More

    ದೆಹಲಿ ವಾಯುಮಾಲಿನ್ಯಕ್ಕೆ ಒಣಹುಲ್ಲು ಸುಡುವುದೂ ಕಾರಣ!

    ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಪ್ರದೇಶದಲ್ಲಿ ಶೀತಗಾಳಿ ಜತೆಗೆ ವಾಯು ಮಾಲಿನ್ಯ ಅಧಿಕವಾಗಿದ್ದು, ಎರಡು ದಿನ ಶಾಲೆಗಳನ್ನು ಮುಚ್ಚಲಾಗಿದೆ. ಸರಕು ಸಾಗಾಣಿಕೆ ವಾಹನಗಳ ನಿಷೇಧ ಮತ್ತು ನಿರ್ಮಾಣ ಚಟುವಟಿಕೆ ಸ್ಥಗಿತ ಸೇರಿದಂತೆಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಆದರೆ ಗಾಳಿಯ ಗುಣಮಟ್ಟ ಕುಸಿತದ ಹಿಂದಿನ ಅಂಶಗಳು ಯಾವುವು ಎಂಬ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದ್ದು, ಈ ಕುರಿತು ಮಾಹಿತಿ ನಿಲ್ಲಿದೆ…

    ಇದನ್ನೂ ಓದಿ: ಉದ್ಯೋಗಿಗಳ ಯೋಗಕ್ಷೇಮದದಲ್ಲಿ ಜಪಾನ್​​ಗೆ ಕೊನೆಯ ಸ್ಥಾನ, ಹಾಗಾದರೆ ಭಾರತ…
    ಶುಕ್ರವಾರ ಬೆಳಗ್ಗೆ 8 ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 346 ರಷ್ಟಿತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ. ಪಿಎಂ ಕಣಗಳ ಮಟ್ಟ 2.5 ಇದ್ದು, ವಿಶ್ವ ಆರೋಗ್ಯ ಸಂಸ್ಥೆಯು ಅನುಮತಿಸುವ ದೈನಂದಿನ ಗರಿಷ್ಠ ಮಟ್ಟಕ್ಕಿಂತ ಸುಮಾರು 35 ಪಟ್ಟು ಹೆಚ್ಚು ಎಂದು ನಿಗಾ ಸಂಸ್ಥೆ ಐಕ್ಯೂ ಏರ್ ತಿಳಿಸಿದೆ.

    ವಾಯು ಮಾಲಿನ್ಯಕ್ಕೆ ಕಾರಣವಾದ ಅಂಶಗಳ ಬಗ್ಗೆ ನೋಡುವುದಾದರೆ ವಾಹನಗಳು, ಕಾರ್ಖಾನೆಗಳಿ.ದ ಹೊರಸೂಸುವ ಹೊಗೆ, ನೆರೆಯ ಪಂಜಾಬ್ ಮತ್ತು ಹರಿಯಾಣದಲ್ಲಿ ಭತ್ತ, ಗೋದಿಯ ಒಣ ಹುಲ್ಲು ಸುಡುವುದು ಹಠಾತ್​ ವಾಯು ಕಲುಷಿತವಾಗಲು ಪ್ರಮುಖ ಕಾರಣ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನಗಳು ತಿಳಿಸುತ್ತವೆ.

    ಪಂಜಾಬ್ ನಲ್ಲಿ ಭಾನುವಾರ ಒಂದೇ ದಿನ 1,068 ಒಣ ಹುಲ್ಲು ದಹನ ಪ್ರಕರಣಗಳು ಪತ್ತೆಯಾಗಿವೆ. ಪ್ರಸಕ್ತ ಬೆಳೆ ಕಟಾವು ಋತುವಿನಲ್ಲಿ ನಿತ್ಯ ಒಣಹುಲ್ಲಿಗೆ ಬೆಂಕಿ ಹಾಕಿ ಸುಡುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹೀಗಾಗಿ ಗಾಳಿಯ ಗುಣಮಟ್ಟ ಮುಂದಿನ 2ದಿನಗಳಲ್ಲಿ ಯಾವುದೇ ಸುಧಾರಣೆ ನಿರೀಕ್ಷಿಸಲಾಗುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.

    ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್‌ಮೆಂಟ್ ಅಧ್ಯಯನದ ಪ್ರಕಾರ, ವಾಹನಗಳಿಂದ ಹೊರಸೂಸುವಿಕೆಯು ಮಾಲಿನ್ಯಕ್ಕೆ ಶೇ.51 ಕೊಡುಗೆ ನೀಡಿದೆ. ಕೈಗಾರಿಕೆಗಳು ಮತ್ತು ನಿರ್ಮಾಣ ಚಟುವಟಿಕೆಗಳು ಕ್ರಮವಾಗಿ 11 ಮತ್ತು 7 ರಷ್ಟು ಕೊಡುಗೆ ನೀಡಿವೆ. ಮಳೆ ಬಾರದಿರುವುದರಿಂದ ಕೆಟ್ಟಗಾಳಿ ಹೆಚ್ಚಅಗಲು ಕಾರಣವಾಗಿದೆ ಎಂದು ಹವಾಮಾನ ಶಾಸ್ತ್ರಜ್ಞರು ಹೇಳಿದ್ದಾರೆ.

    ಚಳಿಗಾಲದ ಅವಧಿಯಲ್ಲಿ ವಾಯು ಮಾಲಿನ್ಯವನ್ನು ತಗ್ಗಿಸಲು ದೆಹಲಿ ಸರ್ಕಾರವು ಕಳೆದ ತಿಂಗಳು 15 ಅಂಶಗಳ ಕ್ರಿಯಾ ಯೋಜನೆಯನ್ನು ಪ್ರಾರಂಭಿಸಿತು, ಧೂಳಿನ ಮಾಲಿನ್ಯ, ವಾಹನಗಳ ಹೊರಸೂಸುವಿಕೆ ಮತ್ತು ಕಸ ಸುಡುವಿಕೆಗೆ ಬ್ರೇಕ್​ ಹಾಕುವುದಕ್ಕೆ ಒತ್ತು ನೀಡಿದೆ.

    ವಾಯು ಮಾಲಿನ್ಯ,ಶೀತಕ್ಕೆ ದೆಹಲಿ ತತ್ತರ: ಶಾಲೆಗಳಿಗೆ ರಜೆ, ಕಾಮಗಾರಿಗಳು ಸ್ಥಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts