More

    VIDEO| ಮಗಳೊಂದಿಗೆ ಸೇರಿ ಕತ್ರಿನಾ ಕೈಫ್​​​ ಅಭಿನಯದ ಶೀಲಾ ಕಿ ಜವಾನಿ ಹಾಡಿಗೆ ಹೆಜ್ಜೆ ಹಾಕಿದ ವಾರ್ನರ್​!

    ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್​ನ ಸ್ಪೋಟಕ ಆರಂಭಿಕ ಆಟಗಾರ ಡೇವಿಡ್​ ವಾರ್ನರ್​ ಅವರ ಭಾರತ ಪ್ರೀತಿ ಎಲ್ಲರಿಗೂ ಗೊತ್ತಿರುವಂಥದ್ದೆ. ಆಗಾಗ ಮಾತಿನ ಮೂಲಕ ಭಾರತವನ್ನು ಹೊಗಳುವ ವಾರ್ನರ್​, ಇದೀಗ ಬಾಲಿವುಡ್​ ಚಿತ್ರದ ಐಟಂ ಸಾಂಗ್​ ಒಂದಕ್ಕೆ ತಮ್ಮ ಮಗಳೊಂದಿಗೆ ಸೇರಿ ಹೆಜ್ಜೆ ಹಾಕಿರುವುದು ಮತ್ತೊಮ್ಮೆ ಭಾರತೀಯರೆಡೆಗಿನ ಪ್ರೀತಿಗೆ ಸಾಕ್ಷಿಯಾಗಿದೆ.

    ಸದ್ಯ ಏನು ನಡೆಯುತ್ತಿದೆ ಎಂಬುದರ ಐಡಿಯಾ ನನಗಿಲ್ಲ. ಆದರೆ, ಟಿಕ್​ಟಾಕ್​ ಮಾಡುವಂತೆ ನನ್ನ 5 ವರ್ಷದ ಮಗಳು ಹೇಳಿದಳು ಎನ್ನುತ್ತಾ ಇತ್ತೀಚೆಗಷ್ಟೇ ಟಿಕ್​ಟಾಕ್​ ಲೋಕಕ್ಕೆ ವಾರ್ನರ್​ ಕಾಲಿಟ್ಟಿದ್ದರು. ಇದನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಖಚಿತಪಡಿಸಿದ್ದರು.

    ಮತ್ತೊಂದು ಟಿಕ್​ಟಾಕ್​ ವಿಡಿಯೋದಲ್ಲಿ ಶೂನ್ಯ ಹಿಂಬಾಲಕರು ಇದ್ದಾರೆ. ಯಾರಾದರೂ ನನಗೆ ಸಹಾಯ ಮಾಡಿ ಎನ್ನುತ್ತಾ ತಮ್ಮ ಮಗಳೊಂದಿಗೆ ನಟಿ ಕತ್ರಿನಾ ಕೈಫ್​ ಸೊಂಟ ಬಳುಕಿಸಿರುವ ಬಾಲಿವುಡ್​ ಸೂಪರ್​ ಹಿಟ್​ ಶೀಲಾ ಕಿ ಜವಾನಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

    ಇದರ ಒಂದು ಝಲಕ್​ ಅನ್ನ ಇನ್​ಸ್ಟಾಗ್ರಾಂನಲ್ಲಿ ವಾರ್ನರ್​ ಹಂಚಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ 250,000 ವೀಕ್ಷಣೆ ಪಡೆದುಕೊಂಡಿದೆ.

    ಇನ್ನು ಕ್ರಿಕೆಟ್​ ವಿಚಾರಕ್ಕೆ ಬಂದರೆ ಕರೊನಾ ಲಾಕ್​ಡೌನ್​ ಇರದಿದ್ದರೆ ಇಷ್ಟೋತ್ತಿಗೆ ಐಪಿಎಲ್​ 2020 ಆವೃತ್ತಿಯಲ್ಲಿ ಸನ್​ ರೈಸರ್ಸ್​ ಹೈದರಾಬಾದ್​ ತಂಡವನ್ನು ವಾರ್ನರ್​ ಮುನ್ನೆಡೆಸಬೇಕಾಗಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಐಪಿಎಲ್​ ವಿಳಂಬಾವಗಿದ್ದು, ಯಾವಾಗ ಶುರುವಾಗುತ್ತೆ ಎಂಬುದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.

    ಮಾರ್ಚ್​ 29ರಂದು ಆರಂಭವಾಗಬೇಕಿದ್ದ ಟೂರ್ನಿ, ಏಪ್ರಿಲ್​ 15ಕ್ಕೆ ಮುಂದೂಡಲಾಗಿತ್ತು. ಆದರೆ, ಕರೊನಾ ಹಾವಳಿ ಕಡಿಮೆಯಾಗದ ಕಾರಣ ಲಾಕ್​ಡೌನ್​ ಮೇ 3ರವರೆಗೆ ವಿಸ್ತರಣೆಯಾಗಿದ್ದು, ಐಪಿಎಲ್​ ಟೂರ್ನಿಯನ್ನು ಅನಿರ್ಧಿಷ್ಟಾವಧಿ ವರೆಗೆ ಮುಂದೂಡಲಾಗಿದೆ. (ಏಜೆನ್ಸೀಸ್​)

    ಕೊಹ್ಲಿ ಚೌಕಾ ಮಾರ್ನಾ, ಅನುಷ್ಕಾ ಕೀಟಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts