More

    ಸರಣಿ ಸೋಲಿನ ನಡುವೆ ಹಲವು ದಾಖಲೆ ಬರೆದ ವಿರಾಟ್ ಕೊಹ್ಲಿ

    ಸಿಡ್ನಿ: ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ಸೋತು ಸರಣಿ ಬಿಟ್ಟುಕೊಟ್ಟಿತು. ಕೆಟ್ಟ ಬೌಲಿಂಗ್-ಫೀಲ್ಡಿಂಗ್ ನಿರ್ವಹಣೆಯ ನಡುವೆ ಭಾರತ ತಂಡ ಸುಧಾರಿತ ಬ್ಯಾಟಿಂಗ್ ನಿರ್ವಹಣೆ ತೋರಿತು. ನಾಯಕ ವಿರಾಟ್ ಕೊಹ್ಲಿ ಗರಿಷ್ಠ 89 ರನ್ ಸಿಡಿಸಿ ಭಾರತ ತಂಡದ ಪ್ರತಿರೋಧದ ಸಾರಥ್ಯವನ್ನೂ ವಹಿಸಿಕೊಂಡಿದ್ದರು. ಈ ವೇಳೆ ಅವರು ಕೆಲವು ಬ್ಯಾಟಿಂಗ್ ದಾಖಲೆಗಳನ್ನೂ ನಿರ್ಮಿಸಿದರು.

    22 ಸಾವಿರ ರನ್ ಪೂರೈಸಿದ ಕೊಹ್ಲಿ
    ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22 ಸಾವಿರ ರನ್ ಪೂರೈಸಿದ 8ನೇ ಬ್ಯಾಟ್ಸ್‌ಮನ್ ಎನಿಸಿದ್ದಾರೆ. 418ನೇ ಪಂದ್ಯದ 462ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ ಅವರು ಅತಿವೇಗದ ಸಾಧಕ ಎನಿಸಿದ್ದಾರೆ. ಕೊಹ್ಲಿ ಏಕದಿನದಲ್ಲಿ 11,977, ಟೆಸ್ಟ್‌ನಲ್ಲಿ 7,240 ಮತ್ತು ಟಿ20ಯಲ್ಲಿ 2,794 ರನ್ ಗಳಿಸಿದ್ದಾರೆ. ಸಚಿನ್ ತೆಂಡುಲ್ಕರ್ 34,357 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದರೆ, ಕುಮಾರ ಸಂಗಕ್ಕರ (28,016), ರಿಕಿ ಪಾಂಟಿಂಗ್ (27, 483), ಮಹೇಲ ಜಯವರ್ಧನೆ (25,957), ಜಾಕ್ಸ್ ಕಾಲಿಸ್ (25,534), ರಾಹುಲ್ ದ್ರಾವಿಡ್ (24,208) ಮತ್ತು ಬ್ರಿಯಾಲ್ ಲಾರಾ (22,358) ನಂತರದಲ್ಲಿದ್ದಾರೆ.

    ವಿರಾಟ್ ಕೊಹ್ಲಿ ಭಾರತ ಪರ 250 ಏಕದಿನ ಪಂದ್ಯ ಆಡಿದ 9ನೇ ಆಟಗಾರ ಎನಿಸಿದರು. ಸಚಿನ್ ತೆಂಡುಲ್ಕರ್ (463), ಎಂಎಸ್ ಧೋನಿ (350), ರಾಹುಲ್ ದ್ರಾವಿಡ್ (344), ಮೊಹಮದ್ ಅಜರುದ್ದೀನ್ (334), ಸೌರವ್ ಗಂಗೂಲಿ (311), ಯುವರಾಜ್ ಸಿಂಗ್ (304), ಅನಿಲ್ ಕುಂಬ್ಳೆ (271), ವೀರೇಂದ್ರ ಸೆಹ್ವಾಗ್ (251) ಹಿಂದಿನ ಸಾಧಕರು.

    ವಿರಾಟ್ ಕೊಹ್ಲಿ ಏಕದಿನದಲ್ಲಿ ಆಸೀಸ್ ವಿರುದ್ಧ 2 ಸಾವಿರ ರನ್ ಪೂರೈಸಿದ 3ನೇ ಭಾರತೀಯರೆನಿಸಿದರು. ಸಚಿನ್ ತೆಂಡುಲ್ಕರ್ (3077) ಮತ್ತು ರೋಹಿತ್ ಶರ್ಮ (2208) ಮೊದಲಿಬ್ಬರು.

    ಮತ್ತೊಂದೆಡೆ ಸ್ಟೀವನ್ ಸ್ಮಿತ್ ಕೂಡ ಸ್ಫೋಟಕ ಬ್ಯಾಟಿಂಗ್ ವೇಳೆ ಕೆಲ ದಾಖಲೆಗಳನ್ನು ಬರೆದರು. ಸ್ಟೀವನ್ ಸ್ಮಿತ್ ಏಕದಿನ ಕ್ರಿಕೆಟ್‌ನಲ್ಲಿ 11ನೇ ಮತ್ತು ಭಾರತ ವಿರುದ್ಧ 5ನೇ ಮತ್ತು ಸತತ 3ನೇ ಶತಕ ಸಿಡಿಸಿದರು. ಸ್ಟೀವನ್ ಸ್ಮಿತ್ ಭಾರತ ವಿರುದ್ಧ ಸತತ 5 ಪಂದ್ಯಗಳಲ್ಲಿ 50 ಪ್ಲಸ್ ರನ್ ಗಳಿಸಿದ 2ನೇ ಬ್ಯಾಟ್ಸ್‌ಮನ್ ಎನಿಸಿದರು. ಕೇನ್ ವಿಲಿಯಮ್ಸನ್ ಮೊದಲಿಗರಾಗಿದ್ದಾರೆ. ಸ್ಟೀವನ್ ಸ್ಮಿತ್ ಸತತ 2 ಏಕದಿನ ಪಂದ್ಯಗಳಲ್ಲಿ 70ಕ್ಕಿಂತ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ 2ನೇ ಬ್ಯಾಟ್ಸ್‌ಮನ್. ಇಂಗ್ಲೆಂಡ್‌ನ ಜಾನಿ ಬೇರ್‌ಸ್ಟೋ (58, 54 ಎಸೆತ) ಮೊದಲ ಸಾಧಕ. ಸ್ಟೀವನ್ ಸ್ಮಿತ್ (12) ಭಾರತ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2ನೇ ಅತ್ಯಧಿಕ ಶತಕದ ಸಾಧನೆ ಮಾಡಿದರು. ರಿಕಿ ಪಾಂಟಿಂಗ್ 14 ಶತಕ ಸಿಡಿಸಿರುವುದು ಗರಿಷ್ಠ. ವಿವ್ ರಿಚಡ್ಸ್ ಮತ್ತು ಕುಮಾರ ಸಂಗಕ್ಕರ (ತಲಾ 11) ಅವರನ್ನು ಸ್ಮಿತ್ ಹಿಂದಿಕ್ಕಿದರು. ಸ್ಟೀವನ್ ಸ್ಮಿತ್ ಭಾರತ ವಿರುದ್ಧ ಸತತ 3 ಶತಕ ಸಿಡಿಸಿದ 4ನೇ ಬ್ಯಾಟ್ಸ್‌ಮನ್ ಎನಿಸಿದರು. ಪಾಕಿಸ್ತಾನದ ಜಹೀರ್ ಅಬ್ಬಾಸ್, ನಾಸಿರ್ ಜಮ್ಶೆಡ್ ಮತ್ತು ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ಮೊದಲ ಮೂವರು.

    ಭಾರತ ತಂಡ ತಾನಾಡಿದ 978 ಏಕದಿನ ಪಂದ್ಯಗಳ ಪೈಕಿ ಮೊದಲ ಬಾರಿಗೆ ಸತತ 3 ಪಂದ್ಯಗಳಲ್ಲಿ ಮೊದಲ ವಿಕೆಟ್‌ಗೆ ಶತಕದ ಜತೆಯಾಟ ಬಿಟ್ಟುಕೊಟ್ಟಿತು. ಭಾರತ ತಂಡ ಸತತ 5ನೇ ಏಕದಿನ ಪಂದ್ಯದಲ್ಲಿ ಮೊದಲ ಪವರ್‌ಪ್ಲೇಯಲ್ಲಿ ಯಾವುದೇ ವಿಕೆಟ್ ಕಬಳಿಸಲು ವಿಫಲವಾಯಿತು.

    ಆಸ್ಟ್ರೇಲಿಯಾದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳು 50 ಪ್ಲಸ್ ರನ್ ಗಳಿಸಿದ 2ನೇ ದೃಷ್ಟಾಂತ ಇದಾಗಿದೆ. 2013ರಲ್ಲಿ ಭಾರತ ವಿರುದ್ಧವೇ ಜೈಪುರದಲ್ಲಿ ಮೊದಲ ದೃಷ್ಟಾಂತ ದಾಖಲಾಗಿತ್ತು. ಭಾರತ ತಂಡ ಇದೇ ಮೊದಲ ಬಾರಿಗೆ ಸತತ 2 ಪಂದ್ಯಗಳಲ್ಲಿ 370ಕ್ಕಿಂತ ಹೆಚ್ಚಿನ ಮೊತ್ತ ಬಿಟ್ಟುಕೊಟ್ಟಿತು. ಆಸ್ಟ್ರೇಲಿಯಾ ತಂಡ ಸತತ 5ನೇ ಏಕದಿನ ಪಂದ್ಯದಲ್ಲಿ 300ಕ್ಕಿಂತ ಹೆಚ್ಚಿನ ಮೊತ್ತ ಪೇರಿಸಿತು.

    2ನೇ ಏಕದಿನ ಪಂದ್ಯದಲ್ಲೂ ಎಡವಿದ ಭಾರತ, ಸರಣಿ ಗೆದ್ದ ಆಸ್ಟ್ರೇಲಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts