More

    ದೇಶದ ಮೊದಲ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್​ಗೆ ಶಂಕುಸ್ಥಾಪನೆ ನೆರವೇರಿಸಿದ್ರು ಸಚಿವ ಗಡ್ಕರಿ

    ನವದೆಹಲಿ: ದೇಶದ ಮೊದಲ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್​ ಅಸ್ಸಾಂನಲ್ಲಿ ಸ್ಥಾಪನೆಯಾಗಲಿದ್ದು, ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಎಂಎಸ್​ಎಂಇ ಸಚಿವ ನಿತಿನ್ ಗಡ್ಕರಿ ವರ್ಚುವಲ್ ಶಂಕುಸ್ಥಾಪನೆಯನ್ನು ಮಂಗಳವಾರ ನೆರವೇರಿಸಿದ್ದಾರೆ. ಮೊದಲ ಹಂತದಲ್ಲಿ 694 ಕೋಟಿ ರೂಪಾಯಿಯ ಕಾಮಗಾರಿ ನಡೆಯಲಿದೆ.

    ಅಸ್ಸಾಂನ ಜೋಗಿಘೋಪಾ ಎಂಬಲ್ಲಿರುವ 317 ಎಕರೆ ಪ್ರದೇಶದಲ್ಲಿ ಈ ಪಾರ್ಕ್ ನಿರ್ಮಾಣವಾಗಲಿದೆ. ನ್ಯಾಷನಲ್​ ಹೈವೇಸ್ ಆ್ಯಂಡ್ ಇನ್​ಫ್ರಾಸ್ಟ್ರಕ್ಚರ್​ ಡೆವಲಪ್​ಮೆಂಟ್​ ಕಾರ್ಪೊರೇಶನ್​ (ಎನ್​ಎಚ್​ಐಡಿಸಿಎಲ್​) ಮುಂದಿನ ತಿಂಗಳು ಕಾಮಗಾರಿ ಆರಂಭಿಸಲಿದ್ದು, 2023ರಲ್ಲಿ ಪೂರ್ಣಗೊಳಿಸಲಿದೆ. ಅಸ್ಸಾಂನ ಆರ್ಥಿಕ ಬೆಳವಣಿಗೆಗೆ ಇದು ಗ್ರೋತ್​ ಎಂಜಿನ್ ಮಾದರಿಯಲ್ಲಿ ಕೆಲಸ ಮಾಡಲಿದೆ. 20 ಲಕ್ಷ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗ ಒದಗಿಸಲಿದೆ ಎಂದು ಗಡ್ಕರಿ ಹೇಳಿದ್ದಾರೆ.

    ಇದನ್ನೂ ಓದಿ: ತಪ್ಪಿಸಿಕೊಳ್ಳಲು ಯತ್ನಿಸಿದ ಜೋಡಿ ಕೊಲೆ ಆರೋಪಿ; ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು…

    ಈ ಯೋಜನೆಯು ಭಾರತಮಾಲಾ ಪರಿಯೋಜನಾದ ಭಾಗವೇ ಆಗಿದೆ. ದೇಶದಲ್ಲಿ 35 ಮಲ್ಟಿ ಮೋಡಲ್​ ಲಾಜಿಸ್ಟಿಕ್ ಪಾರ್ಕ್​ಗಳ ನಿರ್ಮಾಣವಾಗಲಿದ್ದು, ಇದಕ್ಕೆ ಸಂಬಂಧಿಸಿದ ವಿಸ್ತೃತ ಪ್ರಾಜೆಕ್ಟ್​ ರಿಪೋರ್ಟ್ ಸಿದ್ಧಪಡಿಸುವಲ್ಲಿ ಸಚಿವಾಲಯ ಕೆಲಸ ಮಾಡುತ್ತಿದೆ. ಬ್ರಹ್ಮಪುತ್ರಾ ಉದ್ದಕ್ಕೂ 280 ಕೋಟಿ ರೂಪಾಯಿ ಮೌಲ್ಯದ ಎಂಎಂಎಲ್​ಪಿ ಕೆಲಸಗಳು ಈಗಾಗಲೇ ಆರಂಭವಾಗಿದೆ. ಇದರಲ್ಲಿ 171 ಕೋಟಿ ರೂಪಾಯಿ ರಸ್ತೆ ನಿರ್ಮಾಣ, 23 ಕೋಟಿ ರೂಪಾಯಿ ರೈಲ್ವೆ ಲೈನ್​ಗೆ ಸಂಬಂಧಿಸಿದ್ದಾಗಿದೆ.

    ಇದನ್ನೂ ಓದಿ: ರಾಷ್ಟ್ರಪತಿ ಕೈಗೆ ಅಧಿಕಾರ ನೀಡಲು ಸಂವಿಧಾನ ತಿದ್ದುಪಡಿಗೆ ರೆಫರೆಂಡಂ: ಸುಪ್ರೀಂ ಕೋರ್ಟ್ ನಿರ್ದೇಶನ

    ಪಾರ್ಕ್​ ಗೆ ವಾಯು, ರಸ್ತೆ, ರೈಲು ಮತ್ತು ಜಲ ಮಾರ್ಗಗಳ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ. ಜೋಗಿಘೋಪಾ ಮತ್ತು ಗುವಾಹಟಿ ನಡುವೆ 154 ಕಿ.ಮೀ. ಅಂತರ ಇದ್ದು, ಮೂರು ಮೂರು ಕಿ.ಮೀ. ಅಂತರದಲ್ಲಿ ರೈಲ್ವೆ, ಜಲ ಮಾರ್ಗಗಳಿವೆ. ಇವುಗಳನ್ನು ಜೋಡಿಸುವ ಕೆಲಸ ಆಗುತ್ತಿದೆ. ರೂಪ್ಸಿ ಏರ್​ಪೋರ್ಟ್​ಗೆ ನಾಲ್ಕು ಲೇನ್​ನ ರಸ್ತೆ ನಿರ್ಮಾಣವೂ ನಡೆಯುತ್ತಿದೆ ಎಂದು ಸಚಿವರು ಹೇಳಿದರು. (ಏಜೆನ್ಸೀಸ್)

    20 ವಿದೇಶಿ ತಬ್ಲಿಘಿಗಳ ಬಿಡುಗಡೆ: ಸಾಕ್ಷ್ಯಸಂಗ್ರಹಿಸುವಲ್ಲಿ ಎಡವಿದ ತನಿಖಾ ಸಂಸ್ಥೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts