More

    ಸಜ್ಜನಿಕೆಯ ವ್ಯಕ್ತಿಗೆ ಮತ ಚಲಾಯಿಸಿ

    ರಾಯಚೂರು: ಈಶಾನ್ಯ ಪದವೀಧರ ಮತ ಕ್ಷೇತ್ರದ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿಯಾಗಿರುವ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್‌ಗೆ ಮತ ಚಲಾಯಿಸುವಂತೆ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಮನವಿ ಮಾಡಿದರು.
    ಸ್ಥಳೀಯ ಎಸ್‌ಎಲ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಿಜೆಪಿಯಿಂದ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯವಿದ್ದು, ಪದವೀಧರರು ತಪ್ಪದೆ ಮತ ಚಲಾಯಿಸಬೇಕು ಎಂದರು.
    ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಆಶಯಕ್ಕೆ ಎಲ್ಲರೂ ಬೆಂಬಲಿಸಬೇಕು ಎಂದು ಹೇಳಿದರು.
    ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಕಾಂಗ್ರೆಸ್ ಗೆಲ್ಲುವ ಶಕ್ತಿ ಕಳೆದುಕೊಂಡಿದೆ. ಮತದಾರರಿಗೆ ಆಮಿಷ ಒಡ್ಡಿ ಅಕಾರಕ್ಕೆ ಬಂದಿದೆ. ಇದು ದೇಶಕ್ಕೆ ಕಂಟಕವಾಗಿದೆ. ನಿರ್ಣಯಗಳು ಏನಿದ್ದರೂ ಮೇಲ್ಮನೆಯಲ್ಲಿ ಒಪ್ಪಿಗೆ ಪಡೆಯಬೇಕು. ಹೀಗಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
    ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ಸದಸ್ಯ ನಿಶಾಂತ್ ಯಲಿ, ಮುಖಂಡರಾದ ರಾಘವೇಂದ್ರ ಉಟ್ಕೂರು, ಆರ್.ಕೆ.ಅಮರೇಶ, ಡಾ.ನಾಗರಾಜ ಬಾಲ್ಕಿ, ವಿಜಯ ಭಾಸ್ಕರ್, ಬಿ.ಗೋವಿಂದ, ಶಿವಕುಮಾರ ಪಾಟೀಲ್, ವಿಜಯಕುಮಾರ ಸಜ್ಜನ್, ಕಾಲೇಜು ಪ್ರಾಚಾರ್ಯ ಆರ್.ಬಸವರಾಜ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts