More

    ವಿರುಷ್ಕಾ ದಂಪತಿಗಳ ಪ್ರಾಣಿಪ್ರೇಮ : ಮುಂಬೈನಲ್ಲಿ ಬೀದಿ ಪ್ರಾಣಿಗಳಿಗೆ ಆಶ್ರಯ ಕೇಂದ್ರಗಳು

    ಮುಂಬೈ : ಕ್ರಿಕೆಟ್ ಸ್ಟಾರ್ ವಿರಾಟ್​ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿಗಳಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ ಅಂತೆ. ಅಷ್ಟೇ ಅಲ್ಲ, ಬೀದಿನಾಯಿಗಳು ಮತ್ತು ಇತರ ಅನಾಥ ಪ್ರಾಣಿಗಳ ಶುಶ್ರೂಷೆ ಮಾಡಲು ಆಶ್ರಯ ಕೇಂದ್ರವನ್ನು ತೆರೆಯುವುದು ಅನುಷ್ಕಾರ ಕನಸಂತೆ. ಈ ಕನಸನ್ನು ಈಗ ಕೊಹ್ಲಿ ಸಾತ್ಕಾರಗೊಳಿಸಲಿದ್ದಾರೆ.

    ಪ್ರಾಣಿಪ್ರಿಯರು ಮತ್ತು ಸಂರಕ್ಷಕರು ಏಪ್ರಿಲ್ 4 ನೇ ತಾರೀಖನ್ನು ‘ವರ್ಲ್ಡ್ ಸ್ಟ್ರೇ ಅನಿಮಲ್ಸ್ ಡೇ’ ಎಂದು ಆಚರಿಸುತ್ತಾರೆ. ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ, ತಮ್ಮ ಸೇವಾ ಟ್ರಸ್ಟ್​ನಿಂದ ಮುಂಬೈನ ಬೀದಿ ಪ್ರಾಣಿಗಳಿಗೆ ಆಶ್ರಯ ಕೇಂದ್ರಗಳನ್ನು ಸ್ಠಾಪಿಸುವ ತಮ್ಮ ಯೋಜನೆ ಬಗ್ಗೆ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಕೊಹ್ಲಿ, “ಅನುಷ್ಕಾ ತಮ್ಮ ಪ್ರಾಣಿಪ್ರೇಮದಿಂದ ಮತ್ತು ನಿರಂತರ ಪ್ರಾಣಿ ಹಕ್ಕುಗಳ ಸಮರ್ಥನೆ ಮಾಡುವ ಮೂಲಕ ಪ್ರೇರಣೆ ನೀಡಿದ್ದಕ್ಕೆ ಧನ್ಯವಾದ” ಸೂಚಿಸಿದ್ದಾರೆ.

    ಇದನ್ನೂ ಓದಿ: ಬೀದಿಯಲ್ಲಿ ಮಸ್ತ್​ ಡ್ಯಾನ್ಸ್​ ಮಾಡಿದ ನಟಿ ಸುಹಾಸಿನಿ ಹಾಗೂ ಅಕ್ಷರಾ ಹಾಸನ್​

    ವಿರಾಟ್ ಕೊಹ್ಲಿ ಫೌಂಡೇಶನ್ ಮುಂಬೈನ ಮಲಾಡ್ ಮತ್ತು ಬೊಯ್ಸರ್​ನಲ್ಲಿ ಎರಡು ಪ್ರಾಣಿ ಆಶ್ರಯ ಕೇಂದ್ರಗಳನ್ನು ತೆರೆಯಲಿದೆ. ವಿವಾಲ್ಡಿಸ್ ಅನಿಮಲ್​ ಹೆಲ್ತ್​ ಮತ್ತು ಸ್ಥಳೀಯ ಎನ್​ಜಿಒ ಆವಾಜ್​​ನ ಸಹಯೋಗದಲ್ಲಿ ಬೀದಿ ಪ್ರಾಣಿಗಳಿಗೆ ಸುರಕ್ಷಿತವಾದ ಜಾಗವನ್ನು ಒದಗಿಸಿ, ವೈದ್ಯಕೀಯ ಸಹಾಯ ದೊರಕಿಸುವ ಯೋಜನೆ ಕೊಹ್ಲಿ ಅವರದ್ದು.

    ಮಲಾಡ್ ಕೇಂದ್ರವು ತಾತ್ಕಾಲಿಕ ಪುನರ್ವಸತಿ ಕೇಂದ್ರವಾಗಲಿದ್ದು, ಗಾಯಗೊಂಡಿರುವ ಪ್ರಾಣಿಗಳನ್ನು – ಮುಖ್ಯವಾಗಿ ನಾಯಿಗಳು ಮತ್ತು ಬೆಕ್ಕುಗಳು – ಚೇತರಿಸಿಕೊಳ್ಳುವವರೆಗೆ ಇಟ್ಟುಕೊಂಡು ವೈದ್ಯಕೀಯ ಶುಶ್ರೂಷೆ ಮಾಡಲಾಗುವುದು. ಬೋಯಿಸಾರ್‌ನಲ್ಲಿನ ಕೇಂದ್ರವು ಶಾಶ್ವತ ಆಶ್ರಯವಾಗಲಿದ್ದು, ಇಲ್ಲಿ ಕುರುಡು ಪ್ರಾಣಿಗಳು, ಪಾರ್ಶ್ವವಾಯು ಅಥವಾ ಬೇರೆ ಜೀವಿತಾವಧಿಯ ಕಾಯಿಲೆಗಳಿಂದ ಅಥವಾ ವೃದ್ಧಾಪ್ಯದಿಂದ ಬಳಲುತ್ತಿರುವ ಪ್ರಾಣಿಗಳನ್ನು ಕಾಪಾಡಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್)

    ಕರೊನಾದಿಂದಾಗಿ ಮುಂಬೈನ ಐಪಿಎಲ್​ ಪಂದ್ಯಗಳನ್ನು ಬೇರೆಡೆ ನಡೆಸಲಾಗುತ್ತಾ ? ಇಲ್ಲಿದೆ ಉತ್ತರ…

    “ಅಯ್ಯಪ್ಪಸ್ವಾಮಿ ಭಕ್ತರನ್ನು ಲಾಠಿಗಳಿಂದ ಸ್ವಾಗತಿಸಲಾಗಿದೆ” – ಕೇರಳದಲ್ಲಿ ಮೋದಿ

    VIDEO| ಎರಡು ಬೆರಳಲ್ಲಿ 234 ಬುಗುರಿ ತಿರುಗಿಸಿ ಚುನಾವಣಾ ಪ್ರಚಾರ!

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts