More

    ಪ್ರತಿಯೊಬ್ಬರೂ ಕಡ್ಡಾಯ ಮತದಾನ ಮಾಡಿ

    ಹುಮನಾಬಾದ್: ಮೇ ೭ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಡಿಸಿ ಗೋವಿಂದರಡ್ಡಿ ಕರೆ ನೀಡಿದರು.

    ಪಟ್ಟಣದಲ್ಲಿ ಗುರುವಾರ ಲೋಕಸಭಾ ಚುನಾವಣೆ ನಿಮಿತ್ತ ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿ ಹಾಗೂ ತಾಪಂ ಸಹಯೋಗದಡಿ ಥೇರ್ ಮೈದಾನದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ವಾಕಥಾನ್ (ಮತದಾನ ಜಾಗೃತಿ)ಗೆ ಚಾಲನೆ ನೀಡಿದ ಅವರು, ಕಳೆದ ಚುನಾವಣೆಗಿಂತ ಈ ಸಲ ಹೆಚ್ಚಿನ ಮತದಾನ ಆಗಬೇಕು. ಅದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

    ಜಿಪಂ ಸಿಇಒ ಡಾ.ಗಿರೀಶ್ ಬದೋಲೆ ಮಾತನಾಡಿ, ೧೮ ವರ್ಷ ತುಂಬಿದ ಪ್ರತಿಯೊಬ್ಬರೂ ಮತಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಸಂವಿಧಾನಬದ್ಧ ಹಕ್ಕು ಚಲಾಯಿಸುವ ಮೂಲಕ ಸದೃಢ ರಾಷ್ಟ್ರಕ್ಕೆ ಕೈಜೋಡಿಸಬೇಕು ಎಂದು ಕೋರಿದರು.

    ಚುನಾವಣಾ ವೀಕ್ಷಕ ದೀಪಾಂಕರ್ ಮಹಾಪಾತ್ರ ಮಾತನಾಡಿ, ನೀವು ಮತದಾನ ಮಾಡುವುದರ ಜತೆ ಅಕ್ಕಪಕ್ಕ ಮತ್ತು ವಲಸೆ ಹೋದವರಲ್ಲೂ ಮತದಾನದ ಮಹತ್ವ ತಿಳಿಸಿ ವೋಟ್ ಚಲಾಯಿಸುವಂತೆ ನೋಡಿಕೊಳ್ಳಬೇಕು. ಪ್ರಜಾಪ್ರಭುತ್ವದ ಉಳಿವಿಗಾಗಿ ಉತ್ತಮ ಪ್ರತಿನಿಧಿ ಆಯ್ಕೆ ಮಾಡಲು ಎಲ್ಲರೂ ತಮ್ಮ ಅನ್ಯ ಕೆಲಸಗಳನ್ನು ಬದಿಗಿರಿಸಿ ಮೇ ೭ರಂದು ತಪ್ಪದೆ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚನ್ನಬಸವಣ್ಣ ಲಂಗೋಟಿ ಮಾತನಾಡಿ, ಯಾವುದೇ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡುವುದರ ಜತೆಗೆ ಅಕ್ಕಪಕ್ಕದವರನ್ನೂ ಕರೆತಂದು ಮತದಾನ ಮಾಡಿಸಬೇಕು ಎಂದು ಹೇಳಿದರು.

    ರಾಜ್ಯ ಮಟ್ಟದ ತರಬೇತುದಾರ ಡಾ.ಗೌತಮ ಅರಳಿ, ತಹಸೀಲ್ದಾರ್ ಅಂಜುಂ ತಬಸ್ಸುಮ್, ತಾಪಂ ಇಒ ಶಿವಲೀಲಾ, ಡಿವೈಎಸ್‌ಪಿ ಜೆ.ಎಸ್. ನ್ಯಾಮಗೌಡರ್, ಸಿಪಿಐ ಗುರು ಪಾಟೀಲ್, ಬಿಇಒ ವೆಂಕಟೇಶ ಗುಡಾಳ, ಸಹಾಯಕ ಪಶು ನಿರ್ದೇಶಕ ಡಾ.ಗೋವಿಂದ, ಸಿಡಿಪಿಒ ಹಿರೇಮಠ, ಪಿಡಬ್ಲ್ಯಡಿ ಎಇಇ ಸುನೀಲ ಪ್ರಭಾ, ಜಿಪಂ ಎಇಇ ಸುಭಾಷ ವಾಘಮಾರೆ, ಸಹಾಯಕ ಕೃಷಿ ನಿರ್ದೇಶಕ ಗೌತಮ, ಟಿಎಚ್‌ಒ ಶಿವಕುಮಾರ ಸಿದ್ದೇಶ್ವರ, ಸಿಎಂಒ ಡಾ.ನಾಗನಾಥ ಹುಲಸೂರೆ ಇತರರಿದ್ದರು.

    ಮೊಬೈಲ್ ಟಾರ್ಚ್​ನೊಂದಿಗೆ ಹೆಜ್ಜೆ: ಥೇರ್ ಮೈದಾನದಿಂದ ಡಾ.ಬಿ.ಆರ್. ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್, ಬಾಲಾಜಿ, ಬಸವೇಶ್ವರ, ಶಿವಾಜಿ ವೃತ್ತದ ಮೂಲಕ ರಾಮ್ ಆ್ಯಂಡ್ ರಾಜ್ ಕಾಲೇಜಿನವರೆಗೆ ಅಧಿಕಾರಿಗಳು, ಸಿಬ್ಬಂದಿ, ಸಂಘ-ಸಂಸ್ಥೆ ಪ್ರಮುಖರು ಮೊಬೈಲ್ ಟಾರ್ಚ್ ಲೈಟ್‌ನೊಂದಿಗೆ ವಾಕಥಾನ್ ನಡೆಸಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts