More

    ಮುಂಬೈನಲ್ಲಿ ಮೊದಲ ಮಾನ್ಸೂನ್ ಖುಷ್‌ಯಲ್ಲಿರುವ ಕೊಹ್ಲಿಗೆ ವಾರ್ನರ್ ಸ್ಟ್ರೈಟ್‌ಹಿಟ್

    ಮುಂಬೈ: ಮೂರು ತಿಂಗಳಿಂದ ಕ್ರಿಕೆಟ್ ಚಟುವಟಿಕೆಗಳಿಂದ ದೂರ ಉಳಿದಿರುವ ಕ್ರಿಕೆಟಿಗರ ಪಾಲಿಗೆ ಸಾಮಾಜಿಕ ಜಾಲತಾಣವೇ ಪ್ರಮುಖ ಅಸವಾಗಿದೆ. ಪತ್ನಿಯೊಂದಿಗೆ ಮುಂಬೈನಲ್ಲಿ ಲಾಕ್ ಆಗಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಇನ್‌ಸ್ಟಾಗ್ರಾಂ ಮೂಲಕ ಆಗಿಂದಾಗಲೇ ಕಾಣಿಸಿಕೊಳ್ಳುತ್ತಿದ್ದಾರೆ. ಕೊಹ್ಲಿ ಪಾಲಿಗೆ ಮುಂಬೈ ಹೊಸದಲ್ಲ. ಆದರೂ ವಿಶೇಷ ಏನಪ್ಪ ಅಂದರೆ, ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಮುಂಬೈನಲ್ಲಿ ಮಾನ್ಸೂನ್ ಆಸ್ವಾಧಿಸುತ್ತಿದ್ದಾರೆ. ಮನೆಯ ಬಾಲ್ಕನಿಯಲ್ಲಿ ಕುಳಿತು ಪುಸ್ತಕ ಓದುತ್ತಿರುವ ಚಿತ್ರವನ್ನು ಕೊಹ್ಲಿ ಇನ್‌ಸ್ಟಾದಲ್ಲಿ ಪ್ರಕಟಿಸಿದ್ದರು. ಇದಕ್ಕೆ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಕೊಹ್ಲಿ ಕಾಲೆಳೆದಿದ್ದಾರೆ.

    ಇದನ್ನೂ ಓದಿ: 2011ರ ವಿಶ್ವಕಪ್ ಸೇಲಾಗಿತ್ತು ಎಂದು ಆರೋಪಿಸಿದ ಲಂಕಾ ಮಾಜಿ ಸಚಿವ

    ಕೊಹ್ಲಿ ಮನೆಯ ಬಾಲ್ಕನಿಯಲ್ಲಿ ಓದುತ್ತಿರುವ ಫೋಟೋ ಇನ್‌ಸ್ಟಾಗ್ರಾಂನಲ್ಲಿ ಕೇವಲ ಅಭಿಮಾನಿಗಳಿಗೆ ಅಲ್ಲದೆ, ಕ್ರಿಕೆಟಿಗರ ಗಮನಸೆಳೆದಿದೆ. ಕೊಹ್ಲಿ ಅಂತೆಯೇ ಡೇವಿಡ್ ವಾರ್ನರ್ ಸಾಮಾಜಿಕ ಚುಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕೊಹ್ಲಿ ಪ್ರಕಟಿಸಿದ ಚಿತ್ರಕ್ಕೆ ‘ಬಿಳಿ ಗಡ್ಡ ಬಿಟ್ಟಿರುವ ಯುವಕ’ ಎಂದು ಕಾಲೆಳೆದಿದ್ದಾರೆ. ಕೊಹ್ಲಿ ಆರ್‌ಸಿಬಿ ಸಹಪಾಠಿ ಎಬಿ ಡಿವಿಲಿಯರ್ಸ್‌ ‘ಒಳ್ಳೆಯ ಅಭಿರುಚಿ’ ಎಂದು ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: VIDEO: ರಾಹುಲ್ ದ್ರಾವಿಡ್‌ಗೆ ಜಾಮಿ ಎಂದು ಕರೆಯಲು ಕಾರಣ ಗೊತ್ತೇ..?

    ವಿಶ್ವದ ಎಲ್ಲ ಕ್ರಿಕೆಟಿಗರಂತೆ ಕೊಹ್ಲಿ ಕೂಡ ಮನೆಯಲ್ಲೇ ಲಾಕ್ ಆಗಿದ್ದಾರೆ. ದೈಹಿಕ ಕಸರತ್ತು, ಫಿಟ್ನೆಸ್‌ಗೆ ಒತ್ತು ನೀಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದೇ ಅವರ ದೈನಂದಿನ ಕೆಲಸವಾಗಿದೆ. ಮೂಲತಃ ದೆಹಲಿಯವರಾದ ಕೊಹ್ಲಿ ಬೆಂಗಳೂರು ಮೂಲದ ನಟಿ ಅನುಷ್ಕಾ ಶರ್ಮ ಅವರನ್ನು ಮದುವೆಯಾದ ಮೇಲೆ ಮುಂಬೈನಲ್ಲಿ ನೆಲೆಸಿದ್ದಾರೆ.

    ನತಾಶಾಗೆ ಹಾರ್ದಿಕ್ ಪಾಂಡ್ಯ ರೋಮ್ಯಾಂಟಿಕ್ ಗಿಫ್ಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts