More

    ಕಹಳೆ ಊದುತ್ತ ಓವಲ್ ಗೆಲುವನ್ನು ಸಂಭ್ರಮಿಸಿದ ಕೊಹ್ಲಿ! ಇದರ ಅರ್ಥವೇನೆಂದು ಗೊತ್ತೇ?

    ಲಂಡನ್: ಓವಲ್‌ನಲ್ಲಿ ಟೀಮ್ ಇಂಡಿಯಾ 50 ವರ್ಷಗಳ ಬಳಿಕ ಟೆಸ್ಟ್ ಗೆಲುವು ಕಾಣುವುದರೊಂದಿಗೆ ಹಲವು ದಾಖಲೆಗಳನ್ನು ಬರೆದಿದೆ. ನಾಯಕ ವಿರಾಟ್ ಕೊಹ್ಲಿ ಕೂಡ ಹಲವು ದಾಖಲೆಗಳ ಒಡೆಯರಾಗಿದ್ದಾರೆ. ಈ ನಡುವೆ ಅಂತಿಮ ದಿನದಾಟದಲ್ಲಿ ಇಂಗ್ಲೆಂಡ್ ತಂಡದ ಪ್ರತಿ ವಿಕೆಟ್ ಬೀಳುತ್ತ ಭಾರತ ತಂಡ ಗೆಲುವಿಗೆ ಹತ್ತಿರವಾಗುತ್ತಿದ್ದ ಸಮಯದಲ್ಲಿ ವಿರಾಟ್ ಕೊಹ್ಲಿ, ಪ್ರೇಕ್ಷಕರು ಗ್ಯಾಲರಿ ಕಡೆ ಮುಖಮಾಡಿ ಕಹಳೆ ಊದುವ ರೀತಿಯಲ್ಲಿ ಸನ್ನೆ ಮಾಡಿ ಸಂಭ್ರಮಿಸಿದ್ದರು. ಇಂಗ್ಲೆಂಡ್ ತಂಡದ ಅಭಿಮಾನಿ ಬಳಗ ಬಾರ್ಮಿ ಆರ್ಮಿಗೆ ತಿರುಗೇಟು ನೀಡುವುದು ಅವರ ಈ ಸನ್ನೆಯ ಉದ್ದೇಶವಾಗಿತ್ತು ಎನ್ನಲಾಗಿದೆ.

    ಕಳೆದ ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇನಿಂಗ್ಸ್ ಸೋಲು ಕಂಡಿತ್ತು. ಈ ವೇಳೆ ಬಾರ್ಮಿ ಆರ್ಮಿ ಸದಸ್ಯರು ಭಾರತ ತಂಡಕ್ಕೆ ಸಾಕಷ್ಟು ಕಾಟ ಕೊಟ್ಟಿದ್ದರು. ಭಾರತ ತಂಡ ಕೇವಲ 78 ರನ್‌ಗೆ ಕುಸಿತ ಕಂಡ ವೇಳೆ ಇಂಗ್ಲೆಂಡ್ ಪ್ರೇಕ್ಷಕರು, ತಮಾಷೆಯ ಕಾಮೆಂಟ್‌ನೊಂದಿಗೆ ಕಾಲೆಳೆದಿದ್ದರು. ಇದಕ್ಕೆ ಪ್ರತೀಕಾರವಾಗಿ ಕೊಹ್ಲಿ ಕೂಡ ಆ ರೀತಿ ಸಂಭ್ರಮಿಸಿದ್ದರು.

    ಕೊಹ್ಲಿ ಕಹಳೆ ಊದುವ ಸನ್ನೆಯ ಚಿತ್ರವನ್ನು ಬಾರ್ಮಿ ಆರ್ಮಿಯ ಟ್ವಿಟರ್ ಪುಟದಲ್ಲಿ ಪ್ರಕಟಿಸಲಾಗಿದ್ದು, ‘ವಿರಾಟ್ ನಿಮ್ಮ ಸನ್ನೆ ನಮಗೆ ಅರ್ಥವಾಗಿದೆ’ ಎಂದು ಬರೆಯಲಾಗಿದೆ. ಕೊಹ್ಲಿ ಈ ಸಂಭ್ರಮಕ್ಕೆ ಮಿಶ್ರ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ. ಈ ಮುನ್ನ ಲಾರ್ಡ್ಸ್ ಟೆಸ್ಟ್‌ನಲ್ಲೂ ಇಂಗ್ಲೆಂಡ್ ಪ್ರೇಕ್ಷಕರು ಸಿರಾಜ್ ಮೇಲೆ ಪ್ಲಾಸಿಕ್ ಚೆಂಡೊಂದನ್ನು ತೂರಿದ್ದರೆ, ಕೆಎಲ್ ರಾಹುಲ್‌ಗೆ ಬಾಟಲಿಯ ಮುಚ್ಚಳಗಳನ್ನು ಎಸೆದು ತೊಂದರೆ ನೀಡಿದ್ದರು.

    ಏನಿದರ ಅರ್ಥ?
    ಲೀಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ವಿರಾಟ್ ಕೊಹ್ಲಿ ಕೇವಲ 7 ರನ್ ಗಳಿಸಿ ಜೇಮ್ಸ್ ಆಂಡರ್‌ಸನ್‌ಗೆ ವಿಕೆಟ್ ಒಪ್ಪಿಸಿದ್ದರು. ಅವರು ಪೆವಿಲಿಯನ್‌ಗೆ ಮರಳುತ್ತಿದ್ದ ವೇಳೆ ಬಾರ್ಮಿ ಆರ್ಮಿ ಸದಸ್ಯರು, ‘ಚೀರಿಯೋ’ ಹಾಡಿನ ಮೂಲಕ ಛೇಡಿಸಿದ್ದರು. ಇದರ ವಿಡಿಯೋವನ್ನೂ ಬಾರ್ಮಿ ಆರ್ಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ತಮಗೆ ಬಾರ್ಮಿ ಆರ್ಮಿ ನೀಡಿದ್ದ ಈ ಸಂಗೀತಮಯ ಬೀಳ್ಕೊಡುಗೆಗೆ ಪ್ರತಿಕಾರವಾಗಿ ಕೊಹ್ಲಿ ಸಂಗೀತ ವಾದನದ ಸನ್ನೆಯೊಂದಿಗೆ ಸಂಭ್ರಮಿಸಿದ್ದರು ಎನ್ನಲಾಗಿದೆ.

    ಟಿ20 ವಿಶ್ವಕಪ್‌ಗೆ ಅಚ್ಚರಿಗಳ ಪಾಕ್ ತಂಡ ಪ್ರಕಟ, ಭಾರತವನ್ನು ಸೋಲಿಸುತ್ತಾ ಈ ಟೀಮ್?

    ಐಸಿಸಿ ಆಗಸ್ಟ್ ತಿಂಗಳ ಪ್ರಶಸ್ತಿ ರೇಸ್‌ನಲ್ಲಿದ್ದಾರೆ ಬುಮ್ರಾ, ನೀವೂ ಓಟ್ ಮಾಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts