ. ಪ್ರತಿಕ್ರಿಯೆ ಸಿಗದ ಕಾರಣ ಧರ್ಮೇಗೌಡರ ಪುತ್ರನಿಗೆ ಕರೆ ಮಾಡಿದ ಚಾಲಕ, ಧರ್ಮೇಗೌಡರು ಫೋನ್ ಪಿಕ್ ಮಾಡದೇ ಇರುವ ವಿಚಾರ ತಿಳಿಸಿದ್ದ. ಇದಾಗಿ ಕಡೂರು ಪೊಲೀಸರಿಗೂ ಮಾಹಿತಿ ಹೋಗಿದ್ದು ಎಲ್ಲರೂ ಹುಡುಕಾಟ ಆರಂಭಿಸಿದ್ದಾರೆ.  ಕೊನೆಗೆ ಗುಣಸಾಗರದಲ್ಲಿ ಮೊಬೈಲ್ ಲೊಕೇಶನ್ ಪತ್ತೆಯಾಗಿದೆ. ತೀವ್ರ ಹುಡುಕಾಟ ನಡೆಸಿದಾಗ ರೈಲ್ವೆ ಹಳಿ ಸಮೀಪ ಎರಡು ಭಾಗವಾಗಿರುವ ಮೃತದೇಹ ಪತ್ತೆಯಾಗಿದೆ. ಪೊಲೀಸರು ಕೂಡಲೇ ಮುಂದಿನ ಕ್ರಮಗಳನ್ನು ತೆಗೆದುಕೊಂಡಿದ್ದು, ತನಿಖೆ ನಡೆಸಿದ್ದಾರೆ.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಶಾಕಿಂಗ್ ನ್ಯೂಸ್ ! ವಿಧಾನಪರಿಷತ್ ಉಪಸಭಾಪತಿ ಎಸ್​.ಎಲ್​.ಧರ್ಮೇಗೌಡ ಆತ್ಮಹತ್ಯೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts