More

    ಪರಸ್ಪರ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು- ಚೀನಾ ಮತ್ತು ಪಾಕ್​ ಪ್ರಧಾನಿ ಮೋದಿ ಕಠಿಣ ಎಚ್ಚರಿಕೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎಂಟು ಸದಸ್ಯ ರಾಷ್ಟ್ರಗಳ ಶಾಂಘೈ ಸಹಕಾರ ಸಂಘಟನೆ (ಎಸ್​ಸಿಒ)ಯ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು, ಚೀನಾ ಮತ್ತು ಪಾಕಿಸ್ತಾನಗಳಿಗೆ ಕಠಿಣ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಈ ಎರಡೂ ದೇಶಗಳು ಗಡಿ ಭಾಗದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಒಪ್ಪಂದಗಳನ್ನು ಉಲ್ಲಂಘಿಸಿ ಉಪಟಳ ನೀಡುತ್ತಿರುವರ ಕಾರಣ ಪ್ರಧಾನಿಯವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

    ಚೀನಾ ಲಡಾಖ್ ಭಾಗದಲ್ಲಿ ಗಡಿ ಅತಿಕ್ರಮಣ ನಡೆಸಿಕೊಂಡು ಕಿರಿಕಿರಿ ಉಂಟುಮಾಡುತ್ತಿದ್ದರೆ, ಪಾಕಿಸ್ತಾನ ಉಗ್ರರನ್ನು ಮುಂದಿಟ್ಟುಕೊಂಡು ಜಮ್ಮು-ಕಾಶ್ಮೀರ ಭಾಗದಲ್ಲಿ ಉಪಟಳ ನೀಡುತ್ತಿದೆ. ಇವೆಲ್ಲದರ ನಡುವೆ, ಪಾಕಿಸ್ತಾನ ಎಲ್ಲ ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಜಮ್ಮು-ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸುತ್ತ ದ್ವಿಪಕ್ಷೀಯ ವಿಚಾರದಲ್ಲಿ ಇನ್ನೊಂದಿಷ್ಟು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ಇಂದಿನ ಮಾತು ಎಚ್ಚರಿಕೆ ಸಂದೇಶವಾಗಿ ಕಂಡುಬಂದಿದೆ.

    ಇದನ್ನೂ ಓದಿ: ರಾಕ್​ಲೈನ್​ ಸ್ಟುಡಿಯೋದಲ್ಲಿ ಕುಂಬಳಕಾಯಿ ಒಡೆದು ಶೂಟಿಂಗ್ ಮುಗಿಸಿದ ‘ಫ್ಯಾಂಟಸಿ’ ತಂಡ

    ಎಸ್​ಸಿಒ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಿಷ್ಟು – ದೇಶಗಳ ನಡುವೆ ಪರಸ್ಪರ ಸಂಪರ್ಕ, ಸಹಕಾರ ವೃದ್ಧಿಯಾಗಬೇಕು ಎಂಬ ಅಂಶದಲ್ಲಿ ಭಾರತ ನಂಬಿಕೆ ಇರಿಸಿಕೊಂಡಿದೆ. ಈ ವಿಷಯದಲ್ಲಿ ನಾವು ಮುಂದಡಿ ಇರಿಸುತ್ತೇವೆ. ಇದೇ ವೇಳೆ, ಪರಸ್ಪರ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕಾದ್ದು ಕೂಡ ಅತೀ ಅವಶ್ಯ.

    ಇದನ್ನೂ ಓದಿ:  ಕ್ಯಾಬ್​ ಹತ್ತಿದ ಆ ಮೂವರು ಹೀಗಾ ಮಾಡೋದು? ಚಾಲಕರೇ ಹುಷಾರಪ್ಪಾ…

    ಎಸ್​ಸಿಒದ ಮೂಲ ತತ್ತ್ವಗಳ ಚೌಕಟ್ಟಿನಲ್ಲಿ ಹೊಂದಿಕೊಂಡೇ ಕೆಲಸ ಮಾಡಲು ಭಾರತ ಯಾವಾಗಲೂ ಬಯಸುತ್ತದೆ. ಆದರೆ, ದುರದೃಷ್ಟವಶಾತ್​ ದ್ವಿಪಕ್ಷೀಯ ವಿಷಯಗಳನ್ನು ಎಸ್​ಸಿಒದ ಕಾರ್ಯಸೂಚಿಯನ್ನು ಉಲ್ಲಂಘಿಸಿ ಪದೇಪದೆ ಪ್ರಸ್ತಾಪಿಸುವ ಪ್ರಯತ್ನ ನಡೆಯುತ್ತಲೇ ಇದೆ. ಇದು ಸಹ್ಯ ವಿಚಾರವಲ್ಲ.

    ಇದನ್ನೂ ಓದಿ: ‘ಜ್ಯೋತಿಷಿಗಳ ಬದಲು ಜನರ ನಾಡಿಮಿಡಿತ ಅರಿತಿದ್ರೆ ಕಾಂಗ್ರೆಸ್​ಗೆ ಹೀಗಾಗ್ತಿರಲಿಲ್ಲ’

    ಕೋವಿಡ್ 19 ವಿಚಾರದಲ್ಲಿ ಈ ಸಾಂಕ್ರಾಮಿಕದ ವಿರುದ್ಧ ಮಾನವೀಯ ನೆಲೆಯಲ್ಲಿ ಹೋರಾಡಲು ಅಗತ್ಯ ಲಸಿಕೆ ಉತ್ಪಾದನೆ ಮತ್ತು ಪೂರೈಸಲು ಭಾರತ ತನ್ನ ಎಲ್ಲ ಸಾಮರ್ಥ್ಯವನ್ನು ಬಳಸಲಿದೆ. ಈಗಾಗಲೇ ಭಾರತ 150 ರಾಷ್ಟ್ರಗಳಿಗೆ ಅಗತ್ಯ ಔಷಧಗಳನ್ನು ಪೂರೈಸುವ ಕೆಲಸ ಮಾಡಿದೆ. (ಏಜೆನ್ಸೀಸ್)

    ಎನ್​ಡಿಎ ಮುನ್ನಡೆ; ಸಹಿಸಲಾಗದೆ ಟಿವಿ ಆಫ್​ ಮಾಡಿ, ಬಿಸಿಲಿಗೆ ಮೈಯೊಡ್ಡಿದ ಲಾಲೂ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts