More

    ಅರಮನೆಯಲ್ಲಿ ಮತದಾನ, ಮತದಾರರೇ ಪ್ರಭುಗಳು!

    ಶಿವಮೊಗ್ಗ: ಅರಮನೆಯಲ್ಲಿ ಮತ ಚಲಾಯಿಸಿದ ಮತದಾರರು ಸಿಂಹಾಸನದಲ್ಲಿ ಆಸೀನರಾಗಬಹುದಿತ್ತು. ಮತ ಹಾಕಲು ಬಂದವರಿಗೆ ರೆಡ್‌ಕಾರ್ಪೆಟ್ ಸ್ವಾಗತ ಕೂಡ ಮಾಡಲಾಗಿತ್ತು. ಮತಗಟ್ಟೆಗೆ ತೆರಳಿದವರಿಗೆ ಅರಮನೆಯೊಳಗೆ ಪ್ರವೇಶಿಸಿದ ಅನುಭವ..

    ಅಂತಹದೊಂದು ಅವಕಾಶವನ್ನು ಶಿವಮೊಗ್ಗ ಜಿಲ್ಲಾ ಸ್ವೀಪ್ ಸಮಿತಿಯು ಶಿವಮೊಗ್ಗದ ಮತದಾರರಿಗೆ ಮಾಡಿಕೊಟ್ಟಿತ್ತು. ಜಿಲ್ಲಾ ಪಂಚಾಯತ್ ಆವರಣದಲ್ಲಿ ನಿರ್ಮಾಣ ಮಾಡಲಾಗಿದ್ದ ಅರಮನೆ ಮಾದರಿ ಮತಗಟ್ಟೆಯು ಮತದಾರರ ಆಕರ್ಷಣೀಯ ಕೇಂದ್ರವಾಗಿತ್ತು. ಸ್ವೀಪ್ ಸಮಿತಿಯು ಶಿವಮೊಗ್ಗ ನಗರದ 283 ಮತಗಟ್ಟೆಯನ್ನೇ ಅರಮನೆ ಮಾದರಿ ನಿರ್ಮಿಸಿತ್ತು. ಮತಗಟ್ಟೆಯಲ್ಲಿ ರಾಜಮಹಾರಾಜರ ಆಸನಗಳಿದ್ದವು. ಕಿರೀಟ ಮತ್ತು ಉಡುಗೆಗಳಿದ್ದವು.
    ಮತ ಚಲಾಯಿಸಿದವರು ಕಿರೀಟ ಧರಿಸಿ ಸಿಂಹಾಸನ ಏರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಚುನಾವಣಾ ಅಧಿಕಾರಿಗಳು ಕೂಡ ಸಾಂಪ್ರದಾಯಿಕ ಉಡುಗೆಯಲ್ಲಿ ಬಂದಿದ್ದು, ಅಧಿಕಾರಿಗಳ ಪ್ರಯತ್ನಕ್ಕೆ ಮತದಾರರು ಫುಲ್ ಖುಷ್ ಆದರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆ ಪ್ರಭುಗಳು. ಈ ಉದ್ದೇಶದಿಂದ ಈ ಮತಗಟ್ಟೆ ಸಿದ್ಧವಾಗಿತ್ತು. ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಮತ್ತು ಮುಖ್ಯ ಯೋಜನಾಧಿಕಾರಿ ಗಾಯತ್ರಿ ಅವರ ಮಾರ್ಗದರ್ಶನದಂತೆ ವಿಶೇಷ ಮತಗಟ್ಟೆ ಸಿದ್ಧಗೊಂಡಿತ್ತು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಅರಮನೆ ಮಾದರಿ ಮತಗಟ್ಟೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts