More

    ಸತತ ಮೂರನೇ ಸಲ ಕಾಮನ್​ವೆಲ್ತ್​ ಚಾಂಪಿಯನ್​ಷಿಪ್​ಗೆ ಪವರ್​​ಲಿಫ್ಟರ್​ ವಿಶ್ವನಾಥ್ ಆಯ್ಕೆ!

    ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದ ಪವರ್​ಲಿಫ್ಟರ್​ ವಿಶ್ವನಾಥ್ ಭಾಸ್ಕರ ಗಾಣಿಗ ಸತತ ಮೂರನೇ ಸಲ ಕಾಮನ್ವೆಲ್ತ್ ಪವರ್​​ಲಿಫ್ಟಿಂಗ್​ ಚಾಂಪಿಯನ್​ಷಿಪ್​ಗೆ ಆಯ್ಕೆ ಆಗಿದ್ದಾರೆ.

    ಈ ಸಲ ನ್ಯೂಜಿಲೆಂಡ್​​ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಪವರ್​​ಲಿಫ್ಟಿಂಗ್​ ಚಾಂಪಿಯನ್​ಷಿಪ್​ನಲ್ಲಿ ವಿಶ್ವನಾಥ್ ಭಾರತವನ್ನು ಪ್ರತಿನಿಧಿಸಲಿದ್ದಾರೆ. 2020 ಮತ್ತು 2021ರಲ್ಲಿ ನಡೆದ ರಾಷ್ಟ್ರಮಟ್ಟದ ಪವರ್​​ಲಿಫ್ಟಿಂಗ್​​ ಚಾಂಪಿಯನ್​ಷಿಪ್​​ನಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಅವರು ಈ ಅರ್ಹತೆ ಪಡೆದುಕೊಂಡಿದ್ದಾರೆ.

    ದಕ್ಷಿಣ ಆಫ್ರಿಕದಲ್ಲಿ 2017ರಲ್ಲಿ ನಡೆದ ಕಾಮನ್ವೆಲ್ತ್ ಪವರ್​​ಲಿಫ್ಟಿಂಗ್​ ಚಾಂಪಿಯನ್​ಷಿಪ್​ನಲ್ಲಿ ವಿಶ್ವನಾಥ್ ಚಿನ್ನದ ಪದಕ ಗಳಿಸಿದ್ದರು. ಕೆನಡದಲ್ಲಿ 2019ರಲ್ಲಿ ನಡೆದ ಕಾಮನ್ವೆಲ್ತ್ ಪವರ್​​ಲಿಫ್ಟಿಂಗ್​ ಚಾಂಪಿಯನ್​​ಷಿಪ್​​ನಲ್ಲೂ ಅವರು ಚಿನ್ನದ ಪದಕ ಗಳಿಸಿದ್ದರು. ಮಾತ್ರವಲ್ಲ, ಇದೇ ಚಾಂಪಿಯನ್​ಷಿಪ್​ನಲ್ಲಿ 327.5 ಕೆ.ಜಿ. ಭಾರ ಎತ್ತುವ ಮೂಲಕ 8 ವರ್ಷದ ಹಳೇ ದಾಖಲೆ ಮುರಿದು ಭಾರತಕ್ಕೆ ಹೆಮ್ಮೆ ತಂದಿದ್ದರು.

    ಈಗ ಆ ದಾಖಲೆ ಮುರಿದು ಹೊಸ ದಾಖಲೆ ಬರೆಯುವ ಗುರಿ ಇರಿಸಿಕೊಂಡಿರುವ ವಿಶ್ವನಾಥ್​ ಅದಕ್ಕಾಗಿ ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಅದಕ್ಕೆಂದೇ ಬೆಂಗಳೂರಿನ ಬಾಲರ್ಕ ಫಿಟ್​​ನೆಸ್​​ ಸೆಂಟರ್​ನಲ್ಲಿ ವಿಶೇಷವಾದ ತರಬೇತಿ ಪಡೆಯುತ್ತ ಅಭ್ಯಾಸ ನಡೆಸುತ್ತಿದ್ದಾರೆ.

     

    ಸತತ ಮೂರನೇ ಸಲ ಕಾಮನ್​ವೆಲ್ತ್​ ಚಾಂಪಿಯನ್​ಷಿಪ್​ಗೆ ಪವರ್​​ಲಿಫ್ಟರ್​ ವಿಶ್ವನಾಥ್ ಆಯ್ಕೆ!

    ಶ್ರೀಧರ ಎಂಬ ಯುವಕ ಮೊಹ್ಮದ್ ಸಲ್ಮಾನ್ ಆದ ಕಥೆ-ವ್ಯಥೆ; ಬಲವಂತದ ಖತ್ನಾ, ಮತಾಂತರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts