More

    Web Exclusive|ಆರೋಗ್ಯ ಇಲಾಖೆಗೆ ಕೈಕೊಟ್ಟ 937 ಅಧಿಕಾರಿ, ನೌಕರರು

    ಶ್ರೀಕಾಂತ್ ಶೇಷಾದ್ರಿ

    ಬೆಂಗಳೂರು : ಸರ್ಕಾರಿ ನೌಕರರಿಗೆ ಸೇರಿದವರು ಕೆಲಸಬಿಟ್ಟುಹೋಗುವ ಪ್ರಮೇಯ ತೀರಾ ಕಡಿಮೆಯೇ. ಆದರೆ, ರಾಜ್ಯದ ಆರೋಗ್ಯ ಇಲಾಖೆ ಮಾತ್ರ ವಿಚಿತ್ರ ಸಮಸ್ಯೆ ಎದುರಿಸುತ್ತಿದೆ. ಕಳೆದ ಮೂರೂವರೆ ವರ್ಷದಲ್ಲಿ ಬರೋಬ್ಬರಿ 937 ಮಂದಿ ಹೇಳದೇ ಕೇಳದೇ ಅರ್ಧದಲ್ಲಿ ಕೈಕೊಟ್ಟು ಹೋಗಿದ್ದಾರೆ.

    ಕರೊನಾ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಇಲಾಖೆಯಲ್ಲಿ ಖಾಲಿ ಹುದ್ದೆ ಬಗ್ಗೆ ಚರ್ಚೆಗೆ ಬಂದಾಗ ಈ ಅಂಶ ಸರ್ಕಾರದ ಗಮನಕ್ಕೆ ಬಂದಿದೆ. ಇಷ್ಟೊಂದು ಸಂಖ್ಯೆಯಲ್ಲಿ ಬೇರೆ ಯಾವ ಇಲಾಖೆಯಲ್ಲೂ ಬಿಟ್ಟು ಹೋಗುತ್ತಿಲ್ಲ, ಆರೋಗ್ಯ ಇಲಾಖೆಯಲ್ಲಿ ಮಾತ್ರ ಹೀಗಾಗುತ್ತಿದೆ ಎಂಬ ಸಂಗತಿಯೂ ಚರ್ಚೆಯಾಗಿದೆ.

    ಅನಧಿಕೃತ ಗೈರಿನ ಪಟ್ಟಿ

    ಕಳೆದ ಮೂರೂವರೆ ವರ್ಷದ ಅಂಕಿ ನೋಟ

    ವೃಂದ   *   ನೌಕರರ ಸಂಖ್ಯೆ
    ಎ         *     280
    ಬಿ         *         7
    ಸಿ         *     352
    ಡಿ         *    298

    ಹೀಗೆ ಬಿಟ್ಟು ಹೋದವರಲ್ಲಿ ಮೆಡಿಕಲ್ ಆಫೀಸರ್​ಗಳು, ಸ್ಪೆಷಲಿಸ್ಟ್​ಗಳು, ಜನರಲ್ ಡ್ಯೂಟಿ ಆಫೀಸರ್​ಗಳು, ಸರ್ಜನ್, ವಿವಿಧ ಕ್ಷೇತ್ರದ ತಜ್ಞ ವೈದ್ಯರೇ 280 ಮಂದಿ ಇದ್ದಾರೆ. ಇವರ ಮೂಲ ವೇತನ ಸರಾಸರಿ 25ರಿಂದ 60-65 ಸಾವಿರ ರೂ.ವರೆಗೆ ಇದೆ. ಜತೆಗೆ ವಿವಿಧ ಭತ್ಯೆ ಸೇರಿದರೆ ಉತ್ತಮ ಮೊತ್ತವಾಗಲಿದೆ.

    ಇದನ್ನೂ ಓದಿ:  1.25 ಲಕ್ಷ ಕೋಟಿ ರೂಪಾಯಿ – ಸೈಬರ್ ಕ್ರೈಂನಿಂದಾಗಿರುವ ನಷ್ಟ: ಇನ್ನೂ ಹೆಚ್ಚಾಗಲಿದೆಯಂತೆ ಅಪರಾಧ!

    ಕಳೆದ ಒಂದು ವರ್ಷದ ಅವಧಿಯಲ್ಲಿ 49 ವೈದ್ಯ, ಸಿಬ್ಬಂದಿ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರಾಗಿದ್ದಾರೆ. ಕರೊನಾ ತೀವ್ರಗೊಂಡ ಸಂದರ್ಭದಲ್ಲಿ ಕೈಕೊಟ್ಟವರೂ ಇದ್ದಾರೆ. ಇವರಲ್ಲಿ ಸ್ತ್ರೀ ರೋಗ ತಜ್ಞರು, ಎಲುಬು ಮೂಳೆ ತಜ್ಞರು, ರೇಡಿಯಾಲಜಿಸ್ಟ್, ಚರ್ಮರೋಗ ತಜ್ಞ, ನೇತ್ರ ತಜ್ಞ, ಎಂಟಮಾಲಜಿಸ್ಟ್, ಸೇರಿದ್ದಾರೆ. ಕೆಲವು ಶೂಶ್ರೂಷಕರು, ಚಾಲಕರು ಅನಧಿಕೃತ ಗೈರಾಗಿದ್ದು, ಪುನಃ ಸೇವೆಗೆ ಸೇರುತ್ತೇವೆಂದು ಕೋರಿದವರೂ ಇದ್ದಾರೆ.
    ಇದನ್ನೂ ಓದಿ:  ಹಾಥರಸ್ ಪ್ರಕರಣ: ಪಿಎಫ್​ಐ ನಂಟಿನ ಕೇರಳದ ಪತ್ರಕರ್ತ ಮತ್ತು ಮೂವರ ನ್ಯಾಯಾಂಗ ಬಂಧನ ವಿಸ್ತರಣೆ

    ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ವಿವರಣೆ ನೀಡಿ, ಅನಧಿಕೃತವಾಗಿ ಗೈರು ಹಾಜರಾಗಿರುವ ಎಲ್ಲಾ ಅಧಿಕಾರಿ, ನೌಕರರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ. ಪ್ರಕ್ರಿಯೆ ವಿವಿಧ ಹಂತದಲ್ಲಿದೆ. ಕೆಸಿಎಸ್ ನಿಯಮದ ಪ್ರಕಾರ ಅನಧಿಕೃತವಾಗಿ ಗೈರಾದರೆ ಯಾವ ರೀತಿ ಕ್ರಮಕೈಗೊಳ್ಳಬಹುದೆಂಬ ವಿವರಣೆ ಇದ್ದು ಆ ಪ್ರಕಾರವೇ ನಡೆದುಕೊಳ್ಳಲಾಗುತ್ತದೆ ಎಂದು ವಿವರಿಸಿದ್ದಾರೆ.

    ಇದನ್ನೂ ಓದಿ:  ‘ಮಹಾರಾಷ್ಟ್ರದಲ್ಲಿ ಹೆಚ್ಚಾಗ್ತಿದೆ ‘ಲವ್​ ಜಿಹಾದ್​’ ಕೇಸ್​ಗಳು’!

    ಏಕೆ ಅನಧಿಕೃತ ಗೈರಾಗುತ್ತಾರೆ ಎಂಬ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಇಲ್ಲ. ವೈದ್ಯರು ವ್ಯವಸ್ಥೆಯಲ್ಲಿ ಏರುಪೇರಿನಿಂದ ಬೇಸತ್ತು ಅಥವಾ ವರ್ಗಾವಣೆ ವಿರೋಧಿಸಿ ಹೇಳದೇ ಕೇಳದೇ ಹೋಗಿಬಿಡುವ ಸಾಧ್ಯತೆ ಇದೆ. ಕೆಲಸ ಬಿಡುವ ಮಾಹಿತಿ ಕೊಟ್ಟು ಹೋಗಲು ಅವಕಾಶವಿರುತ್ತದೆ, ಆದರೆ, ಅನಧಿಕೃತವಾಗಿ ಗೈರಾಗುವ ಮೂಲಕ ಸಮಸ್ಯೆ ಸೃಷ್ಟಿಸಿಬಿಡುತ್ತಾರೆ ಎಂದು ಹೇಳಿದರು.

    ಇದನ್ನೂ ಓದಿ:  ದೇಶದ ಮೊದಲ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್​ಗೆ ಶಂಕುಸ್ಥಾಪನೆ ನೆರವೇರಿಸಿದ್ರು ಸಚಿವ ಗಡ್ಕರಿ

    ಒಂದು ವರ್ಷಕ್ಕಿಂತ ಹೆಚ್ಚು ಅವಧಿಗೆ ಅನಧಿಕೃತವಾಗಿ ಗೈರು ಹಾಜರಾಗಿರುವವರನ್ನು ಸೇವೆಯಿಂದ ವಜಾಗೊಳಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಇವರನ್ನು ಎ ವೃಂದಕ್ಕೆ ಸೇರಿದ 10 ವೈದ್ಯರೂ ಸೇರಿದ್ದಾರೆ. ಕಳೆದ ಮೂರು ವರ್ಷ ಹಿಂದಿನಿಂದಲೂ ಗೈರಾದವರನ್ನು ವಜಾಗೊಳಿಸುವ ಪ್ರಕ್ರಿಯೆ ಕೆಲವು ಬಾಕಿ ಸಹ ಇದೆ.

    ಇದನ್ನೂ ಓದಿ:  20 ವಿದೇಶಿ ತಬ್ಲಿಘಿಗಳ ಬಿಡುಗಡೆ: ಸಾಕ್ಷ್ಯಸಂಗ್ರಹಿಸುವಲ್ಲಿ ಎಡವಿದ ತನಿಖಾ ಸಂಸ್ಥೆಗಳು

    ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಹೀಗೆ ಅನಧಿಕೃತವಾಗಿ ಗೈರಾದರೆ ಸಮಸ್ಯೆ ಜನರಿಗಾಗುತ್ತದೆ. ಗೈರಾದವರನ್ನು ವಜಾ ಮಾಡಿ, ಅಲ್ಲಿಗೆ ಹೊಸಬರನ್ನು ನಿಯೋಜಿಸುವ ಹೊರೆ ಕೂಡ ಸರ್ಕಾರದ ಮೇಲೆ ಬೀಳಲಿದೆ. ಇನ್ನು ಮುಂದೆ ಈ ರೀತಿ ಅನಧಿಕೃತ ಗೈರಾಗುವವರ ಮೇಲೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ನಿಯಮಗಳು ಅನಿವಾರ್ಯತೆ ಇದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

    ಅಂತಿಮ ಹಂತದಲ್ಲಿದೆ ಸೈಬರ್ ಸೆಕ್ಯುರಿಟಿಗೆ ಸಂಬಂಧಿಸಿದ ಎನ್​ಸಿಎಸ್ಎಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts