More

    ರವಿ ಚನ್ನಣ್ಣನವರ್​​ ತಮ್ಮ ತಾಯಿಯ ಫೋಟೋ ಹಾಕಿ ಏನು ಹೇಳಿದ್ರು…?

    ನಿನ್ನೆ ತಾನೇ ಅಮ್ಮಂದಿರ ದಿನ ಆಚರಿಸಿದ್ದೇವೆ (ಮೇ 10). ಕೆಲವರು ಪ್ರೀತಿಯ ಅಮ್ಮನಿಗೊಂದು ಸರ್ಪ್ರೈಸ್​ ಗಿಫ್ಟ್ ಕೊಟ್ಟು ವಿಷ್​ ಮಾಡಿದ್ದಾರೆ. ಹಲವರು ಕೇಕ್​ ಕತ್ತರಿಸಿ ಅಮ್ಮನ ಜತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದರು. ಬಹುತೇಕರು ವಾಟ್ಸ್ಆ್ಯಪ್ ಸ್ಟೇಟಸ್​, ಫೇಸ್​ಬುಕ್​ನಲ್ಲಿ ಅಮ್ಮನ ಫೋಟೋ ಹಾಕಿ ​’ಮೈ ಹೀರೋ, ನನ್ನಮ್ಮ, ಜೀವ, ಪ್ರೀತಿಯ ಪ್ರತೀಕ, ಸಹನಾ ಮೂರ್ತಿ, ಮಿಸ್ ಯೂ ಅಮ್ಮ, ಲವ್​ ಯೂ ಅಮ್ಮ, ಮೈ ಸ್ಟ್ರೆಂಥ್​, ಸ್ಫೂರ್ತಿಯ ಬುತ್ತಿ…’ ಹೀಗೆ ತಮಗೆ ತೋಚಿದ್ದನ್ನು ಬರೆದುಕೊಂಡಿದ್ದರು. ಇದಕ್ಕೆ ಐಪಿಎಸ್​ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಕೂಡ ಹೊರತಾಗಿರಲಿಲ್ಲ. ಅವರು ತಾಯಿ ಬಗ್ಗೆ ಏನು ಹೇಳಿಕೊಂಡಿದ್ದಾರೆ ಎಂಬುದು ಇಲ್ಲಿದೆ ಓದಿ.

    ಇದನ್ನೂ ಓದಿರಿ ಮದರ್ಸ್​ ಡೇ ಪ್ರಯುಕ್ತ ಅಮ್ಮನ ಫೋಟೋ ಹಂಚಿಕೊಂಡ ಸಿನಿಮಾ, ಕಿರುತೆರೆ ತಾರೆಯರು..

    ಕರ್ನಾಟಕದ ಸಿಂಗಂ ಎಂದೇ ಗುರುತಿಸಿಕೊಂಡಿರುವ ಐಪಿಎಸ್​ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಖಡಕ್ ಪೊಲೀಸ್ ಅಧಿಕಾರಿ. ಅವರ ಮಾತುಗಳು ಯುವಜನಾಂಗಕ್ಕೆ ಸ್ಫೂರ್ತಿದಾಯಕ. ಅವರ ಕರ್ತವ್ಯ ನಿಷ್ಠೆ, ಸಾರ್ವಜನಿಕರೊಂದಿಗೆ ನಡೆದುಕೊಳ್ಳುವ ರೀತಿ-ನೀತಿ ಇತರರಿಗೆ ಮಾದರಿ. ಹಾಗೆ ಅಮ್ಮಂದಿರ ದಿನದ ಪ್ರಯುಕ್ತ ಅವರು ತನ್ನ ತಾಯಿ ಜತೆ ಇರುವ ಫೋಟೋವನ್ನು ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. “Life doesn’t come with a manual-it comes with a mother”. ‘ಹ್ಯಾಪಿ ಮದರ್ಸ್​ ಡೇ’ ಎಂದು ಒಂದೇ ಸಾಲಿನಲ್ಲಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿರಿ ತಾರೆಯರ ಅಮ್ಮಂದಿರ ದಿನ: ಅಮ್ಮ ನನ್ನ ಪಾಲಿನ ರಿಪೋರ್ಟರ್

    ತಲೆಗೆ ಟವೆಲ್​ ಸುತ್ತಿಕೊಂಡು ಹೊಲದಲ್ಲಿ ನಿಂತಿರುವ ತನ್ನ ಹೆಗಲ ಮೇಲೆ ತಾಯಿ ಕೈ ಹಾಕಿರುವ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿರುವ ರವಿ ಡಿ. ಚನ್ನಣ್ಣನವರ್, ‘ಜೀವನ ಬರೋದು ಕೈಪಿಡಿಯಿಂದಲ್ಲ, ಅದು ಅಮ್ಮನ ಜತೆ ಬರಲಿದೆ’ ಎಂದಿದ್ದಾರೆ. ಈ ಫೋಟೋಗೆ ಸಾವಿರಾರು ಲೈಕ್ಸ್​ ಬಂದಿವೆ. ತಾಯಿಗೆ ತಕ್ಕ ಮಗ, ಮಾತೃದೈವೋಭವ, ನಿಮ್ಮ ಮಾತು ಸ್ಫೂರ್ತಿದಾಯಕ, ಅಮ್ಮನಿಗೆ ಸರಿ ಸಾಟಿ ಯಾರಿಲ್ಲ, ನೀವೊಬ್ಬ ಸರಳ- ಸಜ್ಜನ ವ್ಯಕ್ತಿ… ಎಂದೆಲ್ಲ ಅಭಿಮಾನಿಗಳು ಕಮೆಂಟ್ಸ್ ಕೊಡುತ್ತಿದ್ದಾರೆ. ಧ್ಯಾಮಪ್ಪ ಚನ್ನಣ್ಣನವರ್ ಮತ್ತು ರತ್ನಮ್ಮ ದಂಪತಿ ಪುತ್ರ ರವಿ.

    ಇದನ್ನೂ ಓದಿರಿ ಅಮ್ಮ ಒಂದು ಕ್ಷಣ ಕಾಣಲಿಲ್ಲ ಅಂದರೂ ಭಯವಾಗುತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts