More

    ಹೊಸ ವರ್ಷದ ಹೊಸ್ತಿಲಲ್ಲಿ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ: 36 IPS ಅಧಿಕಾರಿಗಳ ವರ್ಗಾವಣೆ

    ಬೆಂಗಳೂರು: ಹೊಸ ವರ್ಷಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ರಾಜ್ಯ ಪೊಲೀಸ್​ ಇಲಾಖೆಗೆ ಮೇಜರ್​​ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ ಒಟ್ಟು 37 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, 46 ಐಎಎಸ್​ ಅಧಿಕಾರಿಗಳಿಗೆ ಪದೋನ್ನತಿ ನೀಡಿ ಶನಿವಾರ (ಡಿ.30) ಆದೇಶ ಹೊರಡಿಸಿದೆ. ಕೆಲವು ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗಿದೆ.

    * ಕಮಲ್ ಪಂತ್: ಡಿಜಿಪಿ, ನೇಮಕಾತಿ ವಿಭಾಗ
    * ಅಲೋಕ್ ಕುಮಾರ್: ವಿಶೇಷ ಆಯುಕ್ತ, ರಸ್ತೆ ಸುರಕ್ಷತಾ ವಿಭಾಗ
    * ಸೀಮಂತ್ ಕುಮಾರ್ ಸಿಂಗ್: ಎಡಿಜಿಪಿ, ಬಿಎಂಟಿಎಫ್
    * ಹರಿಶೇಖರನ್: ಎಡಿಜಿಪಿ, ಹೋಂ ಗಾರ್ಡ್ಸ್ ಮತ್ತು ಸಿವಿಲ್ ಡಿಫೆನ್ಸ್
    * ನಂಜುಂಡಸ್ವಾಮಿ: ಎಡಿಜಿಪಿ, ಅಗ್ನಿಶಾಮಕ ಮತ್ತು ತುರ್ತು ಸೇವೆ
    * ಚಂದ್ರಗುಪ್ತ: ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ಸಿಸಿಬಿ
    * ತ್ಯಾಗರಾಜನ್: ಐಜಿಪಿ, ಪೂರ್ವ ವಲಯ
    * ಅಮಿತ್ ಸಿಂಗ್ : ಐಜಿಪಿ, ಪಶ್ಚಿಮ ವಲಯ
    * ವೈ. ಎಸ್​. ರವಿಕುಮಾರ್: ಡಿಐಜಿ, ಗುಪ್ತಚರ ಇಲಾಖೆ
    * ಶಾಂತನೂ ಸಿನ್ಹಾ: ಪೊಲೀಸ್ ಉಪ ಮಹಾನಿರೀಕ್ಷಕರು
    * ದಿವ್ಯಾ ವಿ.ಗೋಪಿನಾಥ್: ಪೊಲೀಸ್ ಉಪ ಮಹಾನಿರೀಕ್ಷಕರು ಮತ್ತು ನಿರ್ದೇಶಕರು, ವಿಧಿವಿಜ್ಞಾನ ಪ್ರಯೋಗಾಲಯ
    * ಸುಧೀರ್ ಕುಮಾರ್ ರೆಡ್ಡಿ: ಪೊಲೀಸ್ ಜನರಲ್, ಅರಣ್ಯ ಕೋಶ, ಅಪರಾಧ ತನಿಖಾ ಇಲಾಖೆ
    * ಆರ್​​ ಚೇತನ್​: ಪೊಲೀಸ್ ಜನರಲ್ ಮತ್ತು ಕಮಿಷನರ್​ ಆಫ್​ ಪೊಲೀಸ್​, ಕಲಬುರಗಿ ನಗರ
    * ವರ್ತಿಕಾ ಕಟಿಯಾರ್​: ಪೊಲೀಸ್ ಜನರಲ್, ಆಂತರಿಕ ಭದ್ರತಾ ವಿಭಾಗ ಬೆಂಗಳೂರು

    ಇನ್ನುಷ್ಟು ಮಾಹಿತಿ ಅಪ್​ಡೇಟ್​ ಮಾಡಲಾಗುವುದು….

    ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಗುಂಡಿನ ಚಕಮಕಿಯಲ್ಲಿ ಕಮಾಂಡೋಗೆ ಗಾಯ

    ಭಾರತ ಕಿರಿಯರ ತಂಡ ಶುಭಾರಂಭ: ಆಫ್ಘನ್ ಎದುರು 6 ವಿಕೆಟ್‌ಗಳ ಗೆಲುವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts