More

    ಆರ್​ಸಿಬಿ ತೊರೆದು ಈ ತಂಡಕ್ಕೆ ಸೇರಲು ವಿರಾಟ್​ ಕೊಹ್ಲಿಗೆ ಸಲಹೆ ನೀಡಿದ ಮಾಜಿ ಸ್ಟಾರ್​ ಆಟಗಾರ!

    ನವದೆಹಲಿ: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಧ್ಯಾಯ ಮುಗಿದಿದೆ. ನಿನ್ನೆ (ಮೇ 22) ಅಹಮದಾಬಾದ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಸೋತು ಟೂರ್ನಿಯಿಂದ ನಿರ್ಗಮಿಸಿದೆ. ಸತತ ಆರು ಗೆಲುವಿನೊಂದಿಗೆ ಪವಾಡ ರೀತಿಯಲ್ಲಿ ಪ್ಲೇಆಫ್ ಪ್ರವೇಶಿಸಿದ ಆರ್‌ಸಿಬಿ ಎಲಿಮಿನೇಟರ್‌ನಲ್ಲಿ ಗೆಲುವು ಸಾಧಿಸಿತು.

    ಸ್ಟಾರ್​ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 741 ರನ್ ಗಳಿಸಿದರೂ ಅದು ಫಲ ನೀಡಲಿಲ್ಲ. ವಿರಾಟ್ ಶ್ರಮ ಬೂದಿಯಾಯಿತು. ಆರ್​ಆರ್​ ವಿರುದ್ಧದ ಸೋಲಿನಿಂದ ವಿರಾಟ್ ತೀವ್ರ ನಿರಾಸೆಗೊಂಡರು. ಕೊಹ್ಲಿಯ ಮನಸ್ಸಿನ ನೋವು ಅವರ ಕಣ್ಣುಗಳಲ್ಲಿ ಕಾಣಿಸುತ್ತಿತ್ತು. ಆದರೆ ಆರ್‌ಸಿಬಿಗಾಗಿ ಮೊದಲ ಸೀಸನ್‌ನಿಂದಲೂ ಐಪಿಎಲ್ ಟ್ರೋಫಿಗಾಗಿ ಹೋರಾಡುತ್ತಿರುವ ಕೊಹ್ಲಿಗೆ, ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಒಂದು ಸಲಹೆಯನ್ನು ನೀಡಿದ್ದಾರೆ.

    ವಿರಾಟ್ ಕೊಹ್ಲಿ ಐಪಿಎಲ್ ಟ್ರೋಫಿ ಗೆಲ್ಲಲು ಸಂಪೂರ್ಣವಾಗಿ ಅರ್ಹರು ಎಂದು ಕೆವಿನ್ ಪೀಟರ್ಸನ್ ಹೇಳಿದ್ದಾರೆ. ಈಗಾಗಲೇ ಅನೇಕ ಕ್ರಿಕೆಟ್​ ದಿಗ್ಗಜರು ಇತರ ಫ್ರಾಂಚೈಸಿಗಳಿಗೆ ತೆರಳಿರುವುದರಿಂದ 2025 ರಲ್ಲಿ ವಿರಾಟ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಬೇಕು ಎಂದು ಕೆಪಿ ಸಲಹೆ ನೀಡಿದರು.

    ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡುತ್ತಾ ಇತರ ಕ್ರೀಡೆಗಳಲ್ಲಿ ಶ್ರೇಷ್ಠ ಆಟಗಾರರು ಇತರ ಫ್ರಾಂಚೈಸಿಗಳಿಗೆ ಹೋಗಿದ್ದಾರೆ ಮತ್ತು ವಿಜಯವನ್ನು ಸಾಧಿಸಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್​ಸಿಬಿ ಗೆಲುವಿಗೆ ಪ್ರಯತ್ನಿಸುತ್ತಿದ್ದಾರೆ. ಕೊಹ್ಲಿ ಆರೆಂಜ್ ಕ್ಯಾಪ್ ಪಡೆದರೂ ಆರ್‌ಸಿಬಿ ಮತ್ತೊಮ್ಮೆ ಟ್ರೋಫಿ ಗೆಲ್ಲುವಲ್ಲಿ ವಿಫಲವಾಯಿತು. ವಿರಾಟ್ ಫ್ರಾಂಚೈಸಿಯ ಬ್ರ್ಯಾಂಡ್ ಅನ್ನು ಬೆಳೆಸುತ್ತಾರೆ. ಹೀಗಾಗಿ ಅವರು ಟ್ರೋಫಿಗೆ ಅರ್ಹರಾಗಿದ್ದಾರೆ. ಐಪಿಎಲ್ ಪ್ರಶಸ್ತಿ ಗೆಲ್ಲಲು ನೆರವಾಗುವ ತಂಡದಲ್ಲಿ ಅವರು ಇರಬೇಕು ಎಂದು ಹೇಳಿದರು.

    ನನ್ನ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಹೆ ವಿರಾಟ್ ಕೊಹ್ಲಿ ಹೋಗಬೇಕು. ಇದರಿಂದ ಅವರು ಹೆಚ್ಚಿನ ಸಮಯ ಮನೆಯಲ್ಲಿಯೇ ಇರುತ್ತಾರೆ. ನನಗೆ ಗೊತ್ತು ಅವರಿಗೆ ದೆಹಲಿಯಲ್ಲಿ ಮನೆ ಇದೆ. ಕೊಹ್ಲಿಗೆ ಕುಟುಂಬವಿದೆ. ನೀವು ದೆಹಲಿಯಲ್ಲಿ ಆಡಿದರೆ, ನಿಮ್ಮ ಕುಟುಂಬದೊಂದಿಗೆ ನೀವು ಹೆಚ್ಚು ಸಮಯ ಕಳೆಯಬಹುದು, ವಿರಾಟ್ ಅವರು ದೆಹಲಿಗೆ ಏಕೆ ಆಡಬಾರದು? ರೊನಾಲ್ಡೊ, ಮೆಸ್ಸಿ, ಹ್ಯಾರಿ ಕೇನ್ ಫ್ರಾಂಚೈಸಿ ತೊರೆದ ಉದಾಹರಣೆ ಇದೆ ಎಂದು ಕೆವಿನ್ ಪೀಟರ್ಸನ್ ಹೇಳಿದ್ದಾರೆ.

    ಅಂದಹಾಗೆ 17 ಆವೃತ್ತಿಗಳಲ್ಲಿ ಒಂದೇ ತಂಡದಲ್ಲಿ ಆಡಿದ ಏಕೈಕ ಆಟಗಾರನೆಂಬ ಹೆಗ್ಗಳಿಕೆಗೆ ವಿರಾಟ್​ ಕೊಹ್ಲಿ ಪಾತ್ರರಾಗಿದ್ದಾರೆ. (ಏಜೆನ್ಸೀಸ್​)

    ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ಸೋಲಿಗೆ ಆತನೊಬ್ಬನೇ ಕಾರಣ! ಅಭಿಮಾನಿಗಳಿಂದ ಹಿಡಿಶಾಪ

    IPL 2024: ಎಲಿಮಿನೇಟರ್ ಪಂದ್ಯದಲ್ಲಿ RR ವಿರುದ್ಧ RCB ಸೋಲಿಗೆ 5 ಪ್ರಮುಖ ಕಾರಣಗಳು ಹೀಗಿವೆ…

    ಮಂಜುಮ್ಮೇಲ್​​​ ಬಾಯ್ಸ್​ಗೆ ಶಾಕ್​ ಕೊಟ್ಟ ಇಳಯರಾಜ! ಆದ್ರೆ ನಿಜವಾದ ಟ್ವಿಸ್ಟ್ ಚಿತ್ರದ ಕತೆಯಷ್ಟೇ ರೋಚಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts